Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.12.2021
Share:

By Village Missionary Movement

Wednesday, 22-Dec-2021

ಧೈನಂದಿನ ಧ್ಯಾನ(Kannada) – 22.12.2021

 

ಭಯಪಡಬೇಡ!

 

"...ಭಯಪಡಬೇಡ; ನಿನ್ನ ವಿಜ್ಞಾಪನೆ ದೇವರಿಗೆ ಮುಟ್ಟಿತು;..." - ಲೂಕ 1:13

 

ಕ್ರಿಸ್‌ಮಸ್‌ ಹಬ್ಬವು ಸಮೀಪಿಸುತ್ತಿರುವ ಸಂತೋಷವು ನಮ್ಮ ಹೃದಯದಲ್ಲಿ ಅಪಾರವಾಗಿದ್ದರೆ, ಜೀವನದಲ್ಲಿ ಯಾವಾಗಲೂ ನಮಗೆ ಹತ್ತಿರವಿರುವ ಕೆಲವು ವಿಷಯಗಳ ಭಯವು ನಮ್ಮನ್ನು ಅಂಚುಗಳಿಗೆ ಅಂಟಿಕೊಳ್ಳುವಂತೆ ಮಾಡುತ್ತಿದೆ. ಈ ದಿನದ ಕ್ರಿಸ್ಮಸ್ ಸಂದೇಶದಲ್ಲಿ, "ಭಯಪಡಬೇಡ" ಎಂಬ ದೇವರ ಆಜ್ಞೆಯನ್ನು ಧ್ಯಾನಿಸುವುದು ಸೂಕ್ತವಾಗಿರುತ್ತದೆ.

 

"ಜಕರೀಯಾ, ಭಯಪಡಬೇಡ; ನಿನ್ನ ವಿಜ್ಞಾಪನೆ ದೇವರಿಗೆ ಮುಟ್ಟಿತು" (ಲೂಕ 1:13). ತಮಗೊಂದು ಮಗು ಬೇಕು ಎಂದು ಜಕರೀಯನು ಹಲವು ವರ್ಷಗಳಿಂದ ಪ್ರಾರ್ಥಿಸಿರುತ್ತಾರೆ. ಆದರೆ ಯೇಸು ಕ್ರಿಸ್ತನು ಹುಟ್ಟುವ 6 ತಿಂಗಳ ಮುಂಚೆ ಸ್ನಾನಿಕನಾದ ಯೋಹಾನನು ಕ್ರಿಸ್ತನಿಗೆ ದಾರಿಯನ್ನು ಸಿದ್ಧ ಮಾಡಬೇಕೆಂಬುದು ತಂದೆಯ ಚಿತ್ತವಾಗಿತ್ತು. ಹಾಗಾಗಿ ಉತ್ತರ ತಡವಾಯಿತು. ಇಂದು ನಿಮ್ಮ ಕೆಲವು ಪ್ರಾರ್ಥನೆಗಳಿಗೆ ಉತ್ತರ ಸಿಗಲು ತಡವಾಗುವುದರಿಂದ, ನಿಮ್ಮ ಮೊಣಕಾಲುಗಳು ಒಂದು ವೇಳೆ ಸೋತು ಹೋಗಿರಬಹುದು. ಪ್ರಿಯರೇ! ಭಯಪಡಬೇಡಿರಿ! ದೇವರ ವಿಳಂಬವು "ಇಲ್ಲ" ಎಂದಲ್ಲ. ಅವರು ತಡಮಾಡಿದರೂ ಉತ್ತಮವಾದದ್ದನ್ನು ಕೊಡುತ್ತಾರೆ.

 

"ಮರಿಯಳೇ, ಹೆದರಬೇಡ; ನಿನಗೆ ದೇವರ ದಯೆ ದೊರಕಿತು" (ಲೂಕ 1:30) ಯಾರು ದಯೆ ಹೊಂದಬಹುದು? ತಾಳ್ಮೆಯುಳ್ಳವರು ಮಾತ್ರ! ಎಷ್ಟೇ ಖರ್ಚು ಮಾಡಿದರೂ ಎಲ್ಲಿಯೂ ಕೊಳ್ಳಲಾಗದ ಕೃಪೆಯನ್ನು ಮರಿಯಳು ಉಚಿತವಾಗಿ ಪಡೆದಿದ್ದಳು. ಮರಿಯಳನ್ನು ಸಾಮಾನ್ಯವಾದ ಬಡಗಿಗೆ ನಿಯೋಜಿಸಿದ್ದರೆ, ಅವಳು ಸರಳ ಕುಟುಂಬಕ್ಕೆ ಸೇರಿದವಳೇ! ಲೋಕ ರಕ್ಷಕನನ್ನು ಹೆರಲು ದೇವರು ಅವಳನ್ನು ಆರಿಸಿಕೊಳ್ಳಲು ಕಾರಣವೇನು? ಸಾವಿರಾರು ಯೆಹೂದ್ಯ ಕನ್ಯೆಯರ ನಡುವೆ, ಮರಿಯಳ ಹೃದಯದಲ್ಲಿ ಅಡಗಿದ್ದ ತಾಳ್ಮೆ, ದೇವರ ನೋಟವನ್ನು ಅವಳ ಕಡೆಗೆ ತಿರುಗಿಸಿತು. ಇಂದು ನಿಮ್ಮ ಕುಗ್ಗಿದ, ಬಡ ಸ್ಥಿತಿಯ ಬಗ್ಗೆ ದುಃಖಿಸುತ್ತಿದ್ದೀರಾ? ಮರಿಯಳಂತೆ ತಾಳ್ಮೆಯಿಂದಿರಿ, ನಿಮಗೂ ಉನ್ನತಿ ಹತ್ತಿರದಲ್ಲಿದೆ.

 

"ಕುರುಬರೇ, ಹೆದರಬೇಡಿರಿ.... ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ" (ಲೂಕ 2:10). ದೇವದೂತರ ಈ ಮಾತುಗಳನ್ನು ಕುರುಬರು ಕೇಳಿದಾಗ ರಾತ್ರಿಯಾಗಿತ್ತು! ರಾತ್ರಿ ಎಂಬುದು ಏನೂ ಮಾಡಲು ಸಾಧ್ಯವಿಲ್ಲದ ಸಮಯ! ಅಂತಾ ಸಮಯದಲ್ಲಿ ಶುಭಸಮಾಚಾರವನ್ನು ಸಾರಲಾಗುತ್ತಿದೆ. ಇಂದು ನಿಮ್ಮ ಜೀವನ ಕತ್ತಲೆಯಾಗಿ ಕಾಣುತ್ತಿದೆಯಾ? ಯಾವ ದಾರಿಯಲ್ಲಿ ಹೋಗಬೇಕು, ಎಲ್ಲಿಗೆ ಹೋಗಬೇಕು ಎಂಬ ಗೊಂದಲದಲ್ಲಿದ್ದೀರಾ? ಭಯ ಪಡಬೇಡಿರಿ. ನಿಮ್ಮ ಜೀವನವನ್ನು ಬೆಳಗಿಸಲು ಯೇಸು ಕ್ರಿಸ್ತನು ಇದ್ದಾರೆ. ಒಂದೊಂದು ದಿನವೂ ಆತನ ಮುಖ ದರ್ಶನವನ್ನು ಪಡೆದರೆ ನಿಮ್ಮ ಮುಖವು ಪ್ರಕಾಶವಾಗಿರುತ್ತದೆ."ಭಯಪಡಬೇಡ; ನಾನೇ ನಿನಗೆ ಸಹಾಯಕನು” (ಯೆಶಾಯ 41:14)

- S. ಜಯಕುಮಾರಿ

 

ಪ್ರಾರ್ಥನಾ ಅಂಶ:

ಒಂದು ಗ್ರಾಮದಲ್ಲಿ ಕ್ರಿಸ್ಮಸ್ ನ ವಿಶೇಷ ಸೇವೆಗಳನ್ನು ನಡೆಸಲು ರೂ.5000 ಬೇಕಾಗುತ್ತದೆ ಇದಕ್ಕಾಗಿ ಸಹಾಯ ಮಾಡುವ ಹೃದಯಗಳು ಎದ್ದೇಳುವಂತೆ ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin