Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.12.2021
Share:

By Village Missionary Movement

Friday, 03-Dec-2021

ಧೈನಂದಿನ ಧ್ಯಾನ(Kannada) – 03.12.2021

 

ವಿಧವೆಯ ಬಯಕೆ

 

"ಅವಳು...ವಿಧವೆ ಯಾಗಿದ್ದು ದೇವಾಲಯವನ್ನು ಬಿಟ್ಟು ಹೋಗದೆ ರಾತ್ರಿ ಹಗಲು ಉಪವಾಸಗಳಿಂದಲೂ ಪ್ರಾರ್ಥನೆಗಳಿಂದಲೂ ದೇವರನ್ನು ಸೇವಿಸುತ್ತಿದ್ದಳು." - ಲೂಕ 2:37

 

ನಾನು ಎಲ್ಲಾ ವಿಧವಾದ ಸಂತೋಷವನ್ನು ಕಳೆದುಕೊಂಡೆ. ವಯಸ್ಸು ಮೀರಿ ಹೋಯಿತು. ಇನ್ನು ನನ್ನಿಂದ ಏನು ಮಾಡಲು ಸಾಧ್ಯ? ಇನ್ನು ದೇವರಿಗಾಗಿ ಏನಾದರೂ ಮಾಡಲು ಸಾಧ್ಯವೋ? ಎಂದು ‌ಯೋಚಿಸುತ್ತಾ ನಿಟ್ಟುಸಿರು ಬಿಡುತ್ತಿರುವ ಮಹಿಳೆಯರ ಮಧ್ಯದಲ್ಲಿ, ಯೌವನ ಕಳೆದುಕೊಂಡು, ಆರೋಗ್ಯ ಕಳೆದುಕೊಂಡು, ದೇಹವು ಕುಗ್ಗಿ ಹೋಗಿ, ಬದುಕಿನ ಎಲ್ಲಾ ಕಾರ್ಯಗಳು ದೂರವಾದಾಗಲೂ ದೇವರಿಗೆ ಸೇವೆ ಮಾಡಲು ಸಾಧ್ಯ ಎಂದು ಸವಾಲು ಹಾಕುತ್ತಾರೆ ಹೆಚ್ಚು ಕಡಿಮೆ 84 ವರ್ಷದ ಅನ್ನಳು. ಇವರು ಯಾರು? ಬಾಲಕನಾದ ಯೇಸುವನ್ನು ಮೊಟ್ಟ ಮೊದಲು ದೇವಾಲಯಕ್ಕೆ ಕರೆತಂದಾಗ ಆ ಸಮಯಕ್ಕೆ ಸರಿಯಾಗಿ ಬಂದು ನಿಂತು ಕರ್ತನನ್ನು ಹೊಗಳಿದ ಒಂದು ಪ್ರವಾದಿನಿ.

 

ಕ್ರಿಸ್ತನ ಜನನಕ್ಕಾಗಿ ಕಾದಿದ್ದು ಆತನನ್ನು ಕಣ್ಣಾರೆ ನೋಡಿ ಸಂಭ್ರಮಿಸಿದ ಅನ್ನಳು ಒಂದು ಪ್ರಾರ್ಥನಾ ವೀರಳು! ತನ್ನ ಕನ್ಯಾವಸ್ಥೆಯಿಂದ ಗಂಡನೊಂದಿಗೆ ಏಳು ವರುಷ ಜೀವಿಸಿದ್ದಳು. ಆಕೆಯ ಮಕ್ಕಳ ಬಗ್ಗೆ ಯಾವುದೇ ವಿವರಗಳನ್ನು ಸತ್ಯವೇದದಲ್ಲಿ ಉಲ್ಲೇಖಿಸಿಲ್ಲ. ಅನ್ನಳು ಮಾಡುತ್ತಿದ್ದ ಕಾರ್ಯಗಳನ್ನು ಪವಿತ್ರಾತ್ಮನು ಒಂದೇ ವಾಕ್ಯದಲ್ಲಿ ಸುಂದರವಾಗಿ ಬರೆದಿಟ್ಟಿದ್ದಾರೆ. ಮೊದಲನೆಯದು ದೇವಾಲಯವನ್ನು ಬಿಡದ ವಿಧವೆ. ಹೆಚ್ಚಿನ ಕೆಲಸ ಮತ್ತು ಜವಾಬ್ದಾರಿಗಳಿಲ್ಲದಿರುವುದರಿಂದ ನೆರೆಹೊರೆಯವರ ಮನೆ ಕಾರ್ಯಗಳನ್ನು ಕೇಳಿ ಟೀಕಿಸುವ ವಿಧವೆಯರ ನಡುವೆ, ಅನ್ನಳು ಎಲ್ಲಿಯೂ ಹೋಗದೆ ದೇವಾಲಯದಲ್ಲಿಯೇ ಇದ್ದಳು. ಎಂತಹ ಒಂದು ಸುಂದರ ಸಾಕ್ಷಿ ನೋಡಿ.

 

ನನ್ನ ಅಜ್ಜಿ, ರಾಕ್ ಲ್ಯಾಂಡ್ ಮಿಷಿನರಿ ಅಯ್ಯ ಶಿವಕಾಶಿಯಲ್ಲಿ ಸೇವೆ ಮಾಡುತ್ತಿದ್ದ ಕಾಲದಲ್ಲಿ ಯೇಸುವನ್ನು ಅಂಗೀಕರಿಸಿದವರು. ಪತಿಯಾದ ವಡಿವೇಲ್ ಮುರುಗನ್ ರವರ ಬಳಿ ಏಟು ತಿಂದರೂ ಕೂಡ ಆಲಯಕ್ಕೆ ಹೋಗುವುದನ್ನು ನಿಲ್ಲಿಸುತ್ತಿರಲಿಲ್ಲ. ಏನೇ ನಡೆದರೂ ಆಲಯಕ್ಕೆ ಹೋಗಬೇಕೆಂದು ಬಯಸುತ್ತಿದ್ದರು. ಅವರ ಬಯಕೆ ಮಕ್ಕಳ ಮಕ್ಕಳಾದ ನಮ್ಮನ್ನು ಆವರಿಸಿತು. ಈ ರೀತಿ ಆಲಯವನ್ನು ಪ್ರೀತಿಸುವ ಒಂದು ಸಂತತಿ ರೂಪುಗೊಳ್ಳಲು ಅವರ ಭಕ್ತಿ ಮತ್ತು ಬಯಕೆಯೇ ಕಾರಣ! ಇದನ್ನು ಓದುತ್ತಿರುವ ನೀವು ಸತ್ಯವೇದವನ್ನು ದೇವರ ಪ್ರಸನ್ನತೆಯನ್ನೂ ಬಯಸುತ್ತಿದ್ದೀರಾ?

 

ಹದಿಹರೆಯದಲ್ಲಿ ಮತ್ತು ಮಧ್ಯವಯಸ್ಸಿನಲ್ಲಿಯೂ ಉಪವಾಸ ಮಾಡಲು ಯೋಚಿಸುವ ನಮಗೆ ಮಾದರಿಯಾಗಿದ್ದಾರೆ 84 ವರ್ಷದ ವಿಧವೆತಾಯಿ. ಹಗಲಿರುಳು ಉಪವಾಸದಿಂದ ಪ್ರಾರ್ಥಿಸುತ್ತಿದ್ದರು ಎಂದು ದೇವರನ್ನು ಆರಾಧಿಸುತ್ತಲೇ ಇದ್ದರು ಎಂದು ನೋಡುತ್ತೇವೆ. ನಾವು ನಿಜವಾಗಿಯೂ ದೇವರನ್ನು ಪ್ರೀತಿಸುವವರಾಗಿದ್ದರೆ ನಶಿಸಿಹೋಗುತ್ತಿರುವ ಆತ್ಮಗಳಿಗಾಗಿ ಒಡಕಿನಲ್ಲಿ ಉಪವಾಸದೊಂದಿಗೆ ನಿಲ್ಲಲು ಇಂದೇ ತೀರ್ಮಾನ ಮಾಡೋಣ.

 

ಪ್ರಿಯರೇ! ನಾವು ಅನ್ನಳಂತೆ ಉತ್ತಮವಾಗಿ ದೇವರನ್ನು ಪ್ರೀತಿಸೋಣ. ವಯಸ್ಸು ಮೀರಿ ಹೋಯಿತು ಎಂದು ಮನೆಯೊಳಗೇ ಅಡಗಿಕೊಳ್ಳದೇ ಪ್ರಾರ್ಥಿಸುತ್ತಲೇ ಇರೋಣ. ಮೆಸ್ಸೀಯನಾದ ಯೇಸು ಕ್ರಿಸ್ತನ ಮೂಲಕವೇ ರಕ್ಷಣೆ ಎಂಬುದನ್ನು ಘೋಷಿಸೋಣ. ಈ ರೀತಿ ಜೀವಿಸಲು ದೇವರು ನಮಗೆ ಸಹಾಯ ಮಾಡಲಿ.

- Mrs. ಜೆಬಾ ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಆಶ್ರಮದಲ್ಲಿರುವ ಮಕ್ಕಳ ಕಾಲೇಜು ಶುಲ್ಕ ಇನ್ನೂ ಪಾವತಿಸಿಲ್ಲ. ಈ ತಿಂಗಳೊಳಗೆ ಶುಲ್ಕವನ್ನು ಕಟ್ಟಿ ಮುಗಿಸಲು ದೇವರು ಸಹಾಯ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş casibom casibom giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş holiganbet Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet