By Village Missionary Movement
Sunday, 19-Dec-2021ಧೈನಂದಿನ ಧ್ಯಾನ(Kannada) – 19.12.2021 (Kids Special)
ದೇವರು ಬಯಸುವ ಕ್ರಿಸ್ಮಸ್
“ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಹಳೆಯವುಗಳು ಅಳಿದುಹೋದವು; ಇಗೋ, ಎಲ್ಲವೂ ನೂತನವಾದವು” - 2 ಕೊರಿಂಥದವರಿಗೆ 5:17
Hello ಪುಟಾಣಿಗಳೇ, ಕ್ರಿಸ್ಮಸ್ - ಗೆ ಕೇವಲ 5 ದಿನಗಳು ಮಾತ್ರ ಉಳಿದಿವೆ. ಜಾಲಿ ತಾನೇ! X-mas ಅನ್ನು ಎಲ್ಲರೂ ಆಚರಿಸಬಹುದು. ಆದರೆ ಇದು Jesus ಬಯಸುವ X-mas ಆಗಿರಬೇಕು. ಹೌದು ತಾನೇ! ಸರಿ ಇಂದು ಒಂದು ಚಿಟ್ಟೆಯ ಕಥೆಯನ್ನು ಕೇಳೋಣವಾ?
ವರ್ಣರಂಜಿತವಾಗಿ ಸುಂದರವಾಗಿ ಹಾರುವ ಚಿಟ್ಟೆಯನ್ನು ಎಲ್ಲರೂ ಸಂತೋಷದಿಂದ ನೋಡುತ್ತಾರೆ ಅಲ್ವಾ? ನೀವು ಕೂಡ ಚಿಟ್ಟೆಯನ್ನು ಹಿಡಿದು ಅದರೊಂದಿಗೆ ಆಟವಾಡಿರುತ್ತೀರಿ ತಾನೇ! ಒಂದು ಚಿಟ್ಟೆಗೆ ಎಲ್ಲರೂ ತಮ್ಮ ಮನಸ್ಸಿನಲ್ಲಿ ಯೋಚಿಸುವುದನ್ನೆಲ್ಲಾ ಕೇಳುವ ವರ ಸಿಕ್ಕಿತಂತೆ. ಮುಂಜಾನೆ, ಕೋಳಿ ಕೂಗುವ ಶಬ್ದ ಕೇಳಿ ಎಚ್ಚರವಾದ ಚಿಟ್ಟೆ ಕ್ರಿಸ್ಮಸ್ ಆರಾಧನೆಯಲ್ಲಿ ಅಬ್ರಹಾಂ ಎಂಬ ತಮ್ಮನ ಪಕ್ಕದಲ್ಲಿ ಇತ್ತಂತೆ. ಆರಾಧನೆ ಮುಗಿದ ಕೂಡಲೇ ವಿವಿಧ ಪಟಾಕಿಗಳನ್ನು ಹೊಡೆದು ತನ್ನ ಸ್ನೇಹಿತರೊಂದಿಗೆ ಸೇರಿ ಜಾಲಿಯಾಗಿರಲು ಬಯಸಿದನಂತೆ ಅಬ್ರಹಾಂ. ‘ಇವನ ಮನಸ್ಸು ತುಂಬಾ ಪಟಾಕಿಗಳೇ ಇವೆ" ಎಂದು ಯೋಚಿಸುತ್ತಾ ಮೇರಿ ಹತ್ತಿರ ಬಂತಂತೆ. "ನಾನು ಎಲ್ಲರ dress ಗಿಂತ ಹೆಚ್ಚು ದುಬಾರಿಯಾದ dress ಮತ್ತು ನೆಕ್ಲೇಸ್ ಹಾಕಿಕೊಂಡಿದ್ದೇನೆ." ಎಂದು ಮೇರಿ ನೆನೆಸಿದಳಂತೆ. ಚಿಟ್ಟೆ ಯೋಚಿಸಿತು, "ಇವಳ ಮನಸ್ಸೆಲ್ಲಾ dress ಒಡವೆ ಇವುಗಳೇ ಇದೆ " ಎಂದು ಚಿಟ್ಟೆ ನೆನೆಸಿತು. ಮಲರ್ ಅಕ್ಕನ ಪಕ್ಕದಲ್ಲಿ ಬಂತಂತೆ, “ಈ ವರ್ಷ ಆಲಯಕ್ಕೆ ಬಂದಿರುವ ಎಲ್ಲರಿಗಿಂತ ನಾನೇ super ಆಗಿ ಮೇಕಪ್ ಹಾಕಿಕೊಂಡಿದ್ದೇನೆ. ಎಲ್ಲರೂ ನನ್ನ ನೆಕ್ಲೇಸ್ ಅನ್ನು ನೋಡಿ ಹೊಗಳುತ್ತಾರೆ" ಎಂದು ಹೆಮ್ಮೆ ಪಡುತ್ತಿದ್ದಳು. ಚಿಟ್ಟೆಯು “ಛೇ.. ದೊಡ್ಡವರ ಮನಸುಗಳಲ್ಲಿ ಹೀಗೇ ಇರೋದು” ಎಂದುಕೊಳ್ಳುತ್ತಾ ಸುತ್ತಲೂ ನೋಡಿತಂತೆ. ನಿಮ್ಮಿ ಎಂಬ ಪುಟ್ಟ ಮಗು ಅಳುತ್ತಿದ್ದಳು. "ಈ ಅಳು ಮುಖದ ಬಳಿ ಹೋದ್ರೆ ಏನು ಸ್ವಾರಸ್ಯ ಇರುತ್ತೆ" ಎಂದು ನೆನೆಸಿ ಹೊರಗಿರುವ ಗಿಡದ ಮೇಲೆ ಬಂದು ಕುಳಿತು ಕೊಂಡಿತು.
ಇಲ್ಲಿರುವ ಅನೇಕ ಜನರು ಶ್ರೀಮಂತರಾಗಿದ್ದಾರೆ. ಯಾರು ದೊಡ್ಡ ಶ್ರೀಮಂತರು ಎಂದು ಯೋಚಿಸಿತು ಚಿಟ್ಟೆ. ಆರಾಧನೆ ಮುಗಿಸಿ ಎಲ್ಲರೂ ಹೊರಗೆ ಬರತೊಡಗಿದರು. ಆಗ ನಿಮ್ಮಿ ಯೇ ಶ್ರೀಮಂತಳು ಎಂದು ತೋರಿಸಿದರು ದೇವರು. "ಅವಳ ಬಳಿ ದುಬಾರಿಯಾದದ್ದು ಏನೂ ಇಲ್ಲವೇ" ಎಂದು ಚಿಟ್ಟೆ ಕೇಳಿತು. “ಅಮೂಲ್ಯವಾದ ನಾನೇ ಅವಳ ಹೃದಯದಲ್ಲಿದ್ದೇನೆ! ಅವಳು, ನಾನು ಅವಳ ಹೃದಯದಲ್ಲಿ ಜನಿಸಬೇಕೆಂದು ಅಳುತ್ತಾ ಪ್ರಾರ್ಥಿಸಿದಳು. ಎಲ್ಲರೂ ನನ್ನನ್ನು ಮರೆತು ಕ್ರಿಸ್ಮಸ್ ಆಚರಿಸುತ್ತಿದ್ದಾರೆ" ಎಂದು ದೇವರು ಹೇಳಿದ ಕೂಡಲೇ ಅವರ ಹೃದಯವನ್ನು ಅರ್ಥಮಾಡಿಕೊಂಡಿತು ಚಿಟ್ಟೆ.
ಪುಟ್ಟ ತಮ್ಮ- ತಂಗಿ ಚಿಟ್ಟೆಯ ಕಥೆಯನ್ನು ಕೇಳುದ್ರಿ ಅಲ್ವಾ, ದೇವರ ಹೃದಯವನ್ನು ಅರ್ಥಮಾಡಿ ಕೊಂಡಿರುತ್ತೀರ ಎಂದು ಭಾವಿಸುತ್ತೇನೆ. ಈಗ ಹೇಗೆ X-mas ಆಚರಿಸುತ್ತೀರ? ಯೇಸುವಿನ ಜೊತೆಯೇ? ಅಥವಾ ಕೇವಲ ಆಚರಣೆಯೇ?
- Mrs. ಅನ್ಬುಜ್ಯೋತಿ ಸ್ಟಾಲಿನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482