Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.12.2021
Share:

By Village Missionary Movement

Tuesday, 21-Dec-2021

ಧೈನಂದಿನ ಧ್ಯಾನ(Kannada) – 21.12.2021

 

ಅಲಂಕರಿಸಿದ ಮನೆ

 

"...ಯೇಸು ಆ ಸ್ಥಳಕ್ಕೆ ಬಂದು ಮೇಲಕ್ಕೆ ನೋಡಿ ಅವನನ್ನು ಕಂಡು ಅವನಿಗೆ--ಜಕ್ಕಾಯನೇ, ತ್ವರೆಯಾಗಿ ಇಳಿದು ಬಾ; ಯಾಕಂದರೆ ಈ ದಿನ ನಾನು ನಿನ್ನ ಮನೆಯಲ್ಲಿ ಇರತಕ್ಕದ್ದಾಗಿದೆ ಅಂದನು." - ಲೂಕ 19:5

 

ಸುಂದರವಾದ ಒಂದು ದೊಡ್ಡ ಮನೆ, ಅಂದು ತುಂಬಾ ಉದ್ವಿಗ್ನವಾಗಿತ್ತು. ಪ್ರತಿ ವ್ಯಕ್ತಿ ಒಂದೊಂದು ಕೆಲಸವನ್ನು ತುಂಬಾ ಆಸಕ್ತಿಯಿಂದ ಮಾಡುತ್ತಿದ್ದರು. ಒಂದು ಕಡೆ ಅಲಂಕಾರಿಕ ದೀಪಗಳಿಂದ ಮನೆಯನ್ನು ಅಲಂಕರಿಸಲಾಗಿತ್ತು. ಒಂದೆಡೆ ಮನೆಯ ಸ್ವಚ್ಛತೆ ಸುಸೂತ್ರವಾಗಿ ನಡೆಯುತ್ತಿತ್ತು, ಅಡುಗೆ ಮನೆಯಲ್ಲಿ ಅಡುಗೆ ಕೆಲಸ ಬಿರುಸಿನಿಂದ ನಡೆಯುತ್ತಿತ್ತು. ಇಷ್ಟಕ್ಕೂ ಏನಂತಾ ಮುಖ್ಯವಾದ ಕಾರ್ಯಕ್ರಮ?

 

ಆ ಮನೆಯ ಮುದ್ದಿನ ಮಗನಿಗೆ ಇದು ಮೊದಲ ಹುಟ್ಟುಹಬ್ಬ, ಅದಕ್ಕಾಗಿಯೇ ಈ ಆರ್ಭಟವಾದ ಸಿದ್ದತೆ. ಅಪ್ಪ ಕಿವಿಯಿಂದ ಫೋನ್ ಅನ್ನು ತೆಗೆಯಲು ಸಮಯವಿಲ್ಲದೆ ಎಲ್ಲರೊಂದಿಗೆ ಮಾತನಾಡುತ್ತಲೇ ಇದ್ದರು. ಎಲ್ಲರೂ ಅವರವರ ಕೆಲಸಗಳನ್ನು ಮಾಡಿಕೊಳ್ಳುತ್ತಾ ಬೆಳಗ್ಗಿನಿಂದ ಮಗುವಿಗೆ ಹಾಲುಣಿಸಲು ಮರೆತು ಹೋದರು.ಬಾಯಿತೆರೆದು ಕೇಳಲು ತಿಳಿಯದ ಬಾಲಕನು ಎಲ್ಲರ ಮುಖವನ್ನು ತವಕದಿಂದ ನೋಡಿದನು. ಅಲಂಕಾರಿಕ ಮನೆ, ಎತ್ತರವಾದ ಕೇಕ್ ಮತ್ತು ರುಚಿ ರುಚಿಯಾದ ಅಡುಗೆಗಳೊಂದಿಗೆ ಸಂಜೆಯ ಕಾರ್ಯಕ್ರಮ ಪ್ರಾರಂಭವಾಯಿತು. ಬಂದವರೆಲ್ಲರೂ ಮಗುವಿಗೆ ಒಡವೆಗಳನ್ನು, ಹೊಸ ಬಟ್ಟೆಗಳನ್ನು, ಬೆಲೆ ಬಾಳುವ ಉಡುಗೊರೆಗಳನ್ನು ಕೊಟ್ಟು ಬೆರಗಾಗುವಂತೆ ಮಾಡಿದರು. ಕೇಕ್ ಕತ್ತರಿಸುವ ಸಮಯದಲ್ಲಿ ಮಗು ಹಸಿವಿನಿಂದ ಪ್ರಜ್ಞೆ ತಪ್ಪಿತು. ಆಗ ಪೋಷಕರಿಗೆ ಮಗುವಿಗೆ ಹಾಲುಣಿಸದಿರುವ ವಿಷಯ ನೆನಪಾಯಿತು.

 

ಹೌದು, ಸಹೋದರ ಸಹೋದರಿಯರೇ! ಕ್ರಿಸ್‌ಮಸ್‌ ಹಬ್ಬಕ್ಕೆ ಬಹಳ ಉತ್ಸಾಹವಾಗಿ ಸಿದ್ಧವಾಗುತ್ತಿರುವ ನಮಗೇ ಈ ಸಂದೇಶ! ಕ್ರಿಸ್ಮಸ್ ಅಲಂಕಾರ, ಹೊಸಬಟ್ಟೆ, ಗುಡಿಸಲು, ಮಿನುಗುವ ನಕ್ಷತ್ರ, ಮಿನುಗುವ ದೀಪಗಳು ಎಲ್ಲವೂ ಸುಂದರವಾಗಿರುತ್ತವೆ. ಆದರೆ ಕ್ರಿಸ್‌ಮಸ್‌ನಲ್ಲಿ ಪ್ರಮುಖ ವ್ಯಕ್ತಿ ಯೇಸು ಕ್ರಿಸ್ತನು. ಅವರು ನಿಮ್ಮ ಮನೆಯಲ್ಲಿ (ಹೃದಯದಲ್ಲಿ) ಇದ್ದಾರಾ? ಅವರಿಗೆ ಸರಿಬೀಳುವ ಅಲಂಕಾರ ಪವಿತ್ರತೆ, ಪ್ರೀತಿ, ಸಂತೋಷ ಮತ್ತು ಸಮಾಧಾನ ನಮ್ಮಲ್ಲಿದೆಯೇ? ಅವರು ನಮ್ಮೊಂದಿಗೆ ನೆಲೆಸಿದ್ದಾರ?

 

ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟಮಾಡುವೆನು, ಅವನು ನನ್ನ ಸಂಗಡ ಊಟಮಾಡುವನು. (ಪ್ರಕಟನೆ 3:20). ಯಾವ ರೀತಿ ಸುಂಕದವನಾದ ಜಕ್ಕಾಯನು ಯೇಸುವನ್ನು ತನ್ನ ಮನೆಗೆ ಆಹ್ವಾನಿಸಿ ರಕ್ಷಣೆಯನ್ನು ಪಡೆದುಕೊಂಡನೋ, ಹಾಗೆಯೇ ನಾವು ಕೂಡ ಕ್ರಿಸ್ತನನ್ನು ನಮ್ಮ ಮನದಲ್ಲಿ ಮತ್ತು ನಮ್ಮ ಮನೆಯಲ್ಲಿ ಕೊಂಡಾಡೋಣ. ಕ್ರಿಸ್‌ಮಸ್ ಮಾತ್ರವಲ್ಲ ಪ್ರತಿದಿನವೂ ನಮಗೆ ಕೊಂಡಾಟವೇ. 

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ಕತ್ತೆ ಮಾರ್ಗದರ್ಶಿ ಎಂಬ ಪತ್ರಿಕೆಯನ್ನು ಪಡೆದುಕೊಳ್ಳುವ ಸೇವಕರು ದೇವರ ಕೈಯಲ್ಲಿ ಹರಿತವಾದ ಸಾಧನವಾಗಿ ಉಪಯೋಗವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş