By Village Missionary Movement
Tuesday, 07-Dec-2021ಧೈನಂದಿನ ಧ್ಯಾನ(Kannada) – 07.12.2021
ಸ್ವಾರ್ಥವಾದ ಕ್ರೈಸ್ತನು
"...ಸೈತಾನನ ಕೆಲಸಗಳನ್ನು ಲಯ ಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು." - 1 ಯೋಹಾನ 3:8
ಆದಿವಾಸಿಗಳ ಹಳ್ಳಿಯೊಂದರಲ್ಲಿ ಹೊಸ ರೋಗವೊಂದು ಇದ್ದಕ್ಕಿದ್ದಂತೆ ಜನರನ್ನು ತಾಕಿದಾಗ ಅನೇಕರು ಬಾಧಿಸಲ್ಪಟ್ಟರು. ಸುತ್ತಾ ಮುತ್ತಾ ಎಲ್ಲಿಯೂ ಕೂಡ ಆಸ್ಪತ್ರೆ ಮತ್ತು ಸಹಾಯ ಮಾಡಲು ವೈದ್ಯರೂ ಇಲ್ಲದೇ ಅನೇಕರು ಸಾಯುತ್ತಿದ್ದರು. ಈ ಸ್ಥಿತಿಯ ಬಗ್ಗೆ ವೈದ್ಯರಿಗೆ ತಿಳಿದಾಗ ಅವರು ಔಷಧವನ್ನು ತಂದು ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದು ಚಿಕಿತ್ಸೆ ನೀಡಿ ಹೋಗಲು ಮುಂದಾದರು. ವೈದ್ಯರು ಗ್ರಾಮದ ಗಡಿ ತಲುಪಿದಾಗ ಜನರು ವೈದ್ಯರು ಬಂದರೆಂದು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿ ಎರಡು ಮೂರು ದಿನ ಹಬ್ಬದೂಟ ಮಾಡಿ ವೈದ್ಯರನ್ನು ಹೊಗಳುತ್ತಾ ಕೊಂಡಾಡಿದರು. ನಾನು ಔಷಧಿ ಕೊಡಲು ತಾನೇ ಬಂದೆ ಎಂದು ಹೇಳಿದರೂ ನೀವು ಬಂದು ಬಿಟ್ಟಿರೇ ಎಂದು ಅವರ ಬರೋಣವನ್ನು ಕೊಂಡಾಡುತ್ತಲೇ ಇದ್ದರು. ಅವರು ಹಿಂತಿರುಗುವ ದಿನವೂ ಬಂತು. "ನಾನು ನಿಮ್ಮ ಬಳಿಗೆ ಬಂದದ್ದು ನಿಮ್ಮ ರೋಗವನ್ನು ವಾಸಿ ಮಾಡಲು, ಆದರೆ ನಾನು ಬಂದದ್ದನ್ನೇ ನೀವು ಕೊಂಡಾಡುತ್ತಾ ನಾನು ಬಂದ ಉದ್ದೇಶವನ್ನೇ ವ್ಯರ್ಥ ಮಾಡಿಬಿಟ್ಟಿರಿ. ನಾನು ಹಿಂತಿರುಗಿ ಹೋಗಲೇ ಬೇಕು” ಎಂದು ಹೇಳಿ ತುಂಬಾ ಬೇಸರದೊಂದಿಗೆ ಹಿಂತಿರುಗಿದರು. ಎಷ್ಟು ಭೀಕರ!
"ದೇವ ಕುಮಾರನು ಸೈತಾನನ ಕಾರ್ಯಗಳನ್ನು ಲಯ ಮಾಡುವುದಕ್ಕೇ ಪ್ರಕಟವಾದರು." ಆ ಸೈತಾನನ ಕಾರ್ಯವು ಇಂದಿಗೂ ಪ್ರತಿಯೊಬ್ಬ ಮನುಷ್ಯನಲ್ಲೂ ಪ್ರಕಟವಾಗುತ್ತಿದೆ. ಕ್ರೋಧ, ಅಸೂಯೆ, ಸಿಡುಕು, ದ್ವೇಷ, ಕಹಿ, ಭೌತಿಕತೆ, ಅಹಂಕಾರ, ಸೇಡು ಮುಂತಾದ ದುರ್ಗಣಗಳೆಲ್ಲಾ ಒಂದು ಮನುಷ್ಯನೊಳಗೆ ಸೈತಾನನ ಚಟುವಟಿಕೆಗಳು ನಡೆಯುತ್ತಿವೆ ಎಂಬುದನ್ನು ದೃಢಪಡಿಸುತ್ತವೆ. ಸಮಾಜದಲ್ಲಿರುವ ಎಲ್ಲಾ ಕೆಡುಕುಗಳಿಗೆ ಕಾರಣ, ವೈಯಕ್ತಿಕ ವ್ಯಕ್ತಿಯ ಹೃದಯವು ಸೈತಾನನ ಆಳ್ವಿಕೆಗೆ ಒಪ್ಪಿಸಿಕೊಡುವುದರಿಂದ ಮಾತ್ರವೇ ನಡೆಯುತ್ತದೆ. ಮನುಷ್ಯನೊಳಗೆ ನಡೆಯುವ ಇಂತಹ ಸೈತಾನನ ಕಾರ್ಯಗಳನ್ನು ನಾಶಮಾಡಲು ಹೃದಯದೊಳಗೆ ಒಂದು ರಕ್ಷಕನು ಬರುವ ಅಗತ್ಯವಿದೆ. ಅದಕ್ಕಾಗಿಯೇ ಕ್ರಿಸ್ತ ಯೇಸುವು ಲೋಕಕ್ಕೆ ಬಂದರು.
ವೈದ್ಯರನ್ನು ಸ್ವಾಗತಿಸುವುದರಲ್ಲೇ ಸಂಪೂರ್ಣ ಗಮನ ಹರಿಸಿ, ಚಿಕಿತ್ಸೆ ಹೊಂದದೇ ಹೋದ ಜನರಂತೆ ನಾವಿರದೇ, ಮೊದಲು ದೇವರನ್ನು ನಮ್ಮೊಳಗೆ ಕ್ರಿಯೆ ಮಾಡಲು ಅನುಮತಿಸಬೇಕು. ಇಲ್ಲದಿದ್ದರೆ ನಾವು ಮಾಡುವ ಎಲ್ಲಾ ವಿಧಿವಿಧಾನಗಳು, ಆರಾಧನೆಗಳು, ಹಬ್ಬ, ಸಂಭ್ರಮಗಳು ಅರ್ಥಹೀನವೇ. ಅವು ದೇವರನ್ನು ಮೆಚ್ಚಿಸದೆ ಕೋಪವನ್ನೆಬ್ಬಿಸುತ್ತವೆ. ಅವರು ನಮಗಾಗಿ ಸಿದ್ಧಪಡಿಸಿರುವ ಪಾಪಕ್ಷಮಾಪಣೆ, ರಕ್ಷಣೆ ಮತ್ತು ಪವಿತ್ರ ಜೀವನವನ್ನು ನಾವು ಬಯಸುವುದಾದರೆ ಆತನು ನಮ್ಮನ್ನು ಮತ್ತು ನಮ್ಮ ಆರಾಧನೆಯನ್ನು ನೋಡಿ ಆನಂದಿಸುತ್ತಾರೆ. ನಾವು ಪಾಪದ ಬಗ್ಗೆ ಚಿಂತಿಸದೆ ಕ್ರಿಸ್ತನು ಜನಿಸಿದ್ದಾರೆಂದು ಹಬ್ಬವನ್ನು ಆಚರಿಸುತ್ತಾ ಸಂಭ್ರಮಿಸುತ್ತಿದ್ದರೆ ಆತನು ನಮ್ಮನ್ನು ನೋಡಿ ಕಣ್ಣೀರು ಹಾಕಲು ಮಾತ್ರವೇ ಸಾಧ್ಯ. ಕ್ರಿಸ್ತನು ಯಾವ ಉದ್ದೇಶಕ್ಕಾಗಿ ಲೋಕಕ್ಕೆ ಬಂದರೆಂಬುದನ್ನು ಅರಿತು ಹಬ್ಬವನ್ನು ಆಚರಿಸೋಣ, ಸಂಭ್ರಮಿಸೋಣ.
- Bro. ಹನೀಶ್ ಸಮುವೇಲ್
ಪ್ರಾರ್ಥನಾ ಅಂಶ:
ಮಾಧ್ಯಮದ ಮೂಲಕ ನಡೆಯುವ ಸೇವೆಗಳಿಗಾಗಿ ಮತ್ತು ಅದರ ಆರ್ಥಿಕ ಅಗತ್ಯಗಳು ಪೂರೈಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482