Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.12.2021
Share:

By Village Missionary Movement

Monday, 13-Dec-2021

ಧೈನಂದಿನ ಧ್ಯಾನ(Kannada) – 13.12.2021

 

ನಿಧಿಯನ್ನು ಹುಡುಕುತ್ತಾ

 

"ವರ್ಣಿಸಲಶಕ್ಯವಾದ ದೇವರ ವರಕ್ಕಾಗಿ ಆತನಿಗೆ ಸ್ತೋತ್ರ." - 2 ಕೊರಿಂಥ. 9:15

 

ಇಂಗ್ಲೆಂಡಿನ ಡೇವ್ ಕ್ರಿಸ್ಪ್ ಅವರು ಗುಪ್ತ ನಿಧಿಗಳ ಹುಡುಕಾಟದಲ್ಲಿ ತೊಡಗಿದ್ದರು. ದೇಶದ ನೈಋತ್ಯ ಭಾಗದಲ್ಲಿ ರಹಸ್ಯ ಸ್ಥಳದಲ್ಲಿ ರಾಶಿಯಾಗಿ ರೋಮನ್ ನಾಣ್ಯಗಳನ್ನು ಕಂಡುಕೊಂಡರು. ಗುಪ್ತ ವಸ್ತುಗಳನ್ನು ಕಂಡುಹಿಡಿಯುವ ಸಾಧನದ ಮೂಲಕ

52000 ನಾಣ್ಯಗಳಿದ್ದ ಈ ದೊಡ್ಡ ಮಡಕೆಯನ್ನು ಕಂಡುಹಿಡಿದರು. ಈ ಪುರಾತನ ಬೆಳ್ಳಿ ಮತ್ತು ಕಂಚಿನ ನಾಣ್ಯಗಳು ಕ್ರಿ.ಶ ಮೂರನೇ ಶತಮಾನದಷ್ಟು ಹಿಂದಿನವು. ಸುಮಾರು 175 ಕೆಜಿ ತೂಕವಿದ್ದು, 50 ಲಕ್ಷ ರೂಪಾಯಿಯಷ್ಟು ಬೆಲೆಬಾಳುವಂತದ್ದಾಗಿತ್ತು.

 

ಈ ಘಟನೆಯು ಡೇವ್ ಕಂಡುಹಿಡಿದಂತಹ ಅಮೂಲ್ಯವಾದ ನಿಧಿಯಂತಹ ನಿಧಿಗಳನ್ನು ನಾವೂ ಪಡೆಯುವುದಿಲ್ಲವೇ ಎಂದು ಒಂಟಿತನದ ಕನಸು ಕಾಣಲು ಪ್ರೇರೇಪಿಸುತ್ತಿದೆ. ಇದನ್ನು ಓದುತ್ತಿರುವ ನೀವು ಇನ್ನಷ್ಟು ವಿಭಿನ್ನವಾಗಿ ನಿಧಿಯನ್ನು ಹುಡುಕುವವರಾಗಿ ಕಾಣಬೇಕು. ನಾವು ಹುಡುಕುತ್ತಿರುವ ಸಂಪತ್ತು ಬೆಳ್ಳಿ ಮತ್ತು ಚಿನ್ನವಲ್ಲ. ಇದು ಮಾಣಿಕ್ಯಗಳಂತಿದೆ. ನೀವು ಹುಡುಕಿದರೆ ಕ್ರಿಸ್ಮಸ್ ದಿನಗಳಲ್ಲಿ ಅಮೂಲ್ಯವಾದ ನಿಧಿಯನ್ನು ಕಂಡುಕೊಳ್ಳುತ್ತೀರ. ಹೌದು, ಅದು ಯೇಸು ಕ್ರಿಸ್ತನೇ! ಪರಲೋಕದ ದೇವರು ತನ್ನ ಸ್ವಂತ ಮಗನನ್ನೇ ಮಾನವಕುಲಕ್ಕೆ ಅಮೂಲ್ಯವಾದ ನಿಧಿಯಾಗಿ ಭೂಮಿಗೆ ಕಳುಹಿಸಿಕೊಟ್ಟರು. ಈ ನಿಧಿಯು ಒಬ್ಬ ಮನುಷ್ಯನಿಗೆ ಐಹಿಕ ಜೀವನದಲ್ಲಿ ಮಾತ್ರವಲ್ಲದೆ ಪರಲೋಕದ ಶಾಶ್ವತ ಜೀವನಕ್ಕೂ ಸೇರಿ ನೀಡಲಾಯಿತು. ಈ ಸಂದೇಶವನ್ನು ಓದುತ್ತಿರುವ ನೀವು ಅಮೂಲ್ಯವಾದ ನಿಧಿಯಾಗಿ ಯೇಸುವನ್ನು ಕಂಡುಹಿಡಿದಿದ್ದೀರ? ನಿಮಗೆ ಸ್ವಂತ ಮಾಡಿಕೊಂಡು ಬಿಟ್ಟಿರಾ?

 

ಮತ್ತಾಯನು ಬರೆದ ಸುವಾರ್ತೆಯಲ್ಲಿ ಓದುವಾಗ ಶಾಸ್ತ್ರಿಗಳು ಯೇಸುವನ್ನು ಹುಡುಕಲು ಮತ್ತು ಆರಾಧಿಸಲು ದೀರ್ಘ ಪ್ರಯಾಣವನ್ನು ಮಾಡಿದರು. ಅವರು ಅಂತಿಮವಾಗಿ ಯೇಸುವನ್ನು ನೋಡಿದಾಗ, ತಮ್ಮ ಕೈಯಲ್ಲಿದ್ದ ನಿಧಿಗಿಂತ ಯೇಸುವನ್ನು ಅಮೂಲ್ಯವಾದ ನಿಧಿಯಾಗಿ ಕಂಡರು. ಇಂದು ನೀವೂ ಕೂಡ ಯೇಸುವನ್ನು ನಿಮಗೆ ಸ್ವಂತ ಮಾಡಿಕೊಳ್ಳಿರಿ. ಇದುವೇ ನಿಮಗೆ ಅಮೂಲ್ಯವಾದ ನಿಧಿಯಾಗಿದೆ.ವರ್ಣಿಸಲಶಕ್ಯವಾದ ದೇವರ ವರಕ್ಕಾಗಿ ಆತನಿಗೆ ಸ್ತೋತ್ರ. ಆಮೆನ್.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಜಾರ್ಖಂಡ್‌ನಲ್ಲಿ ಹೊಸ ಕೆಲಸದ ಸ್ಥಳವನ್ನು ಪ್ರಾರಂಭಿಸಲು ದೇವರು ಕೃಪೆ ತೋರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al