Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.12.2021
Share:

By Village Missionary Movement

Friday, 10-Dec-2021

ಧೈನಂದಿನ ಧ್ಯಾನ(Kannada) – 10.12.2021

 

ಪರಲೋಕದ ಸಂಪತ್ತು

 

 "...ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು” - ಮತ್ತಾಯ 2:11

 

ಯೇಸುಕ್ರಿಸ್ತನು ಬೇತ್ಲೆಹೇಮಿನಲ್ಲಿ ಬಾಲಕನಾಗಿ ಜನಿಸಿದಾಗ ಮೂಡಣದೇಶದ ಜೋಯಿಸರು ಬಂದು ಆತನಿಗೆ ಅಮೂಲ್ಯ ವಸ್ತುಗಳನ್ನು ಯೇಸುವಿಗೆ ಕೊಟ್ಟು, ತಮ್ಮ ಸಮರ್ಪಣೆಯನ್ನು ವ್ಯಕ್ತಪಡಿಸಿದರು. ಅವೆಲ್ಲವೂ ಭೂಮಿಯ ಮೇಲೆ ಅಮೂಲ್ಯ ವಸ್ತುಗಳು, ರಾಜರು ಮತ್ತು ಗಣ್ಯರು ಬಳಸುವ ವಸ್ತುಗಳಾಗಿವೆ. ಅವು ಭೂಮಿಯ ಮೇಲೆ ಅತ್ಯಂತ ಅಮೂಲ್ಯವಾದುದಾದರೂ, ಪರಲೋಕದ ನೋಟವು ವಿಭಿನ್ನವಾಗಿರುವುದನ್ನು ನಾವು ನೋಡಬಹುದು.

 

ಹಾಳಾಗುವ ಚಿನ್ನ ಮತ್ತು ಹಾಳಾಗದ ನಂಬಿಕೆ: ನಾವು ಭೂಮಿಗೆಂದು ಸೇರಿಸಿಡುವ ಯಾವ ವಸ್ತುವಾದರೂ ಖಂಡಿತವಾಗಿಯೂ ನಾಶವಾಗುತ್ತದೆ. ಆದರೆ ದೇವರು ನಮ್ಮ ಹೃದಯದಲ್ಲಿ ನೀಡಿರುವ ನಂಬಿಕೆಯ ಕಾರ್ಯಗಳು ಭೂಮಿಯ ಮೇಲೆ ನಮಗೆ ಅತ್ಯುತ್ತಮವಾದವು ಮಾತ್ರವಲ್ಲದೆ ನಮ್ಮನ್ನು ಪರಲೋಕಕ್ಕೆ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಆ ಭರವಸೆ ಖಂಡಿತವಾಗಿಯೂ ನಮ್ಮನ್ನು ನಾಚಿಕೆಪಡಿಸುವುದಿಲ್ಲ.

 

ಧೂಪದ್ರವ್ಯ ಪ್ರಾರ್ಥನೆ: ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರು ನನ್ನ ಪ್ರಾರ್ಥನೆಯ ಮೂಲಕ ಕೆಲಸ ಮಾಡಲು ಬಯಸುವುದು ಎಷ್ಟು ದೊಡ್ಡ ಆಶೀರ್ವಾದ! ಆದರೆ ಇಂದಿನ ದಿನಗಳಲ್ಲಿ ಮನುಷ್ಯರಿಗೆ ಅಥವಾ ಭೂಮಿಯ ಮೇಲಿನ ವಸ್ತುಗಳಿಗೆ (ಸೆಲ್ ಫೋನ್‌ಗಳು) ಕೊಡುವ ಸಮಯವನ್ನೂ ಕೂಡ ದೇವರೊಂದಿಗೆ ಕಳೆಯಲು ಬಯಸುವುದಿಲ್ಲ, ಎಂಬುದೇ

ಅತ್ಯಂತ ದುಃಖದ ಸಂಗತಿ.

 

ರಕ್ತಬೋಳ: ರಕ್ತಬೋಳ ಎಂಬುದು ಪ್ರತಿಯೊಬ್ಬ ಕ್ರೈಸ್ತನು ತನ್ನ ಕೈಯಲ್ಲಿ ಎತ್ತಿಕೊಳ್ಳಬೇಕಾದ ಶಿಲುಬೆಯನ್ನು ತೋರಿಸುತ್ತಿದೆ. ಅಷ್ಟು ಮಾತ್ರವಲ್ಲ ಪ್ರಪಂಚದ ಸಂಪತ್ತಿಗೆ ಬಲಿಯಾಗದೆ ಪರಲೋಕದ ಪ್ರಸನ್ನತೆಗೆ ವಿಧೇಯರಾಗಿ ಕ್ರಿಸ್ತನ ಸುಗಂಧವನ್ನು ಇತರರಿಗೆ ಬಹಿರಂಗಪಡಿಸುವುದಾಗಿದೆ.

 

ಪ್ರಿಯರೇ! ನಾವು ಮೇಲೆ ನೋಡಿದ ನಂಬಿಕೆ, ಪ್ರಾರ್ಥನೆ ಮತ್ತು ಶಿಲುಬೆಯ ಜೀವನವು ಪರಲೋಕದ ಅತ್ಯುತ್ತಮ ನಿಧಿಗಳಾಗಿ ಕಂಡುಬರುತ್ತಿದೆ. ಆದ್ದರಿಂದ ಈ ಕ್ರಿಸ್‌ಮಸ್‌ ದಿನಗಳಲ್ಲಿ ಇಂತಹ ಗುಣಲಕ್ಷಣಗಳನ್ನು ಪಡೆಯಲು ಪ್ರಯತ್ನಿಸೋಣ. ಆಗ ನಾವು ಪರಲೋಕವು ಕೊಂಡಾಡುವ ಸಂಪತ್ತಾಗಿ ಮಾರ್ಪಡಲು ಸಾಧ್ಯ. ಆಮೆನ್.

- S. ಮನೋಜಕುಮಾರ್

 

ಪ್ರಾರ್ಥನಾ ಅಂಶ:

ಒಡಿಶಾದ ಕಾರ್ಯಸ್ಥಳದ ಹಳ್ಳಿಗಳಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ವಿಶ್ವಾಸಿಗಳ ಸಂಬಂಧಿಕರಿಗೆ ಸುವಾರ್ತೆ ಸಾರಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al