By Village Missionary Movement
Tuesday, 16-Nov-2021ಧೈನಂದಿನ ಧ್ಯಾನ(Kannada) – 16.11.2021
ಆದ್ಯತೆ
"ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು" - ಮತ್ತಾಯ 6:33
ಸ್ಕಾಟ್ಲೆಂಡ್‌ನ ಎರಿಕ್ಲಿಡಲ್ ಎಂಬ ಯುವಕ ತನ್ನನ್ನು ಚೀನಾಗೆ ಮಿಷನರಿಯಾಗಿ ಸಮರ್ಪಿಸಿಕೊಂಡರು. ಅವರು ಫುಟ್ಬಾಲ್ ಆಟಗಾರನಾಗಿಯೂ, ಓಟ ಪಂದ್ಯದ ಆಟಗಾರನಾಗಿಯೂ ಮಿಂಚಿದರು. 100 ಮೀಟರ್ ಓಟ ಪಂದ್ಯಾವಳಿಯಲ್ಲಿ ಎರಿಕ್ ರವರ ಸಾಧನೆಯನ್ನು ಇಂಗ್ಲೆಂಡ್ ನಲ್ಲಿ 35 ವರ್ಷಗಳಿಂದ ಯಾರಿಂದಲೂ ಮುರಿಯಲು ಸಾಧ್ಯವಾಗಲಿಲ್ಲ. 1924 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಅವರಿಗೆ ಲಭಿಸಿತ್ತು. ಆದರೆ ರನ್ನಿಂಗ್ ರೇಸ್ ನ ಆಟಗಾರರ ಆಯ್ಕೆಗಾಗಿ ಒಂದು ಭಾನುವಾರವನ್ನು ನೇಮಿಸಲಾಗಿತ್ತು. ಭಾನುವಾರದ ಆರಾಧನೆಗೆ ಹೋಗಬೇಕಿದ್ದ ಕಾರಣ ಎರಿಕ್ ಓಡಲು ನಿರಾಕರಿಸಿದರು. ಲೌಕಿಕ ಖ್ಯಾತಿಯನ್ನು ಗಳಿಸುವುದಕ್ಕಿಂತ ದೇವರಿಗೆ ವಿಧೇಯನಾಗುವುದು ಎಷ್ಟೋ ಮೇಲು ಎಂದು ಅವರಿಗೆ ತಿಳಿದಿತ್ತು. ಅವರ ಈ ಕ್ರಿಯೆಯನ್ನು ದೇವರು ಘನಪಡಿಸಿದರು. ಹೇಗೆಂದರೆ, ಮೂರು ದಿನಗಳ ನಂತರ ನಡೆದ ಆ ಒಲಿಂಪಿಕ್ ರೇಸ್ ಗೆದ್ದು ವಿಶ್ವದಾಖಲೆ ನಿರ್ಮಿಸಿದರು.
ಯೇಸು ಕ್ರಿಸ್ತನು ತನ್ನ ಪರ್ವತ ಪ್ರಸಂಗದಲ್ಲಿ ಮೊದಲು ದೇವರ ರಾಜ್ಯವನ್ನು ಆತನ ನೀತಿಯನ್ನು ಹುಡುಕಿರಿ ಎಂದು ಹೇಳುತ್ತಾರೆ. ನಾವು ಯೇಸುವಿಗೆ ವಿಧೇಯರಾಗಿ ಆತನ ರಾಜ್ಯವನ್ನು ಹುಡುಕಲು ಮೊದಲು ನಮ್ಮನ್ನು ಒಪ್ಪಿಸಿ ಕೊಟ್ಟು ಜೀವಿಸಲು ಕಲಿತುಕೊಂಡರೆ ಅವರು ನಮ್ಮ ಜೀವನ ವಿಧಾನವನ್ನು ಸರಿಹೊಂದಿಸಲು ಬೇಕಾದ ಎಲ್ಲವನ್ನೂ ಆತನು ನೋಡಿಕೊಳ್ಳುತ್ತಾರೆ.
ಇದನ್ನು ಓದುತ್ತಿರುವ ನಾವು ನಮ್ಮ ದೇವರಿಗೆ ಹೇಗೆ ಮೊದಲ ಸ್ಥಾನವನ್ನು ಕೊಡುತ್ತಿದ್ದೇವೆ? ಎಷ್ಟು ದಿನ ಚಿಕ್ಕ ಚಿಕ್ಕ ಕಾರ್ಯಗಳನ್ನು ಕಾರಣವಾಗಿ ತೋರಿಸಿ ಸಭೆ ಆರಾಧನೆಗಳನ್ನು ನಿರ್ಲಕ್ಷಿಸುತ್ತಿದ್ದೇವೆ! ಕೆಲವರ ಜೀವನದಲ್ಲಿ ಎಡವಟ್ಟುಗಳು, ಹೋರಾಟಗಳು, ಕಷ್ಟಗಳು ಮತ್ತು ಸಂಕಟಗಳು ಬಂದರೆ ಹೊರತು ಬೇರೆ ಯಾವ ರೀತಿಯಲ್ಲೂ ದೇವರನ್ನು ಹುಡುಕುವ ಭಾವನೆಯೇ ಅವರಿಗೆ ಬರುವುದಿಲ್ಲ. ಅವರು ಮೊದಲು ಸಾಮಾಜಿಕ ಸ್ಥಾನಮಾನ ಮತ್ತು ಸಮೃದ್ಧ ಜೀವನಕ್ಕೆ ಆದ್ಯತೆ ನೀಡುತ್ತಾರೆ! ನಾವು ದೇವರಿಗೆ ಮೊದಲ ಸ್ಥಾನ ಕೊಟ್ಟು ಜೀವಿಸೋಣ. ತನ್ನನ್ನು ಘನಪಡಿಸುವವರನ್ನು ಘನಪಡಿಸುವ ದೇವರು ನಮ್ಮನ್ನೂ ಘನಪಡಿಸುತ್ತಾರೆ!
- Mrs. ಶಕ್ತಿ ಶಂಕರರಾಜ್
ಪ್ರಾರ್ಥನಾ ಅಂಶ:
ನಮ್ಮ ಗೆತ್ಸೆಮನೆ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಕಟ್ಟಡ ಕಾರ್ಯಗಳ ಆರ್ಥಿಕ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482