Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.12.2021
Share:

By Village Missionary Movement

Wednesday, 08-Dec-2021

ಧೈನಂದಿನ ಧ್ಯಾನ(Kannada) – 08.12.2021

 

ಹೀಗಿರಲು ಸಾಧ್ಯವೇ?

 

"ಇವನು ಕೂಗಾಡುವದಿಲ್ಲ, ಆರ್ಭಟಿಸುವದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವದಿಲ್ಲ" - ಯೆಶಾಯ 42:2

 

ಚೆನ್ನೈನ ಪ್ರತಿಷ್ಠಿತ ಥೆರೇಸಾ ಆಸ್ಪತ್ರೆಯಲ್ಲಿ ಸ್ವಯಂಸೇವಕ ತಂಡವು ಇದೆ. ಅನಿರೀಕ್ಷಿತ ಅಪಾಯಗಳು ಮತ್ತು ಅಪಘಾತಗಳಲ್ಲಿ ಜನರಿಗೆ ಸಹಾಯ ಮಾಡಲು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ತಾವಾಗಿಯೇ ಮುಂದೆ ಬಂದು ಸಹಾಯ ಮಾಡುವಂತಹ ನಿಸ್ವಾರ್ಥಿಗಳು. ಇದರಲ್ಲಿದ್ದ ವಾಲೆಂಟಿಯರ್ಸ್ ತಂಡವು ರಿಜಿಸ್ಟ್ರಾರ್ ನಲ್ಲಿ F.M.P.B ಯ ಸಂಸ್ಥಾಪಕರಾದ ಪ್ಯಾಟ್ರಿಕ್ ಜೋಶುವಾ ಅನ್ನನವರೂ ಮುಂದೆ ಬಂದು ತನ್ನ ಹೆಸರನ್ನು ರಿಜಿಸ್ಟ್ರಾರ್ ಮಾಡಿಕೊಂಡಿದ್ದರು. 

 

ಇದ್ದಕ್ಕಿದ್ದಂತೆ ಒಂದು ದಿನ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆಂದು, ಅವರಿಗೆ ಸಹಾಯದ ಅಗತ್ಯವಿದೆ ಎಂದೂ ಒಂದು ವರದಿ ಬಂತು. ಇದನ್ನು ಕೇಳಿದ ಕೆಲವೇ ಸೆಕೆಂಡ್‌ಗಳಲ್ಲಿ ಅವರು ತಮ್ಮ ದ್ವಿಚಕ್ರ ವಾಹನವನ್ನು ಚೆನ್ನೈ ರೈಲು ನಿಲ್ದಾಣಕ್ಕೆ ತೆಗೆದುಕೊಂಡು ಹೋದರು, ಆಗಾಗಲೇ ಅಲ್ಲಿದ್ದ ಮೂರು ವ್ಯಕ್ತಿಗಳೊಂದಿಗೆ ಸೇರಿ, ಪ್ರಜ್ಞೆತಪ್ಪಿ ಬಿದ್ದಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದರು. ಸರಿಯಾದ ಸಮಯಕ್ಕೆ ಸಹಾಯ ಬೇಕಾದವರಿಗೆ ಸಹಾಯ ಮಾಡಲು ಸಾಧ್ಯವಾಯಿತೇ ಎಂಬ ತೃಪ್ತಿಯಿಂದ ಪಕ್ಕದಲ್ಲಿದ್ದ ಮೂವರಲ್ಲಿ ಒಬ್ಬನ ಬಳಿ, "Sir, ನೀವು ಏನು ಕೆಲಸ ಮಾಡುತ್ತೀರ?" ಎಂದು ಕೇಳಿದರು. ಅದಕ್ಕೆ ಅವರು, "ನಾನು District collector" ಎಂದರಂತೆ.

 

ಯೇಸುಕ್ರಿಸ್ತನು ಕೂಡ ಪರಲೋಕದ ಶ್ರೇಷ್ಠತೆಯನ್ನು ತ್ಯಜಿಸಿ ಭೂಲೋಕದಲ್ಲಿ ತಾಳ್ಮೆಯ ಸ್ವರೂಪವನ್ನು ಧರಿಸಿ ಗುಲಾಮನ ರೂಪದಲ್ಲಿ ದನದ ಕೊಟ್ಟಿಗೆಯಲ್ಲಿ ಯಾವುದೇ ರೀತಿಯ ಅಧಿಕಾರವೂ, ಆರ್ಭಟವೂ, ಆಡಂಬರವೂ ಸೌಕರ್ಯವೂ ಇಲ್ಲದೇ ಮಾನವಕುಲವನ್ನು ವಿಮೋಚಿಸಲು ಬಂದರು. ರಾಜಾಧಿ ರಾಜನಾದ ಯೇಸು ಕ್ರಿಸ್ತನು ಅರಮನೆಯಲ್ಲೂ ಮತ್ತು ಎಸಿ ಕೋಣೆಯಲ್ಲೂ, ಮಂಚದ ಮೇಲೂ, ಹಾಸಿಗೆಯ ಮೇಲೂ ಮಲಗಿರಲಿಲ್ಲ. ನಾವು ನಮ್ಮ ಬಗ್ಗೆ ಯೋಚಿಸಿ ನೋಡೋಣ. ದನದ ಕೊಟ್ಟಿಗೆಯೆಂಬ ತೊಟ್ಟಿಲಲ್ಲಿ ಮಲಗಿರುವ ರಾಜಾಧಿ ರಾಜನ ಮುಂದೆ, ಬೀದಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ತಾರತಮ್ಯವಿಲ್ಲದೆ ಆಸ್ಪತ್ರೆಗೆ ಎತ್ತಲು ಸಹಕರಿಸಿದ ಜಿಲ್ಲಾಧಿಕಾರಿ ಮುಂದೆ ನಾವು ಹೇಗಿದ್ದೇವೆ? ನಾವು ವಿದ್ಯೆಯನ್ನು, ಸ್ಥಾನಮಾನ ಮತ್ತು ಅಧಿಕಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಹೆಮ್ಮೆಪಡುತ್ತಿದ್ದೇವೆಯೇ? ಅಥವಾ, ಈ ಭೂಮಿಗೆ ಬಂದು ಉದಯಿಸಿದ ರಕ್ಷಕನಂತೆ ನಮ್ರತೆಯಿಂದ ಕಾಣುತ್ತಿದ್ದೇವೆಯೇ? ಅಷ್ಟೇ ಅಲ್ಲ, ಯೇಸು ಕ್ರಿಸ್ತನು ಒಳ್ಳೆಯದನ್ನು ಮಾಡುತ್ತಾ ಸಂಚರಿಸುತ್ತಿದ್ದರು (ಅಪೊ. 10:38). ದಾರಿಯಲ್ಲಿ ಅರೆಜೀವವಾಗಿ ಬಿದ್ದಿದ್ದವನನ್ನು ಕಂಡು ವಾರೆಯಾಗಿ ಹೋದ ಯಾಜಕನು ಮತ್ತು ಲೇವಿಯನ ಹಾಗಲ್ಲದೇ ಒಳ್ಳೆಯ ಸಮಾರ್ಯನಾಗಿ ಮನಮರುಗಿ ಸಹಾಯ ಮಾಡಲು ಮನಸ್ಸುಳ್ಳವರಾಗಿ ಯೇಸುವಿನ ಹಾಗೆ ನಾವು ಕಾಣಲ್ಪಡಲು ಯೇಸುವಿನಂತೆ ನಾವು ಕಾಣಲು ಶ್ರಮಿಸೋಣ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಬೈಬಲ್ ಕಾಲೇಜು ವಿದ್ಯಾರ್ಥಿಗಳ ವಸತಿಗಾಗಿ ನಿರ್ಮಿಸುತ್ತಿರುವ ಕೊಠಡಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು; ಅಗತ್ಯಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al