Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.11.2021
Share:

By Village Missionary Movement

Saturday, 20-Nov-2021

ಧೈನಂದಿನ ಧ್ಯಾನ(Kannada) – 20.11.2021

 

ಕರುಣೆಯ ಕಾಲ

 

"ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು" - ಪ್ರಲಾಪಗಳು 3:22

 

ಗುಜರಾತ್‌ನಲ್ಲಿ 2001 ನೇ ವರ್ಷ ಗಣರಾಜ್ಯೋತ್ಸವದಂದು ಕೆಲವು ಸೆಕೆಂಡುಗಳು ಸಂಭವಿಸಿದ ಭೂಕಂಪ ನಮ್ಮ ದೇಶದಲ್ಲಿ ಬಹು ದೊಡ್ಡ ವಿನಾಶವನ್ನು ಉಂಟುಮಾಡಿತು. ಅದರಲ್ಲಿ ಹೆಚ್ಚು ಹಾನಿಗೊಳಗಾದ ಜಿಲ್ಲೆ ಭುಜ್. ಗಣರಾಜ್ಯೋತ್ಸವದಂದು 400 ಮಕ್ಕಳು ಅಲ್ಲಿಗೆ ಮೆರವಣಿಗೆ ಹೋದಾಗ, ಕುಸಿದು ಬಿದ್ದ ಕಟ್ಟಡದ ಅಡಿಯಲ್ಲಿ ಸಿಲುಕಿ ಅನೇಕರು ಸಾವನ್ನಪ್ಪಿದರು. ಅಂಜಾರ್ ಮತ್ತು ಕುಚ್ ಜಿಲ್ಲೆಗಳಲ್ಲಿ, ಆ ಮಕ್ಕಳ ಕಿರುಚಾಟ ಮತ್ತು ಅವರನ್ನು ಹುಡುಕುತ್ತಿರುವ ಪೋಷಕರ ಅಳಲು ಕೇಳಿಸಿತು. ಟನೀಟ ಎಂಬ ಒಂದು ಕ್ರೈಸ್ತ ಮಹಿಳೆ ಆ ಸಮಯದಲ್ಲಿ ತನ್ನ ಕಚೇರಿಯಿಂದ ಹೊರ ಹೋಗಿದ್ದರು. ಅವರು ಹೋದ ಸ್ವಲ್ಪ ಸಮಯದಲ್ಲೇ ಭೂಕಂಪ ಸಂಭವಿಸಿ, ಆ ಕಚೇರಿ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಆಗ ಕಚೇರಿಯಲ್ಲಿ ನಾನು ಇದ್ದಿದ್ದರೆ ಅಂದೇ ಸಾಯುತ್ತಿದ್ದೆನು ಎಂದು, ಇಂದಿಗೂ ನಾನು ಜೀವಂತವಾಗಿರುವುದು ಕರ್ತನ ಪರಿಶುದ್ಧ ಕೃಪೆಯೇ ಎಂದು ಹೇಳಿದರು.

 

ಈ ಕರೋನಾ ಅವಧಿಯಲ್ಲೂ ಅನೇಕ ದೇವರ ಸೇವಕರು ಮತ್ತು ದೇವರ ಮಕ್ಕಳು ಸತ್ತು ಹೋದರು. ಆದರೆ ನಾವು ಜೀವಿಸುತ್ತಿರುವುದು ದೇವರ ಶುದ್ಧ ಕೃಪೆಯೇ! “ಸಿಲೋವಾಮಿನಲ್ಲಿರುವ ಗೋಪುರವು ಬಿದ್ದು ಹದಿನೆಂಟು ಜನರನ್ನು ಕೊಂದಿತೇ. ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದ ಎಲ್ಲಾ ಜನರಿಗಿಂತ ಅವರು ಅಪರಾಧಿಯಾಗಿದ್ದರೆಂದು ನೆನೆಸುತ್ತೀರ? ಆ ರೀತಿಯಲ್ಲ ಎಂದು ನಿಮಗೆ ಹೇಳುತ್ತೇನೆ. ನೀವು ಮಾನಸಾಂತರ ಹೊಂದದೇ ಇದ್ದರೆ, ನೀವೆಲ್ಲರೂ ಹಾಗೆ ನಾಶವಾಗುತ್ತೀರಿ ಎಂದರು. ” ಆಗ ಯೇಸು ಒಂದು ಸಾಮ್ಯವನ್ನು ಹೇಳಿದರು, “ಒಬ್ಬ ಮನುಷ್ಯನು ತನ್ನ ದ್ರಾಕ್ಷಿತೋಟದಲ್ಲಿ ಒಂದು ಅಂಜೂರದ ಮರವನ್ನು ನೆಟ್ಟಿದ್ದನು; ಒಬ್ಬರು ಬಂದು ಅದರಲ್ಲಿ ಹಣ್ಣನ್ನು ಹುಡುಕಿದಾಗ ಒಂದೂ ಕಾಣಲಿಲ್ಲ. ಆಗ ಅವರು ಇದನ್ನು ಕಡಿದುಹಾಕು, “ಇದು ಯಾಕೆ ಭೂಮಿಯನ್ನೂ ಹಾಳುಮಾಡುತ್ತಿದೆ?” ಎಂದರು. “ಅಯ್ಯಾ, ಇದು ಈ ವರ್ಷವೂ ಇರಲಿ, ಫಲ ಕೊಟ್ಟರೆ ಸರಿ, ಇಲ್ಲದಿದ್ದರೆ ಕಡಿದುಹಾಕಬಹುದು" ಎಂದು ಹೇಳಿದರು.

 

ಈ ಸಾಮ್ಯದಲ್ಲಿ ಕರ್ತನು ನಮ್ಮನ್ನು ಜೀವಂತವಾಗಿ ಉಳಿಸಿರುವುದು ನಾವು ಫಲ ಕೊಡಬೇಕು ಎಂಬುದಕ್ಕಾಗಿಯೇ. ಸತ್ತವರು ಪಾಪಿಗಳು ಎಂಬುದಾಗಿ ಅಲ್ಲ, ಅವರು ಕರ್ತನು ತಮಗೆ ನೀಡಿದ ಯೋಜನೆಯನ್ನು ಪೂರೈಸಿ ಹೊರಟುಹೋದರು. ನಮಗೆ ಕರ್ತನಿಂದ ಕೊಡಲ್ಪಟ್ಟ ಯೋಜನೆಯನ್ನು ನಾವು ಪೂರೈಸಬೇಕು. ನಾವು ಜೀವವುಳ್ಳವರ ಭೂಮಿಯಲ್ಲಿರುವ ಕಾರಣ ನಾವು ಇನ್ನೂ ಕರ್ತನಿಗಾಗಿ ಕೆಲಸಗಳನ್ನು ಮಾಡಬಹುದು. ನಾಶವಾಗುವ ಆತ್ಮಗಳಿಗಾಗಿ ಪ್ರಾರ್ಥಿಸಬಹುದು. ದೇವರು ನಮ್ಮ ದೇಶವನ್ನು ರಕ್ಷಿಸಲಿ ಎಂದು ಬೇಡಿಕೊಳ್ಳಬಹುದು. ಕರ್ತನು ನಮಗೆ ನೀಡಿರುವ ಸಮಯ ಮತ್ತು ಪ್ರತಿಭೆಯನ್ನು ಬಳಸಿಕೊಂಡು ನಾವು ದೇವರ ಕೆಲಸವನ್ನು ಮಾಡಬಹುದು. ಇದು ಈ ವರ್ಷವೂ ಇರಲಿ. ನಾನು ಇದರ ಸುತ್ತಲೂ ಅಗೆದು, ಗೊಬ್ಬರ ಹಾಕುತ್ತೇನೆ ಎಂದು ಕರ್ತನು ನಮ್ಮನ್ನು ಇನ್ನೂ ಜೀವಂತವಾಗಿಟ್ಟಿರುವ ಉದ್ದೇಶವನ್ನು ನೆರವೇರಿಸೋಣ. ಹಲ್ಲೇಲೂಯ.

- Bro. ಹನೀಶ್ ಸಾಮುವೇಲ್

 

ಪ್ರಾರ್ಥನಾ ಅಂಶ:

ನಮ್ಮ ಸೇವೆಯಲ್ಲಿ ಬಳಸಲಾಗುವ ನಾಲ್ಕು ಚಕ್ರದ ವಾಹನಗಳು ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino