By Village Missionary Movement
Tuesday, 23-Nov-2021ಧೈನಂದಿನ ಧ್ಯಾನ(Kannada) – 23.11.2021
ಹಠಾತ್ ದಾಳಿ
"...ದೇವರುಅಹಂಕಾರಿಗಳನ್ನು ಎದುರಿಸುತ್ತಾನೆ,..." - 1 ಪೇತ್ರ 5: 5
ಡಿ.ಎಲ್. ಮೂಡಿ ಎಂಬ ದೇವ ಸೇವಕರು ಒಂದು ಬಾರಿ ಇಂಗ್ಲೆಂಡಿನ ಒಂದು ನಗರದಲ್ಲಿ ನಡೆದ ಅತಿ ದೊಡ್ಡ ಕನ್ವೆನ್ಷನ್ ಕೂಟದಲ್ಲಿ ಮಾತನಾಡಿದ ನಂತರ ವೇದಿಕೆಯನ್ನು ಬಿಟ್ಟು ಕೆಳಗಿಳಿದರು. ಮೆಟ್ಟಿಲುಗಳನ್ನು ದಾಟಿದ ನಂತರ ಒಬ್ಬ ವ್ಯಕ್ತಿ ಧಾವಿಸಿ ಬಂದು ಮೂಡಿಯವರ ಕೈಯನ್ನು ಚೆನ್ನಾಗಿ ಕುಲುಕಿಸಿ "ಇಂದು ತುಂಬಾ ಚೆನ್ನಾಗಿ ಮಾತಾನಾಡಿದಿರಿ" ಎಂದು ಹೊಗಳಿದರು. ತಕ್ಷಣ ಮೂಡಿ "ಇಂದು ನನ್ನನ್ನು ಹೊಗಳುತ್ತಿರುವ ಎರಡನೇ ವ್ಯಕ್ತಿ ನೀವು" ಎಂದರು. ಆ ವ್ಯಕ್ತಿ ತಬ್ಬಿಬ್ಬಾಗಿ, ತನಗಿಂತ ಮುಂಚೆ ಯಾರನ್ನೂ ಕಾಣದೇ ಹೋದದ್ದರಿಂದ, "ನನಗಿಂತ ಮುಂಚೆ ನಿಮ್ಮನ್ನು ಹೊಗಳಿದವರು ಯಾರು?" ಎಂದು ಕೇಳಿದರು. ನಾನು ಸಂದೇಶ ಮುಗಿಸಿ ಕೆಳಗಿಳಿಯುವ ಮುನ್ನವೇ ಸೈತಾನನು ನನ್ನ ಕಿವಿಯ ಬಳಿ ಬಂದು, ಮೂಡಿಯವರೇ ಇಂದು ನಿಮ್ಮ ಉಪದೇಶ ತುಂಬಾ ಚೆನ್ನಾಗಿತ್ತು ಎಂದು ಹೊಗಳಿದನು" ಎಂದರು.
ಪರಿಶುದ್ಧ ಗ್ರಂಥದಲ್ಲಿ ಅಪೊಸ್ತಲನಾದ ಪೇತ್ರನು ಹೀಗೆ ಬರೆಯುತ್ತಾರೆ: ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ. ನಾವು ಈ ಭೂಮಿಯ ಮೇಲೆ ಜೀವಿಸುವ ದಿನಗಳಲ್ಲಿ ನಾವು ಹೊಂದಿರುವ ಎಲ್ಲವನ್ನೂ ದೇವರ ಕೃಪೆಯಿಂದಲೇ ಹೊಂದಿದ್ದೇವೆ. ಆದ್ದರಿಂದ ನಾವು ಈ ಭೂಮಿಯ ಮೇಲೆ ಜೀವಿಸುವ ದಿನಗಳಲ್ಲಿ "ಇದು ನನ್ನಿಂದ ಉಂಟಾದ ಆಶೀರ್ವಾದ, ನನ್ನ ಕೈ ಬಲ, ನನ್ನ ಸಾಮರ್ಥ್ಯವೇ ಇದನ್ನು ಗಳಿಸಿತು" ಎಂದೆಲ್ಲಾ ಹೇಳದಂತೆ ಎಚ್ಚರಿಕೆ ವಹಿಸೋಣ. ನಮ್ಮ ಜೀವನದಲ್ಲಿ ಹೆಮ್ಮೆಗೆ ಸ್ಥಳ ಕೊಡದೇ ಇರೋಣ.
ಇದನ್ನು ಓದುತ್ತಿರುವ ಸ್ನೇಹಿತರೇ! ಕ್ರೈಸ್ತ ಜೀವನದಲ್ಲಿ ಶೋಧನೆಗಳು ಹೇರಳವಾಗಿ ಬರುತ್ತವೆ. ಪ್ರತಿಯೊಂದು ಪರೀಕ್ಷೆಯು ಒಂದು ಯುದ್ಧಕ್ಕೆ ಸಮಾನವಾಗಿದೆ. ನಾವು ಯುದ್ಧದಲ್ಲಿ ಗೆದ್ದ ನಂತರ, ಯುದ್ಧದ ಮೊದಲು ನಾವು ಎಷ್ಟು ಜಾಗರೂಕರಾಗಿರುತ್ತೇವೋ ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಜಾಗರೂಕರಾಗಿರಬೇಕು. ವಿಜಯೋತ್ಸವದ ಸಂದರ್ಭದಲ್ಲಿ ಬರುವ ಈ ಹೆಮ್ಮೆಯ ವಿಚಾರ ನಮ್ಮನ್ನು ಕೆಳಗೆ ಬೀಳುವಂತೆ ಮಾಡುವ ಗುಪ್ತ ಬಲೆ ಎಂದೂ ಹೇಳಬಹುದು. ಹೌದು, ಸೈತಾನನು ಅಸೂಯೆ ಮತ್ತು ಹೆಮ್ಮೆಯಂತಹ ಬಲೆಯಲ್ಲಿ
ಅಜ್ಞಾತ ಪಾಪದಲ್ಲಿ ನಮ್ಮನ್ನು ಸಿಕ್ಕಿಸಲು ಅವಕಾಶವನ್ನು ಹುಡುಕುತ್ತಲೇ ಇರುತ್ತಾನೆ ಎಂಬುದನ್ನು ನಾವು ಮರೆಯಲೇಬಾರದು. ಆದ್ದರಿಂದ ನಾವು ಯಾವಾಗಲೂ ಜಾಗರೂಕರಾಗಿರೋಣ, ಅವನ ಗುಪ್ತ ಬಲೆಯಿಂದ ತಪ್ಪಿಸಿಕೊಳ್ಳೋಣ.
- T. ಶಂಕರ್ ರಾಜ್
ಪ್ರಾರ್ಥನಾ ಅಂಶ:
ಕಛೇರಿಯ ಕೆಲಸಗಳು ಮತ್ತು ಸಿಬ್ಬಂದಿಗಳನ್ನು ದೇವರು ಸರಿಯಾದ ರೀತಿಯಲ್ಲಿ ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482