By Village Missionary Movement
Monday, 22-Nov-2021ಧೈನಂದಿನ ಧ್ಯಾನ(Kannada) – 22.11.2021
ಹೃದಯದಲ್ಲಿ ಮೊದಲ ಸ್ಥಾನ
"ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು" - ಮತ್ತಾಯ 6:33
ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ದೇವರಿಗೆ ಪ್ರಥಮ ಸ್ಥಾನವನ್ನು ಕೊಡುವಾಗ ಸಾವಿರಾರು ಪ್ರಯೋಜನಗಳನ್ನು ಪಡೆಯಬಹುದು ಎಂಬುದಕ್ಕೆ Rev.G.S.Mohan ಎಂಬ ದೇವರ ಮನುಷ್ಯನು ಒಂದು ಉದಾಹರಣೆ. ಇವರು ತನ್ನ ಯೌವನ ಪ್ರಾಯದಲ್ಲಿ ತನಗೆ ಇಷ್ಟ ಬಂದಂತೆ ಬದುಕಿದವರು. ಯೇಸುವನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸಿದ ನಂತರ, ಪ್ರತಿದಿನವೂ ಕರ್ತನನ್ನು ಹುಡುಕಲು ಪ್ರಾರಂಭಿಸಿದರು. ಯೇಸು ಇಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ದೇವರ ಕರೆಯುವಿಕೆನ್ನು ಸ್ವೀಕರಿಸಿ, ದೇವರ ವಾಕ್ಯಕ್ಕೆ ವಿಧೇಯರಾಗಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತು ತನ್ನನ್ನು ಪೂರ್ಣ ಸಮಯದ ಮಿಷನರಿ ಕೆಲಸಕ್ಕೆ ಒಪ್ಪಿಸಿಕೊಟ್ಟರು. ಹೀಗೆ ಅವರು ತನ್ನ ಜೀವನದಲ್ಲಿ ದೇವರಿಗೆ ಮೊದಲ ಸ್ಥಾನ ಕೊಟ್ಟದ್ದರಿಂದ ಅವರು ಪಡೆದ ಪ್ರಯೋಜನಗಳು ಹಲವಾರು. ಅವರು ತಮಿಳು ಮೆಥೋಡಿಸ್ಟ್ ಚರ್ಚ್‌ನಲ್ಲಿ ಸಭೆಯ ಸೇವಕರಾಗಿ ಸೇವೆ ಸಲ್ಲಿಸಿ ಕೃಪೆ ಪಡೆದರು. ಸೇಲಂನ ಡ್ಯಾನಿಶ್‌ಪೇಟ್‌ನಲ್ಲಿರುವ ಬೇತೆಲ್‌ನಲ್ಲಿ ವಿವಿಧ ಕರ್ತವ್ಯಗಳಲ್ಲಿ, ವಿವಿಧ ಹುದ್ದೆಗಳಲ್ಲಿ ನಾಯಕತ್ವ ವಹಿಸಿ ಸೇವೆ ಸಲ್ಲಿಸಿದರು. ನಂತರ ಒಂದು ಮಿಷನರಿ ಸ್ಥಾಪನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಅನೇಕರನ್ನು ಕರ್ತನಲ್ಲಿ ಮುನ್ನಡೆಸಿದರು. ಇನ್ನೂ ಕುಟುಂಬದಲ್ಲಿ ಆಶೀರ್ವಾದ ಹೊಂದಿದರು. ಮಕ್ಕಳ ಜೀವನದಲ್ಲಿ ಉನ್ನತಿಯನ್ನು ಕಂಡರು. ದೇವರು ಅವರನ್ನು ಬಹಳವಾಗಿ ಹೆಚ್ಚಿಸಿದರು.
ಸತ್ಯವೇದದಲ್ಲಿಯೂ ಸಹ, ಯೆಹೂದದ ಅರಸನಾದ ಅಬೀಯ ರಾಜನು ಆಳ್ವಿಕೆಯಲ್ಲಿ ರುವಾಗ ಯುದ್ಧವು ಸಂಭವಿಸಿತು. ಆಗ ಅವರು ಮೊದಲು ಮಾಡಿದ ಕೆಲಸವೆಂದರೆ ಕರ್ತನನ್ನು ಹುಡುಕುವುದು. ದೇವರು ನಮ್ಮೊಂದಿಗಿದ್ದಾರೆ ಎಂದು ಧೈರ್ಯದಿಂದ ಹೇಳುವುದನ್ನು ನಾವು ನೋಡುತ್ತೇವೆ. ಜನರು ಮತ್ತು ರಾಜನು ದೇವರ ಮೇಲೆ ಅವಲಂಬಿತರಾಗಿದ್ದದರಿಂದ ಧೈರ್ಯದಿಂದ ಯುದ್ಧ ಮಾಡುವುದನ್ನು ನಾವು ನೋಡುತ್ತೇವೆ. ಅರಸನಾದ ಅಬೀಯನ ಕಾಲದಲ್ಲಿ ಯಾರೊಬ್ಬಾಮನು ತನ್ನ ಬಲವನ್ನು ಕಳೆದುಕೊಂಡನು, ಮತ್ತು ಕರ್ತನು ಅವನನ್ನು ಹೊಡೆದಿದ್ದರಿಂದ ಸತ್ತನು.
ಪ್ರೀತಿಯ ದೇವರ ಮಕ್ಕಳೇ, ನಾವು ಯೇಸುವನ್ನು ಅಂಗೀಕರಿಸಿದರೆ ಮಾತ್ರ ಸಾಕು ಎಂದು ಅಂದುಕೊಳ್ಳದೇ ಯೇಸುವಿಗೆ ಮೊದಲ ಸ್ಥಾನವನ್ನು ನೀಡುವಾಗ ರಾಜನಿಗೆ ಸಿಕ್ಕಿದ ಗೆಲುವು ಮತ್ತು ಮೇಲ್ಕಂಡ ದೇವ ಮನುಷ್ಯನಿಗೆ ಸಿಕ್ಕಿದ ಪ್ರಯೋಜನಗಳು ಖಂಡಿತವಾಗಿಯೂ ನಮ್ಮ ಜೀವನದಲ್ಲೂ ಸಿಗುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. ದೇವರು ತಾನೇ ಹೀಗೆ ಜೀವಿಸಲು ನಿಮ್ಮೆಲ್ಲರಿಗೂ ಕೃಪೆ ತೋರಿಸಲಿ. ಆಮೆನ್.
- Mrs. ಜೋನ್ಸ್ ಮೇರಿ ರಾಬರ್ಟ್
ಪ್ರಾರ್ಥನಾ ಅಂಶ:
ಕಾರ್ಯಾಲಯ ಗಳಿಗೆ ಸೇವೆಗೆ ಹೋಗುವ ವಾಹನಗಳಿಗೆ ದೇವರ ಸಂರಕ್ಷಣೆ ಉಂಟಾಗಲು, ಅಪಘಾತಗಳಿಂದ ದೇವರು ತಪ್ಪಿಸಿ ಕಾಪಾಡಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482