Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.12.2021
Share:

By Village Missionary Movement

Thursday, 02-Dec-2021

ಧೈನಂದಿನ ಧ್ಯಾನ(Kannada) – 02.12.2021

 

ಕರೆಯುವಿಕೆ ಬಗ್ಗೆ ಭಯವೇ?

 

"...ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು." - ಮತ್ತಾಯ 2:11

 

ಯೋಸೇಫ ಮತ್ತು ಮರಿಯ ದಂಪತಿಗಳಿಗೆ ಒಂದು ಸೇವೆಯ ಕರೆಯುವಿಕೆ! ಈ ಲೋಕದಲ್ಲಿ ಮೆಸ್ಸೀಯನನ್ನು ಬೆಳೆಸಿ ಒಂದು ವ್ಯಕ್ತಿಯಾಗಿ ಮಾಡುವ ಸೇವೆ! ಈ ದಂಪತಿಗಳು ಬಡ ಹಿನ್ನೆಲೆಯಿಂದ ಬಂದವರು. ಈ ಪರಿಸ್ಥಿತಿಯಲ್ಲಿ ಒಂದೇ ಸ್ಥಳದಲ್ಲಿದ್ದು ದುಡಿದು ಕುಟುಂಬವನ್ನು ಸಾಕುವುದು ಕಷ್ಟ. ಆದರೆ ಯೋಸೇಫನು ತನ್ನ ಮರಗೆಲಸವನ್ನು ಒಂದೇ ಸ್ಥಳದಲ್ಲಿ ಮಾಡಲು ಸಾಧ್ಯವಾಗದೆ ಸರ್ಕಾರಿ ಸಮೀಕ್ಷೆಗಾಗಿ ಬೇತ್ಲೆಹೇಮಿಗೆ ಹೋಗಬೇಕಾಯಿತು. ಹೆರೋದನ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಐಗುಪ್ತಕ್ಕೆ ಓಡಿಹೋಗಬೇಕಾದ ಪರಿಸ್ಥಿತಿ, ಮತ್ತೆ ಇಸ್ರಾಯೇಲ್ ದೇಶಕ್ಕೆ ಬಂದು ನಜರೇತಿನಲ್ಲಿ ವಾಸಿಸಬೇಕಾದ ಸ್ಥಿತಿ ಉಂಟಾಯಿತು. ಹೀಗೆಲ್ಲಾ ನಡೆಯುವುದು ಅವರಿಗೆ ತಿಳಿಯದೇ ಇದ್ದರೂ ಒಬ್ಬ ಜವಾಬ್ದಾರಿಯುತ ಪತಿಯಾಗಿ, ಯೋಸೇಫನು ಮುಂದೆ ಏನು ಮಾಡಲಿದ್ದೇನೆ ಎಂದು ಯೋಚಿಸಿ ಚಿಂತಿಸಿರಬಹುದು, ಮರಿಯಳುಕೂಡ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಯೋಚಿಸಿರುತ್ತಾಳೆ.

 

ಇಂದು ಸೇವೆಯ ಕರೆಯುವಿಕೆಯನ್ನು ಆಹ್ವಾನವನ್ನು ಸ್ವೀಕರಿಸುವ ಅನೇಕರು, ನಾನು ಸೇವೆ ಮಾಡಿದರೆ ನನ್ನ ಅಗತ್ಯವು ಈಡೇರುತ್ತದೆಯೇ? ಎಂದು ಅವರು ಹಣದ ಬಗ್ಗೆ ಯೋಚಿಸಿ ಚಿಂತಿಸುತ್ತಾ ಸೇವೆಗೆ ಬರಲು ವಿಳಂಬ ಮಾಡುತ್ತಿದ್ದಾರೆ. ಅನೇಕರಿಗೆ ಸೇವೆ ಮಾಡುವ ಆಸೆ ಇರುತ್ತದೆ. ಆತ್ಮಗಳ ಮೇಲೆ ಭಾರವಿದೆ. ಆದರೆ ಅವರು ಪೂರ್ಣ ಸಮಯದ ಸೇವೆಗೆ ಬರಲು ಸಾಧ್ಯವಾಗದೆ ಮುಖ್ಯ ಅಡಚಣೆಯಾಗಿರುವುದು ಭವಿಷ್ಯದಲ್ಲಿ ನನ್ನ ಅಗತ್ಯವು ಪೂರೈಸಲ್ಪಡುತ್ತದಾ? ಎಂಬ ಪ್ರಶ್ನೆಯೇ!

 

ಆದರೆ ಈ ದಂಪತಿಗಳು ಈ ಪ್ರಶ್ನೆಯನ್ನು ಕೇಳಿ, ಕಲ್ಪನೆಯ ಭವಿಷ್ಯದ ಭಯವನ್ನು ಬರಮಾಡಿ ಈ ಸೇವೆಯ ಕರೆಯುವಿಕೆಯನ್ನು ತಿರಸ್ಕರಿಸಲಿಲ್ಲ. ನಿನ್ನ ಚಿತ್ತದಂತೆಯೇ ನಡೆಯಲೆಂದು ಅವರು ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ನಡೆದಿದ್ದೇನು? ಮಗು ಹುಟ್ಟಿದ ಕೆಲವೇ ವಾರಗಳಲ್ಲಿ ಎಲ್ಲೋ ಇದ್ದ ಶಾಸ್ತ್ರಿಗಳ ಗುಂಪೊಂದು ಬರುತ್ತದೆ. ಇವರು ಯಾರೆಂದು ಆಶ್ಚರ್ಯಪಡಲು, ಅವರು ಬಂದು ಮಗುವಿಗೆ ಸಾಷ್ಟಾಂಗವಾಗಿ ನಮಸ್ಕಾರ ಮಾಡಿದರು. ಅಲ್ಲಿ ಅನಿರೀಕ್ಷಿತ ಕಾರ್ಯವೊಂದು ನಡೆಯುತ್ತದೆ. ಅವರು ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು ಎಂದು ನೋಡುತ್ತೇವೆ. ನಿಧಿ ಎಂದಾಕ್ಷಣ ಚಿನ್ನವಷ್ಟೇ ಅಲ್ಲ, ಉಳಿದ ಇನ್ನೆರಡು ವಸ್ತುಗಳೂ ಅಮೂಲ್ಯವಾದದ್ದೇ ಎಂದು ಅರಿತುಕೊಳ್ಳಬಹುದು. ಹಲ್ಲೇಲೂಯ! ಜನಿಸಿದ ಯೇಸು ಕ್ರಿಸ್ತನನ್ನು ಬೆಳೆಸಲು ಐಗುಪ್ತಕ್ಕೆ ಹೋಗಲು ಪ್ರಯಾಣದ ವೆಚ್ಚ, ಐಗುಪ್ತದಲ್ಲಿ ಮನೆ ಬಾಡಿಗೆಗೆ ಅಡ್ವಾನ್ಸ್ ಗೆ, ಮತ್ತು ಅಲ್ಲಿ ಮರಗೆಲಸ ಪ್ರಾರಂಭಿಸಲು ಹೂಡಿಕೆಯ ಹಣ ಸೇರಿದಂತೆ ಅವರ ಎಲ್ಲಾ ಅಗತ್ಯಗಳನ್ನು ಪೂರೈಸಲು ದೇವರು ಈ ಕುಟುಂಬಕ್ಕೆ ಉಡುಗೊರೆಗಳನ್ನು ನೀಡುತ್ತಾರೆ.

 

ಸೇವೆಯ ಕರೆಯುವಿಕೆಯನ್ನು ಹೊಂದಿಕೊಂಡಿರುವ ಪ್ರಿಯರೇ! ನನ್ನ ಅಗತ್ಯವು ಪೂರೈಸಲ್ಪಡುತ್ತದೆಯೇ ಎಂದು ಇನ್ನೂ ಸೇವೆಗೆ ಬರಲು ಹಿಂಜರಿಯುತ್ತಿದ್ದೀರಾ? ನಂಬಿಕೆಯಿಂದ ಮೊದಲ ಹೆಜ್ಜೆ ಇಡಿ. ದೇವರು ನಿಮ್ಮ ಜೀವನದ ಅಗತ್ಯತೆಗಳನ್ನು ಪೂರೈಸಲು ತನ್ನ ನಿಧಿಯನ್ನು ಕೊಟ್ಟು ಒಂದು ಕೊರತೆಯೂ ಇಲ್ಲದಂತೆ ನಿಮ್ಮನ್ನು ನಡೆಸುತ್ತಾರೆ.

- J. ಸಂತೋಷ್

 

ಪ್ರಾರ್ಥನಾ ಅಂಶ:

ಈ ಚಳಿಗಾಲದಲ್ಲಿ ನಮ್ಮ ಆಶ್ರಮದಲ್ಲಿರುವ ಚಿಕ್ಕ ಮಕ್ಕಳಿಗೆ ಯಾವುದೇ ದೈಹಿಕ ಬಲಹೀನತೆಗಳು ಬರದಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet holiganbet sahabet onwin bets10 bets10 giriş bets10 güncel giriş betcio atlasbet bets10 bets10 giriş betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel jojobet jojobet holiganbet holiganbet cashwin grandpashabet betgit giriş betgit grandpashabet giriş grandpashabet