By Village Missionary Movement
Tuesday, 12-Jan-2021ಧೈನಂದಿನ ಧ್ಯಾನ(Kannada) – 12.01.2021
ನೋವುಗಳಲ್ಲಿ ಸಂತೋಷ
"ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು" - ಮಾರ್ಕನು 13:10
ಸಾಧು ಸುಂದರ್ ಸಿಂಗ್ ರವರು ಅನೇಕ ಗ್ರಾಮಗಳಿಗೆ ಹೋಗಿ ಯೇಸುಕ್ರಿಸ್ತನ ನಾಮ ಮಹತ್ವದ ಬಗ್ಗೆ ಪ್ರಕಟಿಸಿದರ ನಿಮಿತ್ತವಾಗಿ ಅನೇಕ ಜನರು ಯೇಸುವನ್ನು ಅಂಗೀಕರಿಸಿದರು. ದೇವರು ಸುಂದರ್ ಸಿಂಗ್ ರವರನ್ನು ಬಲವಾಗಿ ಉಪಯೋಗಿಸಿದರು. ಸುವಾರ್ತೆಯ ನಿಮಿತ್ತವಾಗಿ ಹೋರಾಟಗಳು ಬರುವಾಗ, ಅವರು ಸಂತೋಷದಿಂದಲೂ, ತಾಳ್ಮೆಯಿಂದಲೂ ಇರುವುದನ್ನು ಕಂಡ ಅನೇಕರು ಅವರ ಸುವಾರ್ತೆಯನ್ನು ಅಂಗೀಕರಿಸಲು ಮುಂದೆ ಬಂದರು. ಒಂದು ಬಾರಿ ಒಂದು ಗ್ರಾಮಕ್ಕೆ ಹೋಗಿ ಅಲ್ಲಿದ್ದ ಮರದ ಕೆಳಗೆ ಕುಳಿತು ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಅತಿ ಶೀಘ್ರವಾಗಿ ಒಂದು ದೊಡ್ಡ ಗುಂಪು ಸೇರಿಬಿಟ್ಟಿತು. ಆದರೆ ಅವರು ಯೇಸುಕ್ರಿಸ್ತನ ಬಗ್ಗೆ ಅಲ್ಲಿ ಮಾತಾಡುವುದನ್ನು ಕೇಳಿದ ಕೂಡಲೇ ಆ ಗುಂಪು ಅವರ ಮೇಲೆ ಕೋಪಗೊಂಡಿತು. ಅದರಲ್ಲಿ ಒಬ್ಬ ವ್ಯಕ್ತಿ ಬಹಳ ಮೂರ್ಖವಾಗಿ, ಸಾಧುರವರನ್ನು ಬಲವಾಗಿ ಹೊಡೆದಿದ್ದರಿಂದ ಅವರ ಶರೀರವೆಲ್ಲಾ ಗಾಯ, ಮುಖದಿಂದ ರಕ್ತ ಸುರಿಯಲು ಪ್ರಾರಂಭಿಸಿತು. ಇಷ್ಟೊಂದು ಅವಮಾನಗಳನ್ನು ಅವರು ಸಹಿಸಿಕೊಂಡು ಎದ್ದು ಬಹಳ ಶಾಂತವಾಗಿ ಆ ಜನರ ಕ್ಷಮಾಪಣೆಗಾಗಿ ಪ್ರಾರ್ಥನೆ ಮಾಡಿಬಿಟ್ಟು, ಮತ್ತೆ ದೇವರ ಪ್ರೀತಿಯ ಬಗ್ಗೆ ಹೇಳಲು ಪ್ರಾರಂಭಿಸಿದರು. ಇದನ್ನು ಕಂಡ ಅನೇಕರು ಕ್ರಿಸ್ತನನ್ನು ನಂಬಲು ಪ್ರಾರಂಭಿಸಿದರು.
ನಾವು ಸತ್ಯವೇದದಲ್ಲಿ ನೋಡುವಾಗ ಅಪೊಸ್ತಲ 5ನೇ ಅಧ್ಯಾಯದಲ್ಲಿ ಅಪೊಸ್ತಲರು ಕರ್ತನಾದ ಯೇಸುಕ್ರಿಸ್ತನ ಬಗ್ಗೆ ಪ್ರಕಟಿಸಿದರ ಮೂಲಕವಾಗಿ ಹೇರಳವಾದ ಪುರುಷರು ಸ್ತ್ರೀಯರು ನಂಬಿಕೆಯುಳ್ಳವರಾಗಿ ಕರ್ತನ ಬಳಿಗೆ ಸೇರಿಸಲ್ಪಟ್ಟರು ಎಂದು ಓದುತ್ತೇವೆ. ಹಾಗೂ ಪ್ರಧಾನ ಯಾಜಕರು ಅಪೊಸ್ತಲರನ್ನು ಬರಮಾಡಿ, ಹೊಡೆದು, ಯೇಸುವಿನ ನಾಮದ ಬಗ್ಗೆ ಮಾತಾಡಬಾರದೆಂದು ಆಜ್ಞೆ ಕೊಟ್ಟರು. ಅವರು ಅವಮಾನ ಪಡಿಸಡಿಸಲ್ಪಟ್ಟಾಗ ಅದನ್ನು ಅವರು ಸಂತೋಷವಾಗಿ ಅಂಗೀಕರಿಸಿ ಆಲೋಚನಾ ಸಭೆಯನ್ನು ಬಿಟ್ಟು ಹೊರಟು ಹೋಗಿ, ದಿನನಿತ್ಯವೂ ದೇವಾಲಯದಲ್ಲಿಯೂ ಮನೆಗಳಲ್ಲಿಯೂ ಎಡಬಿಡದೆ ಉಪದೇಶ ಮಾಡುತ್ತಾ, ಯೇಸುವೇ ಕ್ರಿಸ್ತನೆಂದು ಪ್ರಸಂಗ ಮಾಡಿದರು. ಇದರ ನಿಮಿತ್ತವಾಗಿ ಅನೇಕರು ಯೇಸುವನ್ನು ತನ್ನ ಸ್ವಂತ ರಕ್ಷಕನನ್ನಾಗಿ ಅಂಗೀಕರಿಸಿದರು.
ಪ್ರಿಯರೇ!ನಮ್ಮನ್ನು ವೇದನೆ ಪಡಿಸುವ ಮನುಷ್ಯರು ರಕ್ಷಣೆ ಹೊಂದಬೇಕೆಂದು ಪ್ರಯಾಸ ಪಡುತ್ತಿದ್ದೇವಾ? ಅವರಿಗಾಗಿ ಪ್ರಾರ್ಥಿಸುತ್ತಿದ್ದೇವಾ? ಎಲ್ಲಾ ಮನುಷ್ಯರು ರಕ್ಷಣೆ ಹೊಂದಲು, ಸತ್ಯವನ್ನು ತಿಳಿದುಕೊಳ್ಳುವಂತಹ ತಿಳುವಳಿಕೆಯನ್ನು ಹೊಂದಿಕೊಳ್ಳಲು, ಅವರ ಚಿತ್ತವಾಗಿದೆ ಎಂದು 1 ತಿಮೊಥೆ 2:4 ರಲ್ಲಿ ಬರೆಯಲ್ಪಟ್ಟಿದೆಯೇ! ಸಾಧು ಸುಂದರ್ ಸಿಂಗ್ ನಂತೆ, ಅಪೊಸ್ತಲರಂತೆ, ಜೀವನದಲ್ಲಿ ಬರುವ ನೋವುಗಳನ್ನು ಸಂತೋಷದಿಂದ ಅಂಗೀಕರಿಸಿ, ಮತ್ತೊಬ್ಬರಿಗೆ ಯೇಸುಕ್ರಿಸ್ತನ ಬಗ್ಗೆ ಹೇಳೋಣ. ಖಂಡಿತವಾಗಿ ಕರ್ತನು ನಿಮ್ಮನ್ನು ಆಶೀರ್ವದಿಸುತ್ತಾರೆ. ಆಮೆನ್.
- P. ಸ್ಟೀವ್ ಮ್ಯಾಥ್ಯೂ
ಪ್ರಾರ್ಥನಾ ಅಂಶ:-
"ಪ್ರಾರ್ಥನಾ ಗುಡಾರ" ಕಟ್ಟಡ ಕೆಲಸದ ಆರ್ಥಿಕವಾದ ಅವಶ್ಯಕತೆಗಳು ಸಂಧಿಸಲ್ಪಡಲುಪ್ರಾರ್ಥಿಸಿರಿ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482