Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.11.2021
Share:

By Village Missionary Movement

Saturday, 27-Nov-2021

ಧೈನಂದಿನ ಧ್ಯಾನ(Kannada) – 27.11.2021

 

ಪಾಡುಗಳೂ ಕೂಡ ಪರವಶವೇ ತಾನೇ

 

 "...ಪೌಲನೂ ಸೀಲನೂ ಪ್ರಾರ್ಥನೆ ಮಾಡುವವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು;” - ಅಪೊ. 16:25

 

"ಭಾರತೀಯ ರಕ್ತ ಪಾದಗಳ ಅಪೊಸ್ತಲನು" ಎಂದು ಕರೆಯಲ್ಪಡುವ ಸಾಧು ಸುಂದರ್ ಸಿಂಗ್ ರವರು ನೇಪಾಳದ ಹಳ್ಳಿಯೊಂದರಲ್ಲಿ ಜನರ ಮಧ್ಯದಲ್ಲಿ ಶುಭ ಸಂದೇಶವನ್ನು ಸಾರುತ್ತಿದ್ದರು. ಆ ದೇಶದಲ್ಲಿ ಸುವಾರ್ತೆಯನ್ನು ಸಾರಲು ನಿಷೇಧಿಸಿದ್ದದರಿಂದ ಅವರನ್ನು ಸೆರೆಮನೆಯಲ್ಲಿ ಬಂಧಿಸಿದರು. ಸೆರೆಮನೆಯಲ್ಲೂ ಕೂಡ ಕೈದಿಗಳಿಗೆ ಕ್ರಿಸ್ತನ ಪ್ರೀತಿಯನ್ನು ಹೇಳುತ್ತಾ ತನ್ನ ಸಮಯವನ್ನು ಕಳೆದರು. ಹೀಗಾಗಿ ಆತನನ್ನು ಥಳಿಸಿ ಬಟ್ಟೆಗಳನ್ನು ಹರಿದು, ಪಕ್ಕದಲ್ಲಿದ್ದ ದನದ ಕೊಟ್ಟಿಗೆಯಲ್ಲಿ ಇವರ ಕೈ ಕಾಲುಗಳನ್ನು ಒಂದು ಕಂಬಕ್ಕೆ ಕಟ್ಟಿ ಹಾಕಿದರು. ಅವರ ಮೇಲೆ ಜಿಗಣೆಗಳನ್ನು ಬಿಡುವಾಗ ಅವುಗಳು ಅವರ ರಕ್ತವನ್ನು ಹೀರಿದವು. ಅವರ ಶಕ್ತಿ ಕುಂದಿ ಹೋಯಿತು. ಆದಾಗ್ಯೂ, ಆ ಅಸಹನೀಯ ನೋವಿನಲ್ಲೂ ಅವರು ದೇವರನ್ನು ಪ್ರಾರ್ಥಿಸಲು ಮತ್ತು ಸ್ತುತಿಸಲು ಪ್ರಾರಂಭಿಸಿದರು. ಇದನ್ನು ನೋಡಿದ ಅಧಿಕಾರಿಗಳು ಆತನಿಗೆ ಮಾನಸಿಕ ಸ್ಥೈರ್ಯ ಇಲ್ಲ ಎಂದು ಹೇಳಿ ಬಿಡುಗಡೆಗೊಳಿಸಿದರು. ಇಷ್ಟು ಬಲಹೀನವಾಗಿ ಇದ್ದಾಗಲೂ ಪಕ್ಕದ ಊರಿಗೆ ಹೋಗಿ ಬೀದಿಯಲ್ಲಿ ನಿಂತು ಸುವಾರ್ತೆಯನ್ನು ಸಾರಲು ಆರಂಭಿಸಿದರು. ಈ ಜೈಲಿನ ಅನುಭವದ ಬಗ್ಗೆ ಹೇಳುವಾಗ, "ಆ ಜೈಲಿನಲ್ಲಿ ಕ್ರಿಸ್ತನ ಪ್ರಸನ್ನತೆ ನನ್ನೊಂದಿಗೆ ಇದ್ದದರಿಂದ, ಅದು ನನಗೆ ಆಶೀರ್ವಾದವಾದ ಮೋಕ್ಷವಾಗಿಯೇ ಕಾಣುತ್ತಿತ್ತು" ಎಂದು ಹೇಳಿದರು.

 

ಫಿಲಿಪ್ಪಿ ಪಟ್ಟಣದಲ್ಲಿ ಪೌಲ ಮತ್ತು ಸೀಲರು ಕ್ರಿಸ್ತನ ಸುವಾರ್ತೆಯನ್ನು ಸಾರುವಾಗ, ಅಲ್ಲಿರುವ ರೋಮನ್ನರು "ಅಂಗೀಕರಿಸಲು, ಕೈಗೊಳ್ಳಲು ಸಾಧ್ಯವಾಗದ ಆಚಾರಗಳನ್ನು ಬೋಧಿಸುತ್ತಿದ್ದಾರೆ" ಎಂದು ಅವರನ್ನು ಹೊಡೆದು, ಅವರ ಬಟ್ಟೆಗಳನ್ನು ಹರಿದು ಅವರನ್ನು ಭದ್ರವಾಗಿ ಕಾಯುವಂತೆ ಸೆರೆಮನೆಯ ಕಾವಲುಗಾರನಿಗೆ ಒಪ್ಪಿಸಿದರು. ಅವನು ಸೆರೆಮನೆಯ ಒಳಕೋಣೆಯಲ್ಲಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು. ನೋವು ಮತ್ತು ಶಾರೀರಿಕ ಬಲಹೀನತೆಯ ಮಧ್ಯದಲ್ಲೂ ಅವರು ದೇವರನ್ನು ನೋಡಿ ಪ್ರಾರ್ಥಿಸುವುದನ್ನು ಮತ್ತು ಸ್ತುತಿಸುವುದನ್ನು ಮುಂದುವರೆಸಿದರು. ದೇವರ ಶಕ್ತಿಯು ಸೆರೆಮನೆಯ ಅಸ್ತಿವಾರಗಳನ್ನು ಕದಲಿಸಿತು. ಅವರನ್ನು ಬಂಧಿಸಿದ್ದ ಎಲ್ಲಾ ಬೇಡಿಗಳು ಕಳಚಿ ಬಿದ್ದವು. ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕಾವಲುಗಾರನು ಕತ್ತಿಯನ್ನು ಹಿರಿದು ಆತ್ಮಹತ್ಯ ಮಾಡಿಕೊಳ್ಳಬೇಕೆಂದಿದ್ದನು. ತಕ್ಷಣವೇ ಪೌಲನು ಅವನನ್ನು ಕಾಪಾಡಿ ಕಾವಲುಗಾರರನ್ನು ಮತ್ತು ಅವನ ಕುಟುಂಬದವರನ್ನು ರಕ್ಷಣೆಯ ಮಾರ್ಗದಲ್ಲಿ ನಡೆಸಿದನು.

 

ಪ್ರೀತಿಯ ಸ್ನೇಹಿತರೇ! ನಾನು ಈ ಸಂಕಟಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸುತ್ತಿದ್ದೀರೋ, ಈ ಹೊರೆಯನ್ನು ಹೊರಲು ಸಾಧ್ಯವಾಗುತ್ತಿಲ್ಲವೇ ಎಂದು ಚಿಂತಿಸುತ್ತಿದ್ದೀರೋ? ಚಿಂತಿಸಬೇಡಿರಿ. ಈ ಸಾಮಾನ್ಯ ಪಾಡುಗಳು ಇನ್ನು ಮುಂದೆ ಬರಲಿರುವ ವೈಭವಕ್ಕೆ ಸಮಾನವಾಗಿಲ್ಲ. ನೀನು ಅನುಭವಿಸುತ್ತಿರುವ ಕಷ್ಟಗಳಿಂದ ಅನೇಕರು ದೇವರ ಪ್ರೀತಿಯನ್ನು ರುಚಿ ನೋಡಲು‌ ಸಾಧ್ಯ. ನಿನ್ನನ್ನೂ ಕೂಡ ಕೆಲವು ಸಂಕಟಗಳ ನಂತರ ತನ್ನ ಸಾಕ್ಷಿಯಾಗಿ ದೇವರು ನೆಲೆಗೊಳಿಸುತ್ತಾರೆ. ಶಿಲುಬೆಗೆ ನಿನ್ನನ್ನು ಬಿಟ್ಟುಕೊಟ್ಟು ಭವಿಷ್ಯದ ಮಹಿಮೆಯನ್ನು ಎದುರು ನೋಡುವಾಗ ಸಂಕಟಗಳು ಸಹ ಪರವಶವಾಗಿಯೇ ಕಾಣುತ್ತವೆ.

- T. ಮನೋಜ್ ಕುಮಾರ್

 

ಪ್ರಾರ್ಥನಾ ಅಂಶ: 

ಕಛೇರಿಯಲ್ಲಿ ಬಳಸುವ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳು ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş