Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.11.2021
Share:

By Village Missionary Movement

Monday, 29-Nov-2021

ಧೈನಂದಿನ ಧ್ಯಾನ(Kannada) – 29.11.2021

 

ಹೃದಯದ ಕಾವಲು

 

"ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು." - ಜ್ಞಾನೋಕ್ತಿ 4:23

 

ಇಬ್ಬರು ವ್ಯವಸಾಯ ಗೆಳೆಯರಿದ್ದರು. ಅವರ ಬಳಿ ಬಂಜರು ಭೂಮಿ ಇತ್ತು. ಆ ವರ್ಷದಲ್ಲಿ ಚೆನ್ನಾಗಿ ಮಳೆಯಾಗಿದ್ದದರಿಂದ ತಮ್ಮ ಜಮೀನಿನಲ್ಲಿ ಏನಾದರೂ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ ಎಂದು ಇಬ್ಬರೂ ಮಾತನಾಡಿಕೊಂಡರು. ನಂತರ ಟೊಮೇಟೊ ಬೆಳೆಯೋಣ ಎಂದು ನೆನಸಿ ಕೆಲಸ ಆರಂಭಿಸಿದರು. ಬಿತ್ತಿದರು, ಗಿಡ ಸ್ವಲ್ಪ ಬೆಳೆಯಿತು. ಮೊದಲ ರೈತ ತನ್ನ ತೋಟದ ಸುತ್ತಲೂ ಬೇಲಿ ಹಾಕಿದನು. ನಂತರ ಗಿಡದ ಮಧ್ಯದಲ್ಲಿ ಬೆಳೆದಿದ್ದ ಕಳೆ ಕಿತ್ತುಹಾಕಿದನು. ಪ್ರತಿದಿನವೂ ಎಚ್ಚರಿಕೆಯಿಂದ ನೀರು ಹಾಕಿ ದನು. ಎರಡನೆಯ ರೈತ, “ಇವನಿಗೆ ಕೆಲಸವಿಲ್ಲ, ಇದಕ್ಕೆಲ್ಲ ಬೇಲಿ ಹಾಕಿ ಕಳೆ ಕಿತ್ತು ಹಾಕಬೇಕಾ? ನೀರು ಹಾಕಿದರೆ ಸಾಕಾಗುವುದಿಲ್ಲವೇ” ಎಂದು ಗೇಲಿಯಾಗಿ ಹೇಳುತ್ತಿದ್ದನು. ಫಲ ಕೊಡುವ ಸಮಯ ಬಂತು. ಎರಡೂ ತೋಟಗಳು ಕಾಯಿಗಳಿಂದ ತುಂಬಿಹೋಗಿದ್ದವು.

 

ಪ್ರತಿದಿನ ಸಂಜೆ ಇಬ್ಬರೂ ತೋಟವನ್ನು ನೋಡುವಾಗ, ಎರಡನೇ ರೈತ, “ನಾನು ಬೇಲಿ ಹಾಕಿಲ್ಲ, ಕಳೆ ಕಿತ್ತಿಲ್ಲ, ಆದರೂ ನನ್ನ ತೋಟದಲ್ಲೂ ಚೆನ್ನಾಗಿಯೇ ತಾನೇ ಫಲ ಕೊಟ್ಟಿದೆ. ನೀನು ಬೇಲಿ ಹಾಕಿ ನಿನ್ನ ಹಣವನ್ನು, ಕಳೆಯನ್ನು ಕಿತ್ತು ನಿನ್ನ ಸಮಯವನ್ನು ವ್ಯರ್ಥ ಮಾಡಿಬಿಟ್ಟೆ. ನೀನು ವ್ಯರ್ಥವಾದ ಕೆಲಸ ಮಾಡಿದ್ದೀಯ” ಎಂದು ಗೇಲಿ ಮಾಡಿದನು. ಟೊಮೇಟೊಗಳನ್ನು ಕೊಯ್ದು ನಾಳೆ ಬೆಳಗ್ಗೆ ಮಾರುಕಟ್ಟೆಗೆ ಹಾಕಿ ಬಿಡೋಣ ಎಂದು ಮಾತಾಡಿಕೊಂಡರು. ಅವರು ಜೋಳಿಗೆಯೊಂದಿಗೆ ಮುಂಜಾನೆಯೇ ತೋಟಕ್ಕೆ ಬಂದರು. ಬೇಲಿಯಿಲ್ಲದ ತೋಟದಲ್ಲಿದ್ದ ಕಾಯಿಗಳನ್ನೆಲ್ಲಾ ಕಿತ್ತುಕೊಂಡು ತೋಟವೇ ಖಾಲಿಯಾಗಿ ಬಿದ್ದಿತ್ತು. ಯಾರೋ ಒಬ್ಬರು ತೋಟವನ್ನು ಬಹಳ ದಿನಗಳಿಂದ ಗಮನಿಸಿ, ಕೀಳಲು ಸರಿಯಾದ ಸಮಯವನ್ನು ನೋಡಿ ಬೇಲಿಯೂ ಇಲ್ಲದ ಕಾರಣ ಅದನ್ನು ಅನಾಯಾಸವಾಗಿ ಕಿತ್ತುಕೊಂಡರು. ಇದನ್ನು ನೋಡಿದ ತಕ್ಷಣ ಎರಡನೇ ರೈತನಿಗೆ ಗಂಟಲಲ್ಲಿ ದುಃಖ ತುಂಬಿತು. ದುಃಖದಿಂದ ಮನೆಗೆ ಹಿಂತಿರುಗಿ ಹೋದನು.

 

ಹೌದು, ಬೇಲಿಯಿಲ್ಲದ ಭೂಮಿಗೆ ಸಂರಕ್ಷಣೆಯಿಲ್ಲದಂತೆಯೇ, ನಮ್ಮ ಹೃದಯವನ್ನು ಕಾಪಾಡಿಕೊಳ್ಳದಿದ್ದರೆ ಅದು ನಮ್ಮ ಆತ್ಮಕ್ಕೆ ದೊಡ್ಡ ನಷ್ಟವಾಗಿದೆ. ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ ಎಂದು ಸತ್ಯವೇದವು ಹೇಳುತ್ತದೆ. ಹಾಗಾದರೆ ಹೃದಯವನ್ನು ಹೇಗೆ ಕಾಪಾಡಿಕೊಳ್ಳವುದು? ದೇವರ ವಾಕ್ಯವೆಂಬ ಬೇಲಿಯಿಂದ ಸಂರಕ್ಷಿಸಬೇಕು. ನಾವು ಅಜಾಗರೂಕರಾಗಿರುವಾಗ ಸೈತಾನನು ಕಳೆಗಳನ್ನು ಬಿತ್ತಿ ಹೃದಯವನ್ನು ಕೆಡಿಸಲು ಸಿದ್ಧವಾಗಿರುತ್ತಾನೆ. ಶೋಧನೆಯನ್ನು ಜಯಿಸಲು, ಅಸಹ್ಯವಾದ ಪಾಪದಿಂದ ನಮ್ಮನ್ನು ತಪ್ಪಿಸಲು ದೇವರ ವಾಕ್ಯವೆಂಬ ಬೇಲಿ ಅಗತ್ಯ. ಕಾಪಾಡಿಕೊಂಡ ಹೃದಯದಲ್ಲಿ ಜೀವಧಾರೆಗಳು ಹೊರಡುವವು. ಅದು ನಮಗೆ ಮಾತ್ರವಲ್ಲದೆ ಅನೇಕರಿಗೆ ಆಶೀರ್ವಾದವಾಗಿರುತ್ತದೆ.

- D. ಆಲ್ವಿನ್ ಜೇಕಬ್

 

ಪ್ರಾರ್ಥನಾ ಅಂಶ:

ಕ್ರಿಸ್‌ಮಸ್‌ ಸಮಯದಲ್ಲಿ ನಡೆಯುವ ಸೇವೆಗಳ ಮೂಲಕ ಅನೇಕರು ರಕ್ಷಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş