Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.12.2021
Share:

By Village Missionary Movement

Tuesday, 14-Dec-2021

ಧೈನಂದಿನ ಧ್ಯಾನ(Kannada) – 14.12.2021

 

ಭದ್ರತೆ ಎಲ್ಲಿದೆ?

 

"ಇದನ್ನು ಕೇಳಿ ಅರಸನಾದ ಹೆರೋದನೂ ಅವನ ಕೂಡ ಯೆರೂಸಲೇವಿುನವರೆಲ್ಲರೂ ಕಳವಳಪಟ್ಟರು" - ಮತ್ತಾಯ 2: 3

 

ಯೇಸುಕ್ರಿಸ್ತನ ಜನನದ ಚರಿತ್ರೆಯಲ್ಲಿ ನಾವು ಹೆರೋದನೆಂಬ ಅರಸನ ಬಗ್ಗೆ ಓದುತ್ತೇವೆ. ಇವರು ಇಸ್ರಾಯೇಲ್ ದೇಶವನ್ನು ಆಳಲು ರೋಮನ್ ಚಕ್ರವರ್ತಿ ನೇಮಿಸಿದ ರಾಜ. ಅವರ ಕಾಲದಲ್ಲಿ ಅನೇಕ ದೇವಾಲಯಗಳು ಮತ್ತು ಸ್ಮಾರಕಗಳನ್ನು ನಿರ್ಮಿಸಲಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಯೆರೂಸಲೇಮಿನ ದೇವಾಲಯವನ್ನು ಭವ್ಯವಾಗಿ ನವೀಕರಣ ಮಾಡಿದರು. ಇವೆಲ್ಲಾ ಭಕ್ತಿಯನ್ನು ಸೂಚಿಸುವುದಿಲ್ಲ; ಒಬ್ಬ ರಾಜಕಾರಣಿಯಂತೆ ಜನರನ್ನು ಮೆಚ್ಚಿಸಲು ಮಾಡಲಾಗಿದೆ. ಈ ರಾಜ ಹೆರೋದನು ಯೇಸುಕ್ರಿಸ್ತನ ಜನನವನ್ನು ಕೇಳಿದಾಗ ಕಳವಳಪಟ್ಟನು. ಇದರೊಂದಿಗೆ ಎರಡು ವರ್ಷದೊಳಗಿನ ಮಕ್ಕಳನ್ನು ಕೊಂದಿದ್ದನ್ನೂ ಓದುತ್ತೇವೆ. ಏಕೆ ಒಂದು ಮಗುವನ್ನು ಕಂಡು ಭಯಪಡಬೇಕು? ಅವರ ಲೆಕ್ಕಾಚಾರದ ಪ್ರಕಾರ ಆ ಮಗು ಅಧಿಕಾರಕ್ಕೆ ಬರಬೇಕಾದರೂ 20 ವರ್ಷಗಳು ಬೇಕು!

 

ಹೆರೋದನ ಚರಿತ್ರೆಯನ್ನು ಇನ್ನೂ ಹೆಚ್ಚಾಗಿ ಪರಿಶೋಧನೆ ಮಾಡಿ ನೋಡಿದರೆ ಅವರು ಮಕ್ಕಳನ್ನು ಮಾತ್ರವಲ್ಲದೆ, ಅವರ ಹೆಂಡತಿ, ಅವರ ಸ್ವಂತ ಇಬ್ಬರು ಮಕ್ಕಳು, ಅವರ ಅತ್ತೆ ಮತ್ತು ಅವರ ಮಾವನನ್ನೂ ಕೊಂದಿದ್ದಾರೆಂದು ಆ ಪಟ್ಟಿಯಲ್ಲಿ ಮುಂದುವರೆಯುತ್ತಲೇ ಇದೆ. (ನೋಡಲು: www.britannica.com/biography/herod-king-of-Judaea) ಈ ಎಲ್ಲಾ ಹತ್ಯೆಗಳಿಗೆ ಮೂಲ ಕಾರಣವೇನು? ಅವರಿಗಿದ್ದ ಸುರಕ್ಷತೆ ಇಲ್ಲದ ಭಾವನೆಯೇ!

 

ದೇಶದ ಅರಸನಾಗಿ, ಅರಮನೆಯಲ್ಲಿ ಯೋಧರಿಂದ ಸುತ್ತುವರಿದಿದ್ದರೂ ಭಯಭೀತರಾಗಿದ್ದದ್ದನ್ನು ಹೆರೋದನ ಜೀವನದಲ್ಲಿ ನೋಡುತ್ತೇವೆ. ಆದರೆ ನಾವು ಅರಸನಾದ ದಾವೀದನ ಜೀವನವನ್ನು ಗಮನಿಸುವುದಾದರೆ, ಇವರ ಸ್ವಂತ ಮಗನೇ ಇವರನ್ನು ಕೊಲ್ಲಲು ಬೆನ್ನಟ್ಟಿದ ಪರಿಸ್ಥಿತಿಯಲ್ಲೂ ಅವರು ಎಂತಹ ಮನೋಸ್ಥಿತಿಯಲ್ಲಿ ಇದ್ದರೆಂಬುದನ್ನು ಕೀರ್ತನೆಗಳು 3 ನೇ ಅಧ್ಯಾಯದಲ್ಲಿ ಓದುತ್ತೇವೆ. ತನ್ನ ವಿರುದ್ಧ ಸೈನ್ಯವೇ ಬಂದರೂ ನಾನು ಹೆದರುವುದಿಲ್ಲ ಎಂದು ಹೇಳಿದ್ದು ಮಾತ್ರವಲ್ಲದೆ, ತಾನು ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡಿ ಎದ್ದೇಳುವುದಾಗಿಯೂ ಜಯಘೋಷ ಮಾಡುತ್ತಾರೆ. ಒಂದು ಕಡೆ ಅರಮನೆಯಲ್ಲಿ ಭಯದಿಂದ ನಡುಗುತ್ತಿರುವ ಹೆರೋದನು ಮತ್ತು ಇನ್ನೊಂದು ಕಡೆ ಭಯಪಡಬೇಕಾದ ಪರಿಸ್ಥಿತಿಯಲ್ಲೂ ಧೈರ್ಯವಾಗಿದ್ದ ದಾವೀದನು! ಇದು ಹೇಗೆ?

 

ಈ ರಹಸ್ಯವನ್ನು ಕೀರ್ತ. 3: 3 ರಲ್ಲಿ ಓದುತ್ತೇವೆ. ದಾವೀದನು ಕರ್ತನನ್ನೇ ತನ್ನ ಜೀವನದ ನಂಬಿಕೆಯಾಗಿ ಅವಲಂಬಿಸಿದ್ದನು! ಹೌದು, ನಮಗೂ ಜೀವನದಲ್ಲಿ ಭದ್ರತೆಯ ಭಾವವನ್ನು ನೀಡುವುದು ಹಣವೋ, ಪದವಿಯೋ ಅಥವಾ ಅಂತಸ್ತೋ ಅಲ್ಲ; ಕರ್ತನಲ್ಲಿ ಎಷ್ಟು ನಂಬಿಕೆ ಇಟ್ಟಿದ್ದೇವೋ ಅಷ್ಟು ಭದ್ರತೆಯ ಭಾವದಿಂದ ಬದುಕುತ್ತೇವೆ. ಹಣವೇ ಭದ್ರತೆ ಎಂದು ಸೇರಿಸಿ ಸೇರಿಸಿ ಇಟ್ಟವರ ಟೆನ್ಷನ್ ಅನ್ನು ಕಳೆದ ಕೆಲವು ವಾರಗಳಿಂದ ನಮ್ಮ ದೇಶದಲ್ಲಿ ನೋಡುತ್ತಲೇ ಇದ್ದೇವೆ. ಈ ಕ್ರಿಸ್ಮಸ್ ದಿನಗಳಲ್ಲಿ ಕರ್ತನನ್ನೇ ನಂಬಿ ಜೀವಿಸಲು ನಮ್ಮನ್ನು ಸಮರ್ಪಿಸಿಕೊಳ್ಳೋಣ. ಭಯವಿಲ್ಲದೆ ಭದ್ರತೆ ಮತ್ತು ವಿಶ್ರಾಂತಿಯ ಭಾವನೆಯೊಂದಿಗೆ ಜೀವಿಸೋಣ.

- J. ಸಂತೋಷ್

 

ಪ್ರಾರ್ಥನಾ ಅಂಶ:

ಸಾವಿರಾರು ಜನರು ಕುಳಿತು ಆರಾಧಿಸಲು ನಿರ್ಮಿಸುತ್ತಿರುವ ಪ್ರಾರ್ಥನಾ ಗುಡಾರದ ಕಾರ್ಯಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin