Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.12.2021
Share:

By Village Missionary Movement

Monday, 20-Dec-2021

ಧೈನಂದಿನ ಧ್ಯಾನ(Kannada) – 20.12.2021

 

ಅನುಭವಿಸಿರಿ! ತಿಳಿಸಿರಿ !!

 

"ಅದನ್ನು ನೋಡಿದಾಗ ಅವರು ಆ ಮಗುವಿನ ವಿಷಯದಲ್ಲಿ ತಮಗೆ ಹೇಳಿದ್ದ ಮಾತನ್ನು ತಿಳಿಯಪಡಿಸಿದರು” - ಲೂಕ 2:17

 

ಪ್ರಪಂಚದ ಪ್ರತಿಯೊಬ್ಬ ಮನುಷ್ಯನು ತನ್ನ ಕಿವಿಗಳಿಂದ ಅನೇಕ ಸಂದೇಶಗಳನ್ನು ಕೇಳುತ್ತಾನೆ. ಕೇಳುವುದು ಒಳ್ಳೆಯದೋ, ಕೆಟ್ಟದ್ದೋ ಆದರೆ ಅವರು ಅದನ್ನು ಹೇಗಾದರೂ ನೋಡಬೇಕು, ಅಂದರೆ ತಮ್ಮ ಸ್ವಂತ ಅನುಭವದಲ್ಲಿ ಅದನ್ನು ಅನುಭವಿಸಲು ಉತ್ಸಾಹದಿಂದ ಇದ್ದಾರೆ. ಮೂರನೆಯದಾಗಿ ಒಂದು ವಿಷಯ ನಡೆಯುತ್ತದೆ ಅದೇ ತಿಳಿಸುವುದು! ಅಂದರೆ ಇತರರೊಂದಿಗೆ ಹಂಚಿಕೊಳ್ಳುವುದು! ಇದು ಇಂದಿನ ಸಾಮಾಜಿಕ ಮಾಧ್ಯಮದಲ್ಲಿ (social media) ಪ್ರಮುಖ ಪಾತ್ರ ವಹಿಸುತ್ತಿದೆ. ಅವರಿಗೆ ಉಪಯುಕ್ತವಾಗಿರುವ ಸಂದೇಶವನ್ನು ಅನೇಕರಿಗೆ share ಮಾಡಿಬಿಡಬೇಕೆಂಬುದರಲ್ಲಿ ಗುರಿಯಾಗಿದ್ದಾರೆ. Social media ಗಳ ಮೂಲಕ ಎಲ್ಲೋ ಒಂದು ಮೂಲೆಯಲ್ಲಿ ತೆಗೆದ ಪೋಸ್ಟ್‌ಗಳು ಪ್ರಪಂಚದಾದ್ಯಂತ ವೈರಲ್ ಆಗುತ್ತಿವೆ.

 

ಪರಿಶುದ್ಧ ಗ್ರಂಥದ ಲೂಕ 2 ನೇ ಅಧ್ಯಾಯದಲ್ಲಿ, ದೇವದೂತರು ಕುರುಬರಿಗೆ ಯೇಸುಕ್ರಿಸ್ತನ ಜನನವನ್ನು ತಿಳಿಸುತ್ತಾರೆ. ಕುರುಬರು ಅದನ್ನು ಗಮನವಿಟ್ಟು ಆಲಿಸಿದರು. ಕೇಳಿದ ನಂತರ ಕುರುಬರು ತಮ್ಮೊಳಗೆ ಮಾತಾಡಿ, ಆಲೋಚನೆ ಮಾಡುತ್ತಾರೆ. ತಡಮಾಡದೆ, ಕಠಿಣ ಚಳಿಗಾಲವೆಂದೂ ನೋಡದೆ, ತೀವ್ರವಾಗಿ ಹೋಗಿ ಮರಿಯ, ಯೋಸೆಫ, ಮತ್ತು ಯೇಸುಕ್ರಿಸ್ತರನ್ನು ನೋಡಿದರು. ನಂತರ ಅವರು ಮಾಡಿದ ಪ್ರಮುಖ ಕೆಲಸ. ಅವರು ಕೇಳಿದ್ದನ್ನು ಮತ್ತು ನೋಡಿದ್ದನ್ನು ತಿಳಿಯಪಡಿಸಿದರು. ಎಂತಹಾ ಒಂದು ಮಾದರಿ! ಕೇಳಿದ ಎಲ್ಲರೂ ಆಶ್ಚರ್ಯಪಡುವ ಮಟ್ಟಕ್ಕೆ ಕುರುಬರು ಯೇಸುವಿನ ಜನನವನ್ನು share ಮಾಡಿದರು.

 

ಸ್ನೇಹಿತರೇ! ಇಂದು ನಮ್ಮ ಪರಿಸ್ಥಿತಿ ಏನು? ದೇವರನ್ನು ದೇವರ ಕುರಿತ ಕಾರ್ಯಗಳನ್ನು ಕುತೂಹಲವಾಗಿ ಕೇಳುತ್ತೇವೆಯೇ? ಅದರ ನಂತರ ಅದನ್ನು ನಾನು ಕೂಡ ಅನುಭವಿಸಬೇಕು ಎಂದು ಯೋಚಿಸುತ್ತೇವಾ? ಅಥವಾ ಬಿಟ್ಟುಬಿಡುತ್ತೇವಾ? ಮೂರನೆಯದಾಗಿ, ಅದನ್ನು ಇತರರಿಗೆ ತಿಳಿಸಲು ಯಾವ ಮಟ್ಟಕ್ಕೆ ನಾವು ತ್ವರಿತವಾಗಿದ್ದೇವೆ. ಇದನ್ನು ಬರೆಯುವಾಗ, ದೇವರ ಸೇವಕ ಎಮಿಲ್ ಜೆಬಸಿಂಗ್ ರವರು ಹೇಳಿದ ಮಾತು ನನ್ನ ನೆನಪಿಗೆ ಬರುತ್ತಿದೆ, “ಯೇಸುವನ್ನು ತಿಳಿದುಕೊಳ್ಳಬೇಕು, ಅನುಭವಿಸಬೇಕು ಮತ್ತು ತಿಳಿಸಬೇಕು” ಹೌದು, ನಮ್ಮ ಕೈಗಳಲ್ಲಿ ಸ್ಮಾರ್ಟ್‌ಫೋನ್‌ ಎಂಬ ಜಗತ್ತನ್ನೇ ಇಟ್ಟುಕೊಂಡಿದ್ದೇವೆ. ಅದರಲ್ಲಿ ಸಮಯವನ್ನು ವ್ಯರ್ಥ ಮಾಡುವ ಬದಲು, ದೇವರ ಕಾರ್ಯಗಳ ಬಗ್ಗೆ ಮತ್ತೊಬ್ಬರಿಗೆ ಹೆಚ್ಚಾಗಿ Share ಮಾಡೋಣ. ಪ್ರಪಂಚದ ಮೂಲೆ ಮೂಲೆಯಲ್ಲಿ ಯೇಸುವಿನ ಕುರಿತಾದ ವಿಷಯಗಳನ್ನು ವೈರಲ್ ಮಾಡುವ ಜವಾಬ್ದಾರಿ ನಮ್ಮ ಕೈಗಳಲ್ಲೇ ಇದೆ. ಇದನ್ನು ಗ್ರಹಿಸಿ ಕಾರ್ಯ ಮಾಡೋಣ! ಈ ಲೋಕವನ್ನು ಯೇಸುವಿಗೆ ಸ್ವಂತವಾಗಿ ಮಾರ್ಪಡಿಸೋಣ!

- T. ಶಂಕರರಾಜ್

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಸೇರಿ ಸೇವೆ ಮಾಡುವ ಸಹ ಮಿಷನರಿಗಳನ್ನು ಕಾರ್ಯಸ್ಥಳ ಗಳಲ್ಲಿ ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş