Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.12.2021
Share:

By Village Missionary Movement

Wednesday, 15-Dec-2021

ಧೈನಂದಿನ ಧ್ಯಾನ(Kannada) – 15.12.2021

 

ಮನಮರುಗುವುದು

 

“ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ...ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು;..." - ಯೆಶಾಯ 55:7

 

ರಕ್ಷಣಾ ಸೇನೆ (Salvation army) ಯ ಸಂಸ್ಥಾಪಕ ವಿಲಿಯಂ ಬೂತ್ ರವರ ಅಂತ್ಯಕ್ರಿಯೆಯನ್ನು ರಾಜ ಗೌರವಗಳೊಂದಿಗೆ ನಡೆಸಲಾಯಿತು. ಎಲ್ಲರೂ ಶವಪೆಟ್ಟಿಗೆಯಲ್ಲಿ ಹೂವುಗಳನ್ನು ಹಾಕುತ್ತಿರುವಾಗ, ಸುಕ್ಕುಗಟ್ಟಿದ ಸಾಧಾರಣ ಉಡುಗೆಯಲ್ಲಿ ಒಂದು ಮಹಿಳೆ ನಿಂತಿರುವುದನ್ನು ಗಮನಿಸಿದ ರಾಣಿ, "ನಿನಗೆ ಇವರು ಹೇಗೆ ಗೊತ್ತು?" ಎಂದು ಕೇಳಿದರು. ಅದಕ್ಕೆ ಆ ಮಹಿಳೆ, "ಅವರು ನನ್ನಂತವರ ಮೇಲೆ ತುಂಬಾ ಕರುಣೆಯುಳ್ಳವರು" ಎಂದು ಉತ್ತರಿಸಿದಳು. "ಮನಮರುಗವುದು ಎಂಬುದು ಇತರರ ನೋವನ್ನು ನಮ್ಮ ಸ್ವಂತ ನೋವಿನಂತೆ ಸ್ವೀಕರಿಸುವುದೆ" ಎಂದು ಜಾರ್ಜ್ ವೈಟ್‌ಫೀಲ್ಡ್ ಎಂಬ ದೇವ ಮನುಷ್ಯನು ಹೇಳುತ್ತಾರೆ.

 

ಈ ಲೋಕದಲ್ಲಿ ಹುಟ್ಟಿದ ಮನುಷ್ಯರು ಪಡುವ ನೋವುಗಳು ಅನೇಕ ವಿಧ. ಪ್ರತಿಯೊಬ್ಬರು ತನ್ನ ಸ್ವಂತ ಪಾಪಗಳಲ್ಲಿ ಸಿಕ್ಕಿಹಾಕಿಕೊಂಡು ವೇದನೆ ಅನುಭವಿಸುತ್ತಿದ್ದಾರೆ. ಇನ್ನೂ ಅನಾರೋಗ್ಯದಿಂದ ಬಳಲುತ್ತಿರುವವರು ಉಂಟು, ಸಾಲದಿಂದ ಬಳಲುತ್ತಿರುವವರು ಉಂಟು, ಕುಟುಂಬದಲ್ಲಿ ಮಕ್ಕಳಿಂದಲೂ ಅಥವಾ ಸಂಬಂಧಿಕರಿಂದಲೂ ಶಾಂತಿಯ ಕೊರತೆಯುಂಟಾಗುವಾಗ ಅಥವಾ ಅವರ ಕ್ರೂರ ಪಾಪಗಳಿಂದಲೂ, ಅಪರಾಧಗಳಿಂದಲೂ ಅಥವಾ ಸ್ವಯಂ-ಭೋಗದಿಂದಲೂ ಬಳಲುತ್ತಿರುವವರೂ ಇದ್ದಾರೆ.

 

ನಮ್ಮ ರಕ್ಷಕನಾದ ಯೇಸು ಕ್ರಿಸ್ತನು ಈ ಎಲ್ಲಾ ಜನರ ದುಃಖವನ್ನು ತನ್ನ ಸ್ವಂತ ಸಂಕಟವೆಂದು ಸ್ವೀಕರಿಸಿದರು. ಆಲೋಚನೆಯಲ್ಲಿ ಮಾಡಿದ ಪಾಪಗಳಿಗಾಗಿ ಮುಳ್ಳಿನ ಕಿರೀಟವನ್ನು ಧರಿಸಿದರು. ಹೃದಯದಲ್ಲಿ ಮಾಡಿದ ಪಾಪಗಳಿಗಾಗಿ ಈಟಿಯಿಂದ ತಿವಿಸಿಕೊಂಡರು. ಕೈಕಾಲುಗಳಿಂದ ಮಾಡಿದ ಪಾಪಗಳಿಗಾಗಿ ಮೊಳೆಗಳನ್ನು ಹೊಡೆಸಿಕೊಂಡರು. ನಮ್ಮನ್ನು ದುಃಖ ಮತ್ತು ಪಾಪದಿಂದ ವಿಮೋಚನೆಗೊಳಿಸಲು ಈ ಲೋಕದಲ್ಲಿ ಜನಿಸಿದ ರಕ್ಷಕನ ದುಃಖವನ್ನು ಯೋಚಿಸಿ ನೋಡಿರಿ.

 

ಹೌದು, ದೇವರು ನಮ್ಮ ಮೇಲೆ ಮನಮರುಗಿದ್ದರಿಂದಲೇ ನಾವು ಕ್ಷಮಿಸಲ್ಪಟ್ಟಿದ್ದೇವೆ, ರಕ್ಷಿಸಲ್ಪಟ್ಟಿದ್ದೇವೆ ಮತ್ತು ನೀತಿವಂತರಾಗಿದ್ದೇವೆ. ಅದೇ ರೀತಿಯಲ್ಲಿ ನಾವು ಮತ್ತೊಬ್ಬರ ಬಳಿ ಮನಮರುಗುತ್ತಾ ನಡೆದುಕೊಳ್ಳೋಣ. ಇತರರ ತಪ್ಪುಗಳನ್ನು, ಅಪರಾಧಗಳನ್ನು ಕ್ಷಮಿಸಿ ಸ್ವೀಕರಿಸುವ ಕ್ರಿಸ್ತನ ಸ್ವಭಾವವನ್ನು ನಾವು ಬಹಿರಂಗಪಡಿಸೋಣ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಸತ್ತಿಯಂ ಟಿ.ವಿ, ನಂಬಿಕೈ ಟಿ.ವಿ. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಹೋ. ಡೇವಿಡ್ ಗಣೇಶನ್ ರವರು ನೀಡುವ ದೈವಿಕ ಸಂದೇಶವನ್ನು ಕೇಳುವ ಪ್ರತಿಯೊಬ್ಬರೂ, ಬಿಡುಗಡೆ ಹೊಂದಿ ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş