Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.11.2021
Share:

By Village Missionary Movement

Tuesday, 30-Nov-2021

ಧೈನಂದಿನ ಧ್ಯಾನ(Kannada) – 30.11.2021

 

ಶರಣಾಗತಿ

 

“...ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ; ಅವು ದುಡಿಯುವದಿಲ್ಲ, ನೂಲುವದಿಲ್ಲ." - ಮತ್ತಾಯ 6:28

 

ಒಮ್ಮೆ ಒಬ್ಬ ಸನ್ಯಾಸಿ ತನಗೆ ಎಣ್ಣೆಬೇಕೆಂದು ಒಂದು ಆಲಿವ್ ಮರವನ್ನು ನೆಟ್ಟನು. ನಂತರ ಕರ್ತನೇ ಈ ಮರದ ಚಿಕ್ಕ ಬೇರುಗಳು ಬೇರೂರಿ ದೊಡ್ಡದಾಗಿ ಬೆಳೆಯಲು ಮಳೆ ಬೇಕು. ಹಾಗಾಗಿ ಸಣ್ಣ ತುಂತುರು ಮಳೆ ಬರಲಿ ಎಂದು ಪ್ರಾರ್ಥಿಸಿದರು. ದೇವರು ಮಳೆ ಬರುವಂತೆ ಮಾಡಿದರು. ದೇವರೇ ಈ ಮರಕ್ಕೆ ಸೂರ್ಯನ ಬೆಳಕು ಬೇಕು. ಸೂರ್ಯನನ್ನು ಕಳುಹಿಸಿ ಎಂದು ಹೇಳಿದರು. ಮಳೆಯಲ್ಲಿ ನೆನೆದ ಮೋಡಗಳಿಂದ ಸೂರ್ಯನು ಪ್ರಕಾಶಿಸಿದನು. ಮತ್ತೆ ಮರದ ಭಾಗಗಳನ್ನೆಲ್ಲಾ ಸ್ಥಿರಗೊಳಿಸಲು ಭಾರೀ ಹಿಮದ ಅಗತ್ಯವಿದೆ ಎಂದು ಪ್ರಾರ್ಥಿಸಿದರು. ಆಗ ಆ ಚಿಕ್ಕ ಮರದ ಮೇಲೆ ಹಿಮವು ಬಿದ್ದಿತು. ಆದರೆ ಸಂಜೆ ವೇಳೆಗೆ ಆ ಗಿಡ ಬಾಡಿ ಹೋಯಿತು. ಪಾಪ ಸನ್ಯಾಸಿ.

 

ಆ ಸನ್ಯಾಸಿಯು ತನ್ನಂತೆಯೇ ಇನ್ನೊಬ್ಬ ಸನ್ಯಾಸಿಯ ಬಳಿಗೆ ಹೋಗಿ ನಡೆದ ಸಂಗತಿಯನ್ನು ಹೇಳಿದರು. ಅದನ್ನು ಕೇಳಿದ ಸನ್ಯಾಸಿ, “ನಾನೂ ಒಂದು ಚಿಕ್ಕ ಮರವನ್ನು ನೆಟ್ಟಿದ್ದೇನೆ. ಇಗೋ ಅದು ಸಮೃದ್ಧಿಯಾಗಿ ಬೆಳೆದು ಬಿಟ್ಟಿದೆ. ನಾನು ನನ್ನ ಮರವನ್ನು ದೇವರ ಬಳಿ ನಂಬಿಕೆಯಿಂದ ಬಿಟ್ಟುಬಿಟ್ಟೆನು. ಆ ಮರವನ್ನು ಉಂಟು ಮಾಡಿದವರು ಅದಕ್ಕೆ ಏನು ಬೇಕು ಎಂದು ನನಗಿಂತ ಚೆನ್ನಾಗಿ ತಿಳಿದಿದ್ದಾರೆ. ನಾನು ಒಂದು ಷರತ್ತನ್ನೂ ಹಾಕಲಿಲ್ಲ, ಅದರ ಬಗ್ಗೆ ಯೋಚಿಸಲೂ ಇಲ್ಲ. ಅದಕ್ಕೆ ಬೇಕಾದ ಚಂಡಮಾರುತವೋ, ಬಿಸಿಲೋ, ಗಾಳಿಯೋ, ಮಳೆಯೋ ಯಾವುದು ಅಗತ್ಯವೋ ನೀವೇ ನೋಡಿಕೊಳ್ಳಿ ಎಂದು ಪ್ರಾರ್ಥಿಸಿದೆನು. ಇನ್ನುಮೇಲೆ ನೀನು ಗಿಡವನ್ನು ಬೆಳೆಸಿದರೆ ದೇವರ ಬಳಿ ಒಪ್ಪಿಸಿ ಬಿಡು. ಅವರು ಅದನ್ನು ನೋಡಿಕೊಳ್ಳುತ್ತಾರೆ” ಎಂದರು. ಚಾರ್ಲ್ಸ್ E. ಗೌಮೆನ್ ಅಮ್ಮನವರು ಬರೆದ ಈ ಘಟನೆ ನನ್ನನ್ನು ಬಹಳವಾಗಿ ಬದಲಾಯಿಸಿತು.

 

ಅಡವಿಯ ಹೂವುಗಳು ಅದೇ ರೀತಿಯಲ್ಲಿ ಬೆಳೆಯುತ್ತವೆ. ಮಳೆಯಲ್ಲೂ, ಹಿಮದಲ್ಲೂ ಬೆಳೆಯುತ್ತವೆ. ರಾತ್ರಿಯ ಬೆಳಕಿನಲ್ಲೂ ಮತ್ತು ಹಗಲಿನಲ್ಲಿ ಬಿಸಿಲಿನಲ್ಲೂ ಬೆಳೆಯುತ್ತವೆ. ಅವುಗಳನ್ನು ನೋಡಿಕೊಳ್ಳಲು ಯಾರೂ ಇಲ್ಲದಿದ್ದರೂ ದೇವರು ಅವುಗಳಿಗೂ ಹೊದಿಸುತ್ತಾರೆ. ವಾಕ್ಯವು ಹೇಳುತ್ತದೆ, "ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ. ಅವು ದುಡಿಯುವದಿಲ್ಲ, ನೂಲುವುದಿಲ್ಲ. ಆದರೆ ಯಾರೂ ಅವುಗಳಂತೆ ಧರಿಸುವುದಿಲ್ಲ”

 

ಹೌದು ಪ್ರಿಯರೇ, ಅಡವಿಯ ಹೂವುಗಳಿಗೆ ಹೊದಿಸುವ ದೇವರು ಇಂದು ನಮಗೂ ಹೊದಿಸುತ್ತಾರೆ. ಚಿಂತಿಸಬೇಡಿರಿ. ನಮ್ಮ ಜೀವನವನ್ನು ದೇವರ ಬಳಿ ಅರ್ಪಿಸೋಣ. ಅಡವಿಯ ಹೂವುಗಳಿಗಿಂತ ಅವರು ನಿಮ್ಮನ್ನು ಅಧಿಕವಾಗಿ ಪ್ರೀತಿಸುತ್ತಾರೆ. ಹಿಮದಲ್ಲಿ ಅರಳುವ ಹೂವಿಗಿಂತಲೂ ಅವರು ನಿಮ್ಮನ್ನು ಅಧಿಕವಾಗಿ ಪ್ರೀತಿಸುತ್ತಾರೆ. ಇಬ್ಬನಿಯಲ್ಲಿ ಅರಳುವ ಹೂವಿಗಿಂತಲೂ ಅಧಿಕವಾಗಿ ಅವರು ನಿಮ್ಮನ್ನು ಪ್ರೀತಿಸುತ್ತಾರೆ. ನಮ್ಮ ಪಾಪಗಳನ್ನು ಕ್ಷಮಿಸಿ ಪರಿಶುದ್ಧವಾಗಿ ಜೀವಿಸಲು ಆತನಿಗೆ ನಮ್ಮನ್ನು ಅರ್ಪಿಸೋಣ. ನಮ್ಮ ಅಗತ್ಯ ಏನೇ ಇದ್ದರೂ 1 ಪೇತ್ರ 5:7 ರಲ್ಲಿ ಹೇಳಿರುವಂತೆ ಆತನು ನಮ್ಮನ್ನು ವಿಚಾರಿಸುತ್ತಾರೆ. ನಮ್ಮ ಜೀವನವನ್ನು ದೇವರಿಗೆ ಅರ್ಪಿಸೋಣ, ಆತನನ್ನೇ ನಂಬೋಣ. ಆತನಿಗಾಗಿಯೇ ಜೀವಿಸೋಣ. ಅವರ ಬರೋಣಕ್ಕಾಗಿ ಎದುರು ನೋಡೋಣ. ಆಮೆನ್.

- Bro. ಅರುಳ್

 

ಪ್ರಾರ್ಥನಾ ಅಂಶ:

350 ಹಳ್ಳಿಗಳಲ್ಲಿ ಕ್ರಿಸ್ಮಸ್ ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಹಣದ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin