Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.11.2021 (Kids Special)
Share:

By Village Missionary Movement

Sunday, 21-Nov-2021

ಧೈನಂದಿನ ಧ್ಯಾನ(Kannada) – 21.11.2021 (Kids Special)

 

ನಿಮ್ಮಿಯ ಉತ್ತರ

 

"ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ" - 1 ಕೊರಿಂಥ 3:17

 

ತಂಗಾಳಿಯು ಬೀಸುತ್ತಿದ್ದ ಸಂಜೆಯ ವೇಳೆಯಲ್ಲಿ ಹಕ್ಕಿಗಳ ಸುಂದರ ಚಿಲಿಪಿಲಿ ಮತ್ತು ಮಕ್ಕಳ ಮಧುರವಾದ ಗಾಯನದ ಶಬ್ದ ಕೇಳುತ್ತಿತ್ತು. ಹೌದು ಅಲ್ಲಿ ಭಾನುವಾರ ಶಾಲೆ (ಸಂಡೇ ಸ್ಕೂಲ್) ನಡೆಯುತ್ತಿತ್ತು. ಹೆಫ್ಜೀಬಾ ಅಕ್ಕ ಪ್ರಾರಂಭಿಕ ಪ್ರಾರ್ಥನೆಯನ್ನು ಮಾಡಿ ಹೊಸ ಹಾಡು ಮತ್ತು ಕಥೆ ವಾಕ್ಯ ಎಲ್ಲವನ್ನೂ ಹೇಳಿ ಕೊಟ್ಟರು. Action Song ಹಾಡಿ ಮಕ್ಕಳೆಲ್ಲರೂ ಬಹಳ ಖುಷಿ ನೀಡಿದರು ನೀವು ಕೂಡ Super - ಆಗಿ ಆಕ್ಷನ್ ಮಾಡ್ತೀರ? Very good. ಕಳೆದ ವಾರ ಹೇಳಿಕೊಟ್ಟ ಬಾಯಿಪಾಠ ವಾಕ್ಯ ಯಾರಿಗೆಲ್ಲಾ ಗೊತ್ತು ಎಂದು ಪ್ರಶ್ನೆ ಮಾಡಿದರು ಹೆಫ್ಜೀಬಾ ಅಕ್ಕ. ಅನೇಕ ಮಕ್ಕಳು ಎದ್ದು ಬಾಯಿಪಾಠ ವಾಕ್ಯ ಹೇಳಿದರು. ಹಾಗೆ ಹೇಳಿದವರಿಗೆಲ್ಲ ಗಿಫ್ಟ್ ಕೊಟ್ಟು ಹುರಿದುಂಬಿಸಿದರು. ಏನು ಪುಟಾಣಿಗಳೇ ನೀವು ಕೂಡ ವಾಕ್ಯ ಹೇಳಿ ಉಡುಗೊರೆಗಳನ್ನು ತೆಗೆದುಕೊಳ್ಳುತ್ತೀರ ತಾನೇ! Super.

 

ನಂತರ ಹೆಫ್ಜೀಬಾ ಅಕ್ಕ ನಮ್ಮ ದೇವರು ದೊಡ್ಡವರಾ? ಚಿಕ್ಕವರಾ? ಎಂದು ಕೇಳಿದರು. ಎಲ್ಲರೂ ದೊಡ್ಡವರು ಎಂದು ತಕ್ಷಣ ಉತ್ತರ ಹೇಳಿದರು. ನಿಮ್ಮಿ ಮಾತ್ರ ಎದ್ದು ನಿಂತಳು. ನಿಮ್ಮಿ ಏನು ಹೇಳುತ್ತೀಯ ಎಂದು ಕೇಳಿದಾಗ, ಯೇಸಪ್ಪ ನನ್ನ ಪುಟ್ಟ ಹೃದಯದೊಳಗೆ ಇದ್ದಾರಲ್ಲವೇ ಹಾಗಾದರೆ ದೇವರು ಚಿಕ್ಕವರು ತಾನೇ! ಎಂದು ನಿಮ್ಮಿ ಹೇಳಿದ ಕೂಡಲೇ ಎಲ್ಲರೂ ಆಶ್ಚರ್ಯಪಟ್ಟರು. ಅಕ್ಕ ನಿಮ್ಮಿಯನ್ನು ಹೊಗಳಿ ಉಡುಗೊರೆ ಕೊಟ್ಟರು. ನಿಮ್ಮಿ ತುಂಬಾ ಸಂತೋಷಪಟ್ಟಳು. ನೀವೆಲ್ಲರೂ ಹೇಳಿದ ಹಾಗೆ ದೇವರು ದೊಡ್ಡವರೇ ಏಕೆಂದರೆ ಅವರು ದೊಡ್ಡ ಕಾರ್ಯಗಳನ್ನು ಮಾಡುವವರು. ಆದರೆ ನಿಮ್ಮಿ ಹೇಳಿದ ಹಾಗೆ ಪುಟ್ಟ ಹೃದಯದಲ್ಲಿ ಬಂದು ನೆಲೆಸುತ್ತಾರೆ ಮತ್ತು ನಮ್ಮೊಂದಿಗೆ ನೆಲೆಸಲು ತನ್ನನ್ನು ತಾನು ಪರಿವರ್ತಿಸಿಕೊಳ್ಳುತ್ತಾರೆ. ನಾವು ದೇವರ ಆಲಯವಾಗಿದ್ದೇವೆ. ನೀವು ಕೂಡ ನಿಮ್ಮ ಹೃದಯದಲ್ಲಿ ಯೇಸಪ್ಪನಿಗೆ ಸ್ಥಳ ಕೊಡುತ್ತೀರ? Jesus ಮಾತ್ರ ಹೃದಯದೊಳಗೆ ಬಂದುಬಿಟ್ಟರೆ ನಿಮ್ಮ ಜೀವನವನ್ನು Super ಆಗಿ ಮಾರ್ಪಡಿಸುತ್ತಾರೆ. ನಿಜವಾದ ಸಂತೋಷವು ನಿಮ್ಮೊಳಗೆ ಉಕ್ಕಿ ಹರಿಯುತ್ತದೆ. ಯೇಸಪ್ಪಾ ನನ್ನ ಹೃದಯದೊಳಗೆ ಬನ್ನಿ ಎಂದು ಆಸೆಯಿಂದ ಕರೆದರೆ ಕೂಡಲೇ ಬಂದು ಬಿಡುತ್ತಾರೆ. ನಿಮ್ಮಿ ಹೃದಯದಲ್ಲಿ ಯೇಸಪ್ಪ ಇದ್ದದರಿಂದಲೇ ಆಕೆ ಧೈರ್ಯವಾಗಿ ಉತ್ತರಿಸಿದಳು. ನೀವು ಹಾಗೆ ಹೇಳಲು ಸಾಧ್ಯವಾ? ಇಲ್ಲದಿದ್ದರೆ ಇಂದೇ ಕರೆಯಿರಿ. ಯೇಸಪ್ಪ ನಿಮ್ಮ ಹೃದಯದೊಳಗೆ ಬಂದರೆ ಸಾಕು ನಂತರ ಇನ್ನೇನು? Happyಯಾದ life ಅಷ್ಟೇ. ಏನು ಪುಟಾಣಿಗಳೇ! Jesus - ಗೆ ನಿಮ್ಮ ಹೃದಯದಲ್ಲಿ ಸ್ಥಾನ ನೀಡಲು ರೆಡಿತಾನೇ. Super... Super... Super!

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al