By Village Missionary Movement
Wednesday, 01-Dec-2021ಧೈನಂದಿನ ಧ್ಯಾನ(Kannada) – 01.12.2021
ಒಳಗೆ ಹೊರಗೆ
"ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು" - ಯೋಹಾನ 1: 9
ನಾನು ಯೇಸುವನ್ನು ತಿಳಿಯದ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ನಮ್ಮ ಪ್ರಾಂತ್ಯದಲ್ಲಿ ಒಂದೆರಡು ಕ್ರೈಸ್ತ ಕುಟುಂಬಗಳು ವಾಸಿಸುತ್ತಿದ್ದವು. ಡಿಸೆಂಬರ್ ತಿಂಗಳು ಪೂರ್ತಿಯಾಗಿ ಅವರು ತಮ್ಮ ಮನೆಗಳಲ್ಲಿ ಹಾಕಿರುವ ವರ್ಣರಂಜಿತ ನಕ್ಷತ್ರ, ಲ್ಯಾಂಟರ್ನ್‌ಗಳ ಅಲಂಕಾರ ಮತ್ತು ಕ್ರಿಸ್ಮಸ್ ಟ್ರೀಯನ್ನು ನೋಡಿ ನಾನು ಸಂತೋಷಪಡುತ್ತಿದ್ದೆನು. ವಿಶೇಷವಾಗಿ ಕೇರಳದಿಂದ ಬಂದಿರುವ ಶಿಕ್ಷಕರ ಕುಟುಂಬವೊಂದು ನನ್ನನ್ನು ಮತ್ತು ನನ್ನೊಂದಿಗಿದ್ದ ಇತರ ಕೆಲವರನ್ನು ಕರೆದು ಕೆಲವು ಸಿಹಿತಿಂಡಿಗಳನ್ನು ಕೊಟ್ಟು, ಸುಂದರವಾದ ಕ್ರಿಸ್‌ಮಸ್ ಹಾಡುಗಳನ್ನು ಹಾಡಿ ಪ್ರಾರ್ಥಿಸಿ ಕಳುಹಿಸುತ್ತಿದ್ದರು. ನನ್ನ ಬಾಲ್ಯದಲ್ಲಿ ನಡೆದ ಈ ಘಟನೆಯನ್ನು ಬಹುದಿನಗಳಿಂದ ನನ್ನ ಮನಸ್ಸಿನಲ್ಲಿ ನೆನೆದು, ನೆನೆದು ತುಂಬಾ ಸಂತೋಷಪಡುತ್ತೇನೆ. ಯಾವತ್ತಾದರೂ ಒಂದು ದಿನ ನಮ್ಮ ಮನೆಯಲ್ಲೂ ಸ್ಟಾರ್ ಕಟ್ಟಬೇಕೆಂದು ಮನಸ್ಸಿನಲ್ಲಿ ಆಸೆಯೂ ಇತ್ತು. ಆದರೆ ನಾನು ಕ್ರೈಸ್ತನಲ್ಲ.
ಕೆಲವು ದಿನಗಳು ಕಳೆದವು. ಹೃದಯದ ಇಚ್ಛೆಯನ್ನು ಪೂರೈಸುವ ದೇವರು ಯೇಸು ನನ್ನ ಆಸೆಗಳನ್ನು ಪೂರೈಸಿದರು. ಲೋಕದಲ್ಲಿರುವ ಪ್ರತಿಯೊಬ್ಬ ಮನುಷ್ಯನಿಗೆ ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದ ಯೇಸು ಕ್ರಿಸ್ತನು ನನ್ನೊಳಗೆ ಬಂದುಬಿಟ್ಟರು. ಸತ್ಯವೇದದಲ್ಲಿ ಯಾಕೋಬಿನಿಂದ ಒಂದು ಉದಯ ಸೂಚಕ ನಕ್ಷತ್ರವು ಉದಯಿಸುತ್ತದೆ ಎಂದು ಓದುತ್ತೇವೆ. ನಾನು ಮೊದಲು ಈ ನಕ್ಷತ್ರದಿಂದ ಹೊರಗಿದ್ದೆ. ಈಗ ನಾನು ಯೇಸುವಿನೊಳಗೆ ನಕ್ಷತ್ರವಾಗಿ ಕಾಣುತ್ತಿದ್ದೇನೆ. ನನ್ನಲ್ಲಿದ್ದ ಪಾಪದ ಕತ್ತಲೆಯು ನೀಗಿ, ಮಹಿಮೆಯ ಬೆಳಕಿನಲ್ಲಿ ನೆಲೆಗೊಳ್ಳಲು ದೇವರು ಕೃಪೆ ತೋರಿಸಿದ್ದಾರೆ. ಈಗ ನನಗೆ ಪ್ರತಿದಿನ ಕ್ರಿಸ್ಮಸ್ ಆಗಿದೆ.
ಇದನ್ನು ಓದುತ್ತಿರುವ ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಯೇಸು ಪ್ರೀತಿಸುತ್ತಿದ್ದಾರೆ. ನೀವು ಕ್ರೈಸ್ತರಾಗಿರಲಿ ಅಥವಾ ಬೇರೆಯವರಾಗಿರಲಿ ನೀವು ಸಂತೋಷವಾಗಿರಬೇಕೆಂದು ಕರ್ತನಾದ ಯೇಸು ಬಯಸುತ್ತಾರೆ. ಯೇಸುವಿನ ಜನನವನ್ನು ಮುಂದಿಟ್ಟು ಸುವಾರ್ತೆ ಸಾರುವಾಗ, "ಇಗೋ, ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಒಳ್ಳೇಸಮಾಚಾರ ವನ್ನು ನಾನು ನಿಮಗೆ ತಿಳಿಯಪಡಿಸುತ್ತೇನೆ" ಎಂದು ಕರ್ತನ ದೂತರ ಮೂಲಕ ಸಂದೇಶ ಹೇಳಲ್ಪಟ್ಟಿತು. ಆ ಸಂತೋಷದ ಬೆಳಕಾಗಿರುವ ಯೇಸು ನಮ್ಮೊಳಗೆ ಇರುವುದಾದರೆ ನಮ್ಮ ಇಡೀ ಜೀವನವು ಬೆಳಕು ಮತ್ತು ಸಂತೋಷದಿಂದ ತುಂಬಿರುತ್ತದೆ. ಈ ಕ್ರಿಸ್ಮಸ್ ದಿನಗಳಲ್ಲಿ ಈ ಸಂದೇಶದ ಮೂಲಕ ಯೇಸು ನಿಮ್ಮನ್ನು ಕರೆಯುತ್ತಿದ್ದಾರೆ. ನೀವು ಅವರ ಬಳಿಗೆ ಬನ್ನಿರಿ. ನೀವು ಈ ಬೆಳಕಿನಿಂದ ಹೊರಗುಳಿಯಬೇಡಿ, ಒಳಗೆ ಬನ್ನಿ. ಆಗ ಪ್ರತಿದಿನವೂ ಕ್ರಿಸ್ಮಸ್ ಆಗಿರುತ್ತದೆ. ಬನ್ನಿ ಸಂತೋಷವಾಗಿ ಆಚರಿಸೋಣ!
- P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482