By Village Missionary Movement
Friday, 19-Nov-2021ಧೈನಂದಿನ ಧ್ಯಾನ(Kannada) – 19.11.2021
ವೀಡಿಯೊ ಪ್ರದರ್ಶನ
"...ನೀನು ನನ್ನನ್ನು ನೋಡುವ ದೇವರು" - ಆದಿ. 16:13
ಅಪರಾಧಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಕಣ್ಗಾವಲು ಕ್ಯಾಮೆರಾಗಳು ಬಹಳ ಪ್ರಾಮುಖ್ಯವಾದದ್ದೊಂದಾಗಿದೆ. ಜನರು ಅಧಿಕವಾಗಿ ಸೇರುವ ವಿಮಾನ ನಿಲ್ದಾಣಗಳು, ರೈಲುಗಳು, ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಶಾಪಿಂಗ್ ಮಾಲ್‌ಗಳು, ಬೀದಿಗಳು, ರಸ್ತೆಗಳು ಮತ್ತು ಮನೆಗಳಲ್ಲಿಯೂ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಕೂಡ ನಮ್ಮಲ್ಲಿ ಪ್ರತಿಯೊಬ್ಬರನ್ನೂ ನೋಡುವ ದೇವರಾಗಿದ್ದಾರೆ. ಒಮ್ಮೆ ಜನರು ಕಾಣಿಕೆ ಪೆಟ್ಟಿಗೆಯಲ್ಲಿ ಕಾಣಿಕೆ ಹಾಕುವುದನ್ನು ಕರ್ತನು ಗಮನಿಸುತ್ತಾರೆ. ಶ್ರೀಮಂತರಿಗಿಂತ ಬಡ ವಿಧವೆಯ ಕಾಣಿಕೆಯನ್ನು ನೋಡಿ, ಅವರು ಅವಳ ಉತ್ಸಾಹ, ಯಥಾರ್ಥತೆ, ಇಚ್ಛೆ ಎಲ್ಲವನ್ನೂ ತಿಳಿದು ಅವಳು ದೇವರಿಗೆಂದು ನೀಡಿದ ಕಾಣಿಕೆಯ ಬಗ್ಗೆ ಮೆಚ್ಚಿಕೊಳ್ಳುತ್ತಾರೆ.
ಹಲವಾರು ಸಾವಿರ ವರ್ಷಗಳ ಹಿಂದೆ ಜೀವಿಸಿದ ಅಬ್ರಹಾಮನ ಉಪಪತ್ನಿಯಾದ ಹಾಗರಳು ತನ್ನ ಯಜಮಾನಿಯಾದ ಸಾರಳಿಂದ ಕಿರುಕುಳಕ್ಕೊಳಗಾದಾಗ ಅರಣ್ಯಕ್ಕೆ ಓಡಿಹೋದಳು. ಗರ್ಭಿಣಿಯಾದ ಹಾಗರಳ ಯಾತನೆಯನ್ನು ಕೇಳಿ, ಅವಳ ಕಣ್ಣೀರನ್ನು ನೋಡಿ ಕರ್ತನು ಅವಳೊಂದಿಗೆ ಮಾತನಾಡುತ್ತಾರೆ. ತನ್ನೊಂದಿಗೆ ಮಾತನಾಡಿದ ದೇವರಿಗೆ “ನೀನು ನನ್ನನ್ನು ನೋಡುವ ದೇವರು” ಎಂದು ಹೆಸರಿಟ್ಟು ಅವರ ಸ್ವರ ಕೇಳಿ ವಿಧೇಯಳಾಗಿ ತನ್ನ ಯಜಮಾನಿಯ ಬಳಿಗೆ ಹೋದಳು.
ನಾನು P.U.C. ಮುಗಿಸಿ 1978ರಲ್ಲಿ T.E.L.C ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದಾಗ, 1978-ನೇ ವರ್ಷದಲ್ಲಿ ಗೃಹ ವಿಜ್ಞಾನ (Home science) ಕಾಲೇಜಿನಲ್ಲಿ ಓದುವ ಅವಕಾಶವನ್ನು ದೇವರು ದಯಪಾಲಿಸಿದರು. ಮೊದಲ ವರ್ಷದಲ್ಲಿ ಕಾಲೇಜಿನ ಪ್ರಾಂಶುಪಾಲರು ಒಂದು ದಿನ ಅಸೆಂಬ್ಲಿಯ ಮುಂದೆ ನನ್ನನ್ನು ಕರೆದು ನನಗಾಗಿ ಎಲ್ಲರೂ ಚಪ್ಪಾಳೆ ತಟ್ಟುವಂತೆ ಹೇಳಿದರು. 3ನೇ ಮಹಡಿಯಲ್ಲಿರುವ ಅವರು, ನಾನು ಕಾಲೇಜು ಕ್ಯಾಂಪಸ್‌ನಲ್ಲಿರುವ ಕಸದ ಬುಟ್ಟಿಗೆ ಆಗಾಗ ಕಸ, ಪೇಪರ್ ಹಾಕುವುದನ್ನು ಗಮನಿಸಿದ್ದಾರೆ. ಮತ್ತು ಆಶ್ರಮದಲ್ಲಿ ಉಳಿದುಕೊಂಡು ಓದುತ್ತಿದ್ದ ನನ್ನ ಕೆಲವು ಕಾರ್ಯಗಳ ಬಗ್ಗೆ ಅವರು ನನ್ನನ್ನು ಅಭಿನಂದಿಸಿದರು. ಇಂದು ರಾತ್ರಿ ನನ್ನ ಡೈರಿಯಲ್ಲಿ ಈ ರೀತಿ ಬರೆದೆನು. “ನನ್ನ ದೇವರೇ, ನೀವು ಪ್ರತಿ ಸೆಕೆಂಡ್ ನನ್ನನ್ನು ನೋಡುತ್ತಿದ್ದೀರಿ. ನನ್ನ ಕ್ರಿಯೆಗಳು ಮನುಷ್ಯರಿಗೆ ಮಾತ್ರವಲ್ಲ, ನಿಮಗೂ ಸಂತೋಷವನ್ನುಂಟು ಮಾಡಲಿ, ಸಹಾಯ ಮಾಡಿ. ” ನಾನು ಇನ್ನೂ ಪ್ರಯತ್ನಿಸುತ್ತೇನೆ, ಕೆಲವೊಮ್ಮೆ ಸಾಧ್ಯವಾಗದಿದ್ದಕ್ಕಾಗಿ ದೇವರಲ್ಲಿ ಕ್ಷಮೆಯಾಚಿಸುವ ಮೂಲಕ ನನ್ನನ್ನು ಸರಿಪಡಿಸಲು ಪ್ರಯತ್ನಿಸುತ್ತೇನೆ.
ಹೌದು, ನನ್ನ ಪ್ರಿಯರೇ! ನಮ್ಮನ್ನು ಗಮನಿಸುವ ಕ್ಯಾಮೆರಾ ಕರ್ತನ ಕಣ್ಣುಗಳೇ! ನೀವು ಇಷ್ಟಪಡುವದನ್ನು ಮಾಡಲು ನನಗೆ ಕಲಿಸಿಕೊಡಿ. ನೀವೇ ನನ್ನ ದೇವರು. ನಿಮ್ಮ ಒಳ್ಳೆಯ ಆತ್ಮನು ನನ್ನನ್ನು ಸರಿಯಾದ ದಾರಿಯಲ್ಲಿ ನಡೆಸಲಿ. ಆಮೆನ್!
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸಲು ಏಕೈಕ ದರ್ಶನವುಳ್ಳ ಸೇವಕರು ಎದ್ದೇಳುವಂತೆ, 7000 ಸೇವಕರ ಮೂಲಕ 1 ಲಕ್ಷ ಹಳ್ಳಿಗಳನ್ನು ತಲುಪುವ ಯೋಜನೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482