Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.11.2021
Share:

By Village Missionary Movement

Thursday, 25-Nov-2021

ಧೈನಂದಿನ ಧ್ಯಾನ(Kannada) – 25.11.2021

 

ಕಾಯುತ್ತಿರುವ ಜೇಡಿಮಣ್ಣು

 

“...ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ" - ಯೆಶಾಯ 64: 8

 

ಒಬ್ಬ ನಿಪುಣ ಕುಂಬಾರನು ಸುಂದರವಾದ ಮಣ್ಣಿನ ಪಾತ್ರೆಗಳನ್ನು ಸೂಕ್ಷ್ಮವಾಗಿ ಮಾಡುತ್ತಿದ್ದನು. ಜೇಡಿಮಣ್ಣನ್ನು ಕಾಲಿಂದ ತುಳಿದು, ಚೆನ್ನಾಗಿ ಕಲಸಿ, ಹದಗೊಳಿಸಿ ಚಕ್ರದೊಳಗೆ ಹಾಕಿ ರೂಪಿಸುತ್ತಿದ್ದಾಗ ತನಗೆ ಬೇಕಾದ ಆಕಾರ ಸಿಗದೆ, ತನಗೆ ಬೇಕಾದ ಆಕಾರ ಸಿಗುವವರೆಗೂ ಮತ್ತೆ ಮತ್ತೆ ಅದನ್ನು ಸರಿಮಾಡುತ್ತಲೇ ತಾನು ಬಯಸಿದ ರೂಪವು ಬರುವವರೆಗೂ ಪ್ರಯತ್ನಿಸುತ್ತಲೇ ಇದ್ದನು. ಪ್ರತಿ ಬಾರಿ ಯಾವುದೋ ಒಂದು ಭಾಗವು ಬಾಗಿದಂತೆ, ಮುರಿದಂತೆ ಅಥವಾ ಸೊಟ್ಟಗೆ ಕಾಣುತ್ತಲೇ ಇತ್ತು. ಆದರೂ ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಸ್ವಲ್ಪವೂ ಅಲುಗಾಡದೆ ಪ್ರಯತ್ನವನ್ನು ಬಿಡುವುದೇ ಇಲ್ಲ ಎಂದು ನಿರ್ಧರಿಸಿದರು. ಆತನು ಸ್ವಲ್ಪ ಹೊತ್ತು ವಿಶ್ರಮಿಸಲು ಹೋದಾಗ ಅವನು ಮಾಡಿದ ಇತರ ಪಾತ್ರೆಗಳು, ಮಡಿಕೆ ಕುಡಿಕೆ, ಮತ್ತು ಹೂಕುಂಡಗಳು ಚಕ್ರದಲ್ಲಿನ ಮಣ್ಣಿನ ಆಕಾರವನ್ನು ನೋಡಿ ಅಣಕಿಸಿ ನಕ್ಕವು. ಅಷ್ಟು ಮಾತ್ರವಲ್ಲ, “ನಾವೆಲ್ಲರೂ ಅದೃಷ್ಟವಂತರು, ಎಷ್ಟು ಬೇಗನೆ ಅತ್ಯಂತ ಸುಂದರವಾದ ಉಪಯುಕ್ತವಾದ ಪಾತ್ರೆಗಳಾಗಿ ರೂಪಿಸಲಪಟ್ಟಿದ್ದೇವೆ. ಆದರೆ ನೀನು ಮಾತ್ರ ಮತ್ತೆ ಮತ್ತೆ ಪ್ರಯತ್ನಿಸಿದರೂ ನಿಷ್ಪ್ರಯೋಜಕವಾಗಿದ್ದೀಯ” ಎಂದು ಗೇಲಿ ಮಾಡಿದವು.

 

ಚಕ್ರದಲ್ಲಿದ್ದ ಮಣ್ಣಿಗೆ ದುಃಖವಾದರೂ, “ನನ್ನ ಒಡೆಯನ ಕೈಯಲ್ಲಿ ನಾನಿದ್ದೇನೆ; ಅವರು ಬಯಸಿದಂತೆ ರೂಪಿಸಲು ನನ್ನನ್ನು ಒಪ್ಪಿಸಿಕೊಟ್ಞಿದ್ದೇನೆ ” ಎಂದು ನೆನೆಸಿ ಮೌನವಾಗಿತ್ತು. ಮತ್ತೆ ಆ ಕುಂಬಾರನು ಬಂದು ತನ್ನ ಮನಸ್ಸಿನಲ್ಲಿ ಗೊತ್ತುಪಡಿಸಿದ ಆಕೃತಿ ಬರುವವರೆಗೂ ರೂಪಿಸಲು ಆರಂಭಿಸಿ ಅದರಲ್ಲಿ ಸುಂದರ ಕೆಲಸಗಾರಿಕೆ ಮಾಡಿ ಕಣ್ಣುಗಳನ್ನು ಆಕರ್ಷಿಸುವಂತಹ ಸುಂದರ ಫ್ಲಾಸ್ಕ್ ಆಗಿ ರೂಪಿಸಿದನು. ಅರಮನೆಯ ಸೇವಕರು ಕುಂಬಾರನಿಂದ ಕೆಲವು ವಸ್ತುಗಳನ್ನು ಖರೀದಿಸಿ ಅರಮನೆಯ ಉದ್ಯಾನವನ್ನು ಅಲಂಕರಿಸುತ್ತಿದ್ದರು. ಆ ಸಮಯದಲ್ಲಿ ಅರಮನೆಯ ಮಾಳಿಗೆಯಲ್ಲಿ ಸಂಚರಿಸುತ್ತಿದ್ದ ರಾಜನು ಸುಂದರವಾದ ಆ ಜಾರ್ ಅನ್ನು ನೋಡಿ, ಅದನ್ನು ತಾನು ಮಾತ್ರ ಉಪಯೋಗಿಸಲು ತನ್ನ ಕೋಣೆಗೆ ತರಲು ಅಪ್ಪಣೆ ಕೊಟ್ಟರು. ಅಣಕಿಸಿದ ಇತರ ಪಾತ್ರೆಗಳು ಆಶ್ಚರ್ಯದಿಂದ ನೋಡಿದವು.

 

ಅದೇ ರೀತಿ, ಯೋಸೇಫನು ಫರೋಹನ ಸ್ಥಾನದ ನಂತರದ ಸ್ಥಾನಕ್ಕೆ ಬರಲು ಇಡೀ ಐಗುಪ್ತ ದೇಶದ ಮೇಲೆ ಅಧಿಕಾರಿಯಾಗುವುದಕ್ಕೆ ಮೊದಲು ಅವನು ಹಾದುಬಂದ ಮಾರ್ಗಗಳು, ರೂಪಿಸಲ್ಪಟ್ಟ ಮಾರ್ಗವೂ ವ್ಯತ್ಯಾಸವಾದದ್ದು. ವೇದನೆಯಲ್ಲಿದ್ದ ಕಾಲಗಳು ಎಷ್ಟೋ! ಆದರೂ ದೇವರಲ್ಲಿ ಇಟ್ಟಿದ್ದ ನಂಬಿಕೆಯಿಂದ ತನ್ನನ್ನು ರೂಪಿಸಲು ಅವರ ಕೈಗಳಲ್ಲಿ ಒಪ್ಪಿಸಿ ಕೊಟ್ಟು, ಎಲ್ಲರಿಗೂ ಉಪಯುಕ್ತವಾಗುವ ಪಾತ್ರೆಯಾಗಿ ಮಾರ್ಪಟ್ಟನಲ್ಲವೇ! ನಾವು ಕೂಡ ನಮ್ಮ ಜೀವನವನ್ನು ಪರಮ ಕುಂಬಾರನಾಗಿರುವ ಯೇಸುವಿಗೆ ಒಪ್ಪಿಸಿಕೊಡುವಾಗ, ಆತನು ನಮಲ್ಲಿ ಆತನ ಯೋಜನೆಯನ್ನು ನೆರವೇರಿಸಲು ನಮ್ಮನ್ನು ರೂಪಿಸಿ, ಉಪಯುಕ್ತವಾದ ಪಾತ್ರೆಯನ್ನಾಗಿ ಮಾಡುತ್ತಾರೆ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ: 

ಶಾಲೆಗೆ ಹೋಗುತ್ತಿರುವ ಮಿಷನರಿಗಳ ಮಕ್ಕಳು ಯಾವುದೇ ರೀತಿಯ ವೈರಸ್ ದಾಳಿಗೆ ಒಳಗಾಗದಂತೆ ದೇವರು ಅವರನ್ನು ಕಾಪಾಡುವ ಹಾಗೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet holiganbet sahabet onwin bets10 bets10 giriş bets10 güncel giriş betcio atlasbet bets10 bets10 giriş betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel jojobet jojobet holiganbet holiganbet cashwin grandpashabet betgit giriş betgit grandpashabet giriş grandpashabet