Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.12.2021
Share:

By Village Missionary Movement

Saturday, 11-Dec-2021

ಧೈನಂದಿನ ಧ್ಯಾನ(Kannada) – 11.12.2021

 

ಬೇಗನೆ ಉತ್ತರ

 

"ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು." - ಕೀರ್ತನೆ 126: 5

 

ಕ್ರಿಸ್ತನನ್ನು ತಿಳಿಯದ ಒಬ್ಬ ಅಕ್ಕಸಾಲಿಗನಿದ್ದನು. ಅವನು “ಯಾವ ಮನುಷ್ಯನೂ ನನಗೆ ಕ್ರಿಸ್ತನ ಬಗ್ಗೆ ಹೇಳಲು ಸಾಧ್ಯವಿಲ್ಲ. ನಾನು ವಾದ ಮಾಡಿ ಅವರ ಬಾಯಿ ಮುಚ್ಚಿಬಿಡುತ್ತೇನೆ” ಎಂದು ಸವಾಲು ಹಾಕುತ್ತಾ ಹೇಳುತ್ತಿದ್ದನು. ಈ ವಿಷಯ ತಿಳಿದ ಅದೇ ಊರಿನ ವಯಸ್ಸಾದ ಸಭೆಯ ಹಿರಿಯರೊಬ್ಬರು, ಈ ವ್ಯಕ್ತಿಯನ್ನು ನೆನೆಸಿಕೊಂಡು ಪ್ರತಿದಿನ ತಮ್ಮ ಹೆಂಡತಿಯೊಂದಿಗೆ ಸೇರಿ ಬಹಳ ಭಾರದೊಂದಿಗೆ ಪ್ರಾರ್ಥಿಸುತ್ತಿದ್ದರು. ಒಂದು ದಿನ ಆಕಸ್ಮಿಕವಾಗಿ ಈ ವ್ಯಕ್ತಿಯನ್ನು ಭೇಟಿಯಾದಾಗ, "ಸ್ನೇಹಿತನೇ, ನಾನು, ನನ್ನ ಹೆಂಡತಿ ನಿನಗಾಗಿ ಪ್ರಾರ್ಥಿಸುತ್ತಿದ್ದೇವೆ" ಎಂದು ಹೇಳುವಾಗ ಅವನ ಹೃದಯವು ಭಾರವಾಗಿ ಅವನ ಕಣ್ಣುಗಳು ಕಣ್ಣೀರಿನಿಂದ ತುಂಬಿದವು. ಅದರಿಂದಾಚೆಗೆ ಅವನಿಂದ ಏನನ್ನೂ ಮಾತನಾಡಲು ಸಾಧ್ಯವಾಗಲಿಲ್ಲ.

 

ಈ ಹಿರಿಯರ ಮಾತುಗಳು, ಕಣ್ಣೀರು ತುಂಬಿದ ಕಣ್ಣುಗಳು ಅಕ್ಕಸಾಲಿಗನ ಹೃದಯವನ್ನು ಅಲುಗಾಡಿಸಿತು. ಮತ್ತೆ ಮತ್ತೆ ಆ ಹಿರಿಯರ ರೂಪವು ಅವನ ಕಣ್ಣು ಮುಂದೆ ಕಾಣಿಸುತ್ತಿದ್ದಾಗ ತಕ್ಷಣ ನೇರವಾಗಿ ಅವರ ಮನೆಗೆ ಹೋಗಿ, “ನನ್ನ ಮನದಲ್ಲಿ ಏನೋ ಬದಲಾವಣೆ ಉಂಟಾಗಿದೆ. ಮತ್ತೆ ಮತ್ತೆ ನಿಮ್ಮ ಕಣ್ಣೀರು ತುಂಬಿದ ಕಣ್ಣುಗಳು ನನ್ನ ಮನೋನೇತ್ರಗಳ ಮುಂದೆ ಬರುತ್ತಿವೆ” ಎಂದು ತನ್ನ ಮನಸ್ಸಿನಲ್ಲಿರವುದನ್ನೆಲ್ಲಾ ಹೇಳಿ ಅತ್ತನು. ಅಷ್ಟೇ ಅಲ್ಲ ತನ್ನನ್ನು ತಗ್ಗಿಸಿಕೊಂಡು ಮಂಡಿಯೂರಿ ಕುಳಿತನು. ವರ್ಣಿಸಲಾಗದ ದೈವಿಕ ಶಾಂತಿ ಮತ್ತು ಸಂತೈಸುವಿಕೆಯು ಅವನ ಹೃದಯವನ್ನು ತುಂಬಿತು. ಆ ದಿನವೇ ಅವನು ಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದನು.

 

ಪ್ರಿಯರೇ! ನಾವು ಕೂಡ ನಮ್ಮ ಸುತ್ತಮುತ್ತಲಿರುವ ಜನರಿಗೆ ಕ್ರಿಸ್ತನ ಪ್ರೀತಿಯನ್ನು ತಿಳಿಸಲು ಬಯಸೋಣ, ಅವಕಾಶವನ್ನು ಹುಡುಕೋಣ. ಅದೇ ಸಮಯದಲ್ಲಿ ನಾವು ಈ ಆತ್ಮಗಳ ಬಗ್ಗೆ ಭಾರವಾದ ಹೃದಯ ಮತ್ತು ಕಣ್ಣೀರಿನಿಂದ ಪ್ರಾರ್ಥಿಸಲು ವಿಫಲವಾದರೆ ಅವರ ಅಂತರಂಗದಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ. ನಮ್ಮ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತದೆ. ಯೇಸುಕ್ರಿಸ್ತನು ಕೂಡ ಜನರ ಮಾನಸಾಂತರಕ್ಕಾಗಿ ತಂದೆಯ ಬಳಿ ಭಾರದಿಂದ, ಕಣ್ಣೀರಿನೊಂದಿಗೆ ಪ್ರಾರ್ಥಿಸಿದರು ಎಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ನಾವು ಪ್ರಾರ್ಥಿಸಿ ಕಾರ್ಯವನ್ನು ಮಾಡುವಾಗ, ಅವಕಾಶಗಳನ್ನು ಕರ್ತನು ಉಂಟುಮಾಡುತ್ತಾ ಜನರು ಯೇಸುವನ್ನು ತಿಳಿಯುವಂತಹ ಜ್ಞಾನದಿಂದ ತುಂಬುವಂತೆ, ಅವರ ಕಣ್ಣುಗಳು ತೆರೆಯಲ್ಪಡಲು ಆ ಸುವಾರ್ತೆಯೆಂಬುದು ಅವರ ಹೃದಯದಲ್ಲಿ ಕಾರ್ಯಮಾಡಲು ಪವಿತ್ರಾತ್ಮನು ಕ್ರಿಯೆ ಮಾಡುತ್ತಾರೆ. ನಾವು ರಹಸ್ಯವಾಗಿ ಪ್ರಾರ್ಥನಾ ಕೋಣೆಯಲ್ಲಿ ಸುರಿಸುವ ಕಣ್ಣೀರಿಗೆ ನಮ್ಮ ದೇವರು ಖಂಡಿತವಾಗಿಯು ಬಹಿರಂಗವಾಗಿ ಉತ್ತರಿಸುತ್ತಾರೆ. ಆಮೆನ್.

- Mrs. ಜೆಬಕಣಿ ಸೇಗರ್

 

ಪ್ರಾರ್ಥನಾ ಅಂಶ:

ಬೈಬಲ್ ಕಾಲೇಜ್ ಮತ್ತು ಸೇವಕರ ಮೀಟಿಂಗ್ ಗಳಿಗೆ ಅಡುಗೆ ಮಾಡಲು "Wood steamer boiler" ಅನ್ನು ತೆಗೆದುಕೊಳ್ಳಲು ರೂ. 4 ಲಕ್ಷ ಹಣ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş jojobet superbetin superbetin giriş casibom casibom giriş holiganbet holiganbet giriş jojobet jojobet giriş alobet alobet giriş amgbahis amgbahis giriş sweet bonanza casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin superbetin giriş marsbahis marsbahis giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/