Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.12.2021
Share:

By Village Missionary Movement

Friday, 17-Dec-2021

ಧೈನಂದಿನ ಧ್ಯಾನ(Kannada) – 17.12.2021

 

ಕ್ರಿಸ್ತನ ಜನನದ ರಹಸ್ಯ

 

“ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು." - ಮತ್ತಾಯ 1:21

 

ಯೇಸು ಕ್ರಿಸ್ತನು ಈ ಲೋಕದಲ್ಲಿ ಜನಿಸಿದಾಗ, ಯೆಹೂದ್ಯರು ಏನೆಂದು ನೆನೆಸಿದರೆಂದರೆ, ತಮ್ಮನ್ನು ಆಳುತ್ತಿರುವ ರೋಮಾ ಸಾಮ್ರಾಜ್ಯದಿಂದ ಇವರನ್ನು ಬಿಡಿಸಿ, ಒಂದು ಪ್ರತ್ಯೇಕವಾದ ರಾಜ್ಯವನ್ನು ಸ್ಥಾಪಿಸುತ್ತಾರೆ ಎಂದು ಭಾವಿಸಿದ್ದರು. ಆದುದರಿಂದ, "ಕರ್ತನೇ, ಈ ಸಮಯದಲ್ಲಿಯೇ ನೀನು ಇಸ್ರಾ ಯೇಲ್ಯರಿಗೆ ರಾಜ್ಯವನ್ನು ಪುನಃ ಸ್ಥಾಪಿಸುವಿಯೋ" (ಅಪೊ. 1:6) ಎಂದು ಕೇಳಿದರು.

 

ಹೌದು, ಯೇಸು ಜೀವಿಸಿದ ಕಾಲದಲ್ಲಿ ಯೆಹೂದ್ಯರು ರೋಮನ್ನರಿಗೆ ಗುಲಾಮರಾಗಿದ್ದದ್ದು ನಿಜವೇ. ಆದರೆ ಕ್ರಿಸ್ತನು ಈ ಲೋಕಕ್ಕೆ ಬಂದ ಉದ್ದೇಶ, ಅವರನ್ನು ಈ ಲೋಕದ ದಾಸತ್ವದಿಂದ ಬಿಡಿಸಲು ಅಲ್ಲ; ಅದಕ್ಕಿಂತ ಮಾರಣಾಂತಿಕವಾದ ಪಾಪದ ದಾಸತ್ವದಿಂದ ಬಿಡಿಸುವುದಕ್ಕೆ ಬಂದರು. ಅವರು ಈ ಪಾಪದ ದಾಸತ್ವ, ಆ ಗುಲಾಮಗಿರಿಗಿಂತ ಹೆಚ್ಚು ಕೆಟ್ಟದ್ದಾಗಿದೆ ಎಂದು ಕಂಡು, ಮೊದಲು ಪಾಪದಿಂದ ಬಿಡಿಸಲು ಸಿದ್ದರಾದರು. ಆದರೆ ಯೆಹೂದ್ಯರಿಗೆ ಅದನ್ನು ಸ್ವೀಕರಿಸಲು ಇಷ್ಟವಿಲ್ಲ. ಇನ್ನೂ ಮೆಸ್ಸಿಯನ ಬರುವಿಕೆಗಾಗಿಯೇ ಕಾಯುತ್ತಿದ್ದಾರೆ. ಅಯ್ಯೋ ಭೀಕರ! ಆದರೆ ನಾವು ಕ್ರಿಸ್ತನ ಜನನದ ರಹಸ್ಯವನ್ನು ತಿಳಿದುಕೊಂಡಿದ್ದೇವೆ; ಆದರೆ ಪಾಪದಿಂದ ನಿಜವಾದ ಬಿಡುಗಡೆಯನ್ನು ಪಡೆದಿದ್ದೇವೆಯೇ?

 

ಓ ಕ್ರೈಸ್ತವ್ಯವೇ! ಕುಡಿತ, ದುರಭಿಮಾನ, ವ್ಯಭಿಚಾರ, ಲೌಕಿಕ ಮೋಹ ಇತ್ಯಾದಿ ಪಾಪಗಳಿಂದ ಬಿಡಿಸಲು ಬಂದವರ ಜನ್ಮದಿನವನ್ನು ಆಚರಿಸುತ್ತಿದ್ದೇವಲ್ಲಾ, ನಾವು ನಿಜವಾದ ಬಿಡುಗಡೆಯನ್ನು ಪಡೆದಿದ್ದೇವಾ? ಅಯ್ಯೋ! ಇನ್ನೂ ಅನೇಕ ಕ್ರೈಸ್ತರು, ಅವರ ಜನ್ಮದಿನವನ್ನು ಆಚರಿಸುತ್ತಿದ್ದರೂ, ಅವರ ಜನ್ಮ ರಹಸ್ಯವನ್ನು ತಿಳಿಯದೆ ಪಾಪಕ್ಕೆ ದಾಸರಾಗಿದ್ದಾರೆ! ಇದರಿಂದ ಬಿಡುಗಡೆ ಹೊಂದದಿದ್ದರೆ ನಾವು ಕ್ರೈಸ್ತರಾಗಿರುವುದರಿಂದ ಏನು ಪ್ರಯೋಜನ? ಪ್ರತಿ ವರ್ಷ ಅವರ ಹುಟ್ಟುಹಬ್ಬವನ್ನು ಆಚರಿಸುವುದರಿಂದ ಏನು ಉಪಯೋಗ? ಯೋಚಿಸೋಣ. ಎಲ್ಲಾ ವಿಧವಾದ ಪಾಪಗಳಿಂದ ನಿಜವಾದ ವಿಮೋಚನೆ ಮತ್ತು ರಕ್ಷಣೆಯನ್ನು ಪಡೆದು ಅವರಿಗೆ ಸಾಕ್ಷಿಯಾಗಿ ಬದುಕುವುದು ಕಷ್ಟವೋ? ಅವರು ನಮಗಾಗಿ ತನ್ನನ್ನು ಕೊಟ್ಟು, ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಾಗಿದ್ದರೂ ಇನ್ನೂ ಏಕೆ ಗುಲಾಮರಾಗಿರಬೇಕು?

 

ಪ್ರೀತಿಯ ಸಹೋದರನೇ, ಸಹೋದರಿಯೇ, ಸಾವಿರಾರು ಬಾರಿ ಕ್ರಿಸ್ತನು ಬೇತ್ಲೆಹೇಮಿನಲ್ಲಿ ಜನಿಸಿದರೂ ನಿಮ್ಮ ಹೃದಯದಲ್ಲಿ ಅವರು ರೂಪಿಸಲ್ಪಡದೇ ಹೋದರೆ ಏನು ಪ್ರಯೋಜನ? ಇಂದೇ ಅದನ್ನು ಅರಿತುಕೊಳ್ಳೋಣ. ತಡ ಮಾಡಬೇಡಿರಿ. ಹೇಗಿದ್ದೀರೋ ಹಾಗೆಯೇ ಸಂಪೂರ್ಣವಾಗಿ ಆತನಿಗೆ ಒಪ್ಪಿಸಿಕೊಟ್ಟು, ನಿಜವಾದ ಸಂತೋಷದೊಂದಿಗೆ ಕ್ರಿಸ್ಮಸ್ ಅನ್ನು ಆಚರಿಸೋಣ.

- Bro. ಸಾಮುವೇಲ್ ಜೆಬರತ್ನಂ

 

ಪ್ರಾರ್ಥನಾ ಅಂಶ:

ಆಂಧ್ರಪ್ರದೇಶದ ಪಾಡೇರು, ಮತ್ತು ಅರಕು ಕಣಿವೆ ವಲಯಗಳಲ್ಲಿ ಹೊಸದಾಗಿ ಕಾರ್ಯಾಲಯವನ್ನು ಪ್ರಾರಂಭಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al