Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.12.2021
Share:

By Village Missionary Movement

Thursday, 09-Dec-2021

ಧೈನಂದಿನ ಧ್ಯಾನ(Kannada) – 09.12.2021

 

ಮರೆಯಾಗದ ಗುರುತುಗಳು

 

"ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು..." - 1 ತಿಮೊ. 1:15

 

ಪಟ್ ಎಂದು ಬಾಗಿಲು ತಟ್ಟುವ ಸದ್ದು ಕೇಳಿ ತಂದೆ ಗಾಬರಿಯಿಂದ ಎದ್ದರು. ಇದು ಬಾಬು ಕೋಪದಲ್ಲಿ ಮಾಡಿದ ಕೃತ್ಯ ಎಂದು ಭಾವಿಸಿದರು. ಹಲವು ವರ್ಷಗಳಿಂದ ಮನೆಯಲ್ಲಿ ನಡೆಯುತ್ತಿದ್ದ ಈ ಹೋರಾಟದಲ್ಲಿ ತನ್ನ ಯೌವನಸ್ಥನಾದ ಮಗನ ಮಾನಸಾಂತರ ಮಾತ್ರವೇ ತನ್ನ ಕುಟುಂಬಕ್ಕೆ ಸಮಾಧಾನವನ್ನು ಕೊಡಲು ಸಾಧ್ಯ ಎಂದು ಗ್ರಹಿಸಿದವರಾಗಿ ಅವನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಅವನು ಕೋಪ ಪಡುವುದರಿಂದ ಅವನ ಜೀವನದಲ್ಲಿ ಸಂಭವಿಸುವ ಹಾನಿಯ ಬಗ್ಗೆ ಹೇಳಿದರು. "ಕೋಪ ಬರುವಾಗ ಮನೆ ಗೋಡೆಗೆ ಮೊಳೆ ಹೊಡಿ" ಎಂದರು. ಮುಂಜಾನೆ ಮನೆಯ ಗೋಡೆಗೆ ಮೊಳೆ ಹೊಡೆಯುವ ಸದ್ದು ಕೇಳಿ ಎದ್ದವರು ಏನೂ ಮಾತಾಡದೆ ಓರೆಯಾಗಿ ಹೋದರು. ದಿನಗಳು ಕಳೆದವು. ಮೊಳೆ ಹೊಡೆಯುವ ಸದ್ದನ್ನು ಕೇಳಿ ದಿನವೂ ಏಳುವವರ ಕಿವಿಯಲ್ಲಿ, ಇಂದೋ ಅತಿ ದೊಡ್ಡ ಮೌನ. ಅದರಿಂದುಂಟಾದ ಸಂತೃಪ್ತಿಯೊಂದಿಗೆ ಎದ್ದವರು ಬಾಬುವಿನ ಬಳಿಗೆ ಹೋದರು.

 

"ಅಪ್ಪಾ! ನೀವು ಹೇಳಿದಂತೆಯೇ ಮಾಡಿದ್ದೇನೆ. ಮೊದಲ ದಿನ ನಾನು 50 ಮೊಳೆಗಳನ್ನು ಹೊಡೆದಿದ್ದೇನೆ. ಕ್ರಮೇಣ ಕಡಿಮೆಯಾಗುತ್ತಾ ನಿನ್ನೆ ಒಂದು ಮೊಳೆ ಮಾತ್ರವೇ ಹೊಡೆದೆ. ಇಂದು ಒಂದೂ ಹೊಡೆದಿಲ್ಲ ಅಪ್ಪಾ" ಎಂದವನ ಬಳಿ, "ತುಂಬಾ ಸಂತೋಷ ಮಗನೇ, ಈಗ ಆ ಮೊಳೆಗಳನ್ನು ಒಂದೊಂದಾಗಿ ಕಿತ್ತು ಹಾಕು" ಎಂದು ಹೇಳಿದರು. ಅವನು ಮೊಳೆಯನ್ನು ಕಿತ್ತುಹಾಕಿದರೂ ಮೊಳೆ ಹೊಡೆದಿದ್ದ ಬಿರುಕುಗಳನ್ನು ತೆಗೆದುಹಾಕಲು ಅವನಿಂದ ಸಾಧ್ಯವಾಗಲಿಲ್ಲ. ಅವನು ಮಾನಸಾಂತರ ಹೊಂದಿದರೂ ಬಿರುಕುಗಳು ಮರೆಯಾಗಲಿಲ್ಲವೇ! ನಮ್ಮ ಜೀವನದಲ್ಲಿಯೂ ನಾವು ಮಾಡುವಂತಹ ತಪ್ಪುಗಳು ನಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀರಬಹುದು.

 

"ಯೇಸುಕ್ರಿಸ್ತನು ಪಾಪಿಗಳನ್ನು ರಕ್ಷಿಸಲು ಲೋಕಕ್ಕೆ ಬಂದರು" ಎಂಬ ಕಾರಣದಿಂದ, ನಾವು ಏನು ತಪ್ಪು ಮಾಡಿದರೂ ನಮ್ಮ ಪಾಪವನ್ನು ಕ್ಷಮಿಸಲು ಯೇಸುಕ್ರಿಸ್ತನು ಕರುಣಾಮಯಿ ಎಂದು, ತಪ್ಪು ಮಾಡಿಬಿಟ್ಟು ಕ್ಷಮಾಪಣೆ ಕೇಳಿ ಬಿಡೋಣ ಎಂದು ನೆನೆಸಿ, ಶಾರೀರಿಕ ಚಿಂತೆಗಳಿಗೂ, ಇಚ್ಚೆಗಳಿಗೂ ಸ್ಥಳಕೊಟ್ಟು ಬಹಳ ನಿರ್ಲಕ್ಷ್ಯವಾಗಿ, ಸುಲಭವಾಗಿ ಪಾಪ ಮಾಡುತ್ತಿದ್ದೇವೆ. ಪಾಪಿಯನ್ನು ಪ್ರೀತಿಸುವ ಯೇಸು ಪಾಪವನ್ನು ದ್ವೇಷಿಸುತ್ತಾರೆ. ಒಂದು ಪಾಪಿ ನಿಜವಾಗಿಯೂ ಮಾನಸಾಂತರ ಹೊಂದುವಾಗ ಅವನನ್ನು ಕ್ಷಮಿಸಿ ಅಂಗೀಕರಿಸುವವರು ಇವನು ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುವಾಗ ದುಃಖಿತನಾಗಿ ಕಷ್ಟ ಪಡುವುದನ್ನು ನೆನೆಸಿ ನೋಡಬೇಕು. ಆದ್ದರಿಂದ, ಯೇಸುಕ್ರಿಸ್ತನ ಪ್ರೀತಿ ಮತ್ತು ಕೃಪೆಯನ್ನು ನಾವು ನಿರ್ಲಕ್ಷಿಸದೆ ಯೇಸು ಕ್ರಿಸ್ತನ ರಕ್ತದಿಂದ ಉಂಟಾದ ಪಾಪ ಕ್ಷಮಾಪಣೆಯನ್ನು, ಪುನಃ ಪಾಪವು ನಮ್ಮನ್ನು ಜಯಿಸದಂತೆ ಕೃಪೆಯನ್ನು ಕೇಳಿ ಪಡೆದು ಪರಿಶುದ್ಧವಾದ ಜೀವನವನ್ನು ಜೀವಿಸಲು ನಮ್ಮನ್ನು ಸಮರ್ಪಿಸಿಕೊಳ್ಳೋಣ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ಬೈಬಲ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ದೇವರ ಕೈಯಲ್ಲಿ ಅಂತ್ಯಕಾಲ ಉಜ್ಜೀವನದ ಉಪಕರಣಗಳಾಗಿ ಉಪಯೋಗವಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al