Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.11.2021
Share:

By Village Missionary Movement

Friday, 26-Nov-2021

ಧೈನಂದಿನ ಧ್ಯಾನ(Kannada) – 26.11.2021

 

ಸಿದ್ಧವಾಗಿದ್ದೀರ?

 

 "...ಇಸ್ರಾಯೇಲ್ಯರಿಗೆ ರಥರಥಾಶ್ವಬಲಗಳಾಗಿದ್ದವನೇ..." - 2 ಅರಸುಗಳು 13:14

 

ಸಭೆಯಲ್ಲಿ ಸೇವಕರೊಬ್ಬರು "ನನ್ನ ಕೆಲಸಕ್ಕಾಗಿ ಯಾರು ಹೋಗುತ್ತೀರ?" ಎಂಬ ಅಂಶದಲ್ಲಿ ಸಂದೇಶ ಪ್ರಾರಂಭಿಸಿ ಸೇವೆಗೆ ಕರೆಯುತ್ತಿರುವ ದೇವರ ಶಬ್ದಕ್ಕೆ ಕಿವಿಗೊಟ್ಟು ಯಾರು ಬರುತ್ತೀರಿ ಎಂಬ ಪ್ರಶ್ನೆಯೊಂದಿಗೆ ತನ್ನ ಸಂದೇಶವನ್ನು ಮುಗಿಸಿ ಪ್ರಾರ್ಥಿಸಿದರು. ನಿಮ್ಮ ಕಣ್ಣುಗಳನ್ನು ತೆರೆದು ದೇವರ ಸೇವೆಗೆ ಬರುವವರು ಕೈ ಎತ್ತಿರಿ ಎಂದು ಹೇಳಿದರು. ಇಗೋ, ನಾನು ಬರುತ್ತೇನೆ ಎಂಬ ಧ್ವನಿ ಆ ಕೂಟದಲ್ಲಿ ಕೇಳಿಸಿತು. ಒಬ್ಬ ಯುವಕ ಕಣ್ಣೀರು ಸುರಿಸುತ್ತಾ ಎದ್ದುನಿಂತು, ‘ನನ್ನನ್ನು ದೇವರ ಕೆಲಸಕ್ಕೆ ಕಳುಹಿಸಿರಿ, ನಾನು ಹೋಗುತ್ತೇನೆ ಎಂದನು. ಇದರಲ್ಲಿ ಸಂಕಟದ ಸಂಗತಿಯೆಂದರೆ, ಸಾವಿರಾರು ಜನರ ಸಭೆಯಲ್ಲಿ ಒಬ್ಬ ಯುವಕ ಮಾತ್ರ ದೇವರ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡಿದ್ದಾನೆ. ನಂತರ ಅವನನ್ನು ಆದಿವಾಸಿಗಳ ನಡುವೆ ಸೇವೆ ಮಾಡಲು ಕಳುಹಿಸಲಾಯಿತು. ಅವನ ಮೂಲಕ ದೇವರು ಅನೇಕ ಆತ್ಮಗಳನ್ನು ರಕ್ಷಿಸಿ, ಅನೇಕ ಅದ್ಭುತ ಸೂಚಕಗಳನ್ನು ಮಾಡಿ ಆ ಜನರ ಮಧ್ಯದಲ್ಲಿ ದೊಡ್ಡ ಉಜ್ಜೀವನವನ್ನು ಉಂಟು ಮಾಡಿದರು.

 

ನಮ್ಮ ಅಮೂಲ್ಯವಾದ ನಿಧಿಯಾಗಿರುವ ಸತ್ಯವೇದದಲ್ಲಿ ಎಲೀಷನು ಸಹ ದೇವರು ತನ್ನನ್ನು ಕರೆಯುತ್ತಿದ್ದಾರೆ ಎಂದು ಎಲೀಯನ ಮೂಲಕ ತಿಳಿದುಕೊಂಡಾಗ, ದೇವರ ಮಾತಿಗೆ ವಿಧೇಯನಾಗಿ ತನ್ನ ಕುಟುಂಬವನ್ನೆಲ್ಲಾ ಬಿಟ್ಟು ಎಲೀಯನ ಹಿಂದೆ ಹೋಗಿ, ಅವನ ಕೈಗಳಿಗೆ ನೀರನ್ನು ಹಾಕುವ ಸಣ್ಣ ಸೇವೆಯನ್ನೇ ಮಾಡಿದನು. ಆದರೆ ದೇವರು ಅವನ ವಿಧೇಯತೆಯನ್ನು ಎಂದಿಗೂ ಮರೆಯಲಿಲ್ಲ. ಒಂದು ದಿನ ಬಂತು, ಎಲೀಷನ ಸ್ಥಾನವನ್ನು ಅವನ ಶಕ್ತಿಯನ್ನೂ ಎರಡರಷ್ಟು ಎಲೀಷನಿಗೆ ಕೊಟ್ಟು ಇಸ್ರಾಯೇಲ್ ಜನರನ್ನು ಉತ್ತಮವಾದ ದಾರಿಯಲ್ಲಿ ಜಯಕರವಾಗಿ ಕೊಂಡೊಯ್ಯುವ ಕುದುರೆ ವೀರನಾಗಿ ದೇವರಿಂದ ಉಪಯೋಗಿಸಲ್ಪಟ್ಟನು.

 

ಪ್ರಿಯರೇ! ಆ ಯುವಕನ ವಿಧೇಯತೆಯು ದೇವರ ಅಗತ್ಯವನ್ನು ಪೂರೈಸಿತು. ಇದರಿಂದಾಗಿ ಅನೇಕರು ರಕ್ಷಿಸಲ್ಪಟ್ಟರು. ಎಲೀಷನ ವಿಧೇಯತೆ, ಒಂದು ದೇಶದ ಜನರನ್ನು ಉತ್ತಮವಾದ ದಾರಿಯಲ್ಲಿ ಮುನ್ನಡೆಸಿತು. ನಿಮ್ಮ ಬಗ್ಗೆ ಏನು? ದೇವರು ತನ್ನ ಉಜ್ಜೀವನದ ಯೋಜನೆಯ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತಲೇ ಇದ್ದಾರೆ. ನಾವು ಸತ್ಯವೇದವನ್ನು ಓದುವಾಗ, ದೇವ-ಮನುಷ್ಯರ ಸಂದೇಶವನ್ನು ಕೇಳುವಾಗ ಪ್ರೇರೇಪಿಸುತ್ತಲೇ ಇದ್ದಾರೆ. ಆದರೆ ನಾವು ದೇವರು ನಮ್ಮ ಸ್ವಂತ ಬೇಕು ಬೇಡಗಳನ್ನು ಈಡೇರಿಸಿದರೆ ಸಾಕು ಎಂದು ನೆನೆಸಿ ಅವರ ಅಗತ್ಯಗಳನ್ನು ಕಂಡುಕೊಳ್ಳದೇ ಬಿಟ್ಟು ಬಿಡುತ್ತಿದ್ದೇವೆ. ಇದು ಸರಿಯಲ್ಲ, ನಾವು ಅವರ ಬಳಿ ಕೇಳುವ ಕಾರ್ಯಗಳು ಈ ಪ್ರಪಂಚದೊಂದಿಗೆ ನಾಶವಾಗುತ್ತವೆ. ಆದರೆ ಅವರು ನಿರೀಕ್ಷಿಸುವ ಅವಶ್ಯಕತೆಗಳೋ ಎಂದಿಗೂ ನಶಿಸಿಹೋಗದ ಆತ್ಮಗಳೇ. ಆದ್ದರಿಂದ ಅವರ ಅಗತ್ಯಗಳಿಗೆ ಮುಖ್ಯತ್ವ ಕೊಟ್ಟು ಅದನ್ನು ಪೂರೈಸೋಣ.

- Bro. ಜೆಬಸ್ ಕೊಯೀಲ್ ರಾಜ್

 

ಪ್ರಾರ್ಥನಾ ಅಂಶ:

ಕ್ರಿಸ್ಮಸ್ ಸಮಯದಲ್ಲಿ ನಡೆಯುವ ಸೇವೆಗಳಲ್ಲಿ ದೇವರ ಹಸ್ತವು ಜೊತೆ ಇರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin