Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.11.2021
Share:

By Village Missionary Movement

Monday, 15-Nov-2021

ಧೈನಂದಿನ ಧ್ಯಾನ(Kannada) – 15.11.2021

 

ಅವ್ಯವಸ್ಥೆಯಿಂದ ಅಲಂಕಾರ

 

"...ಪುರಾತನ ಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರಿಗಿ ಕಟ್ಟುವರು, ಪೂರ್ವದಲ್ಲಿ ಪಾಳುಬಿದ್ದದ್ದನ್ನು ಪುನಃ ಎಬ್ಬಿಸುವರು, ತಲತಲಾಂತರಗಳಿಂದ ಹಾಳುಬೀಳಾದ ಪಟ್ಟಣಗಳನ್ನು ಜೀರ್ಣೋದ್ಧಾರಮಾಡುವರು." - ಯೆಶಾಯ 61:4

 

ಸ್ಕಾಟ್ಲೆಂಡ್‌ನ ಪ್ರಾಚೀನ ವಾಸ್ತುಶಿಲ್ಪದ ಅತ್ಯುತ್ತಮ ಮಹಲುಗಳಲ್ಲಿ ವಿಶೇಷ ಕೋಣೆ ಒಂದು ಇದೆ. ಅದರ ಮಹಲನ್ನು ನೋಡಲು ಹೋಗುವ ಚಿತ್ರಗಾರರೆಲ್ಲರೂ ಆ ಕೋಣೆಯ ಗೋಡೆಗಳಲ್ಲಿ ಯಾವುದಾದರೊಂದು ಚಿತ್ರವನ್ನು ಬಿಡಿಸಿ ಹೋಗುವುದುಂಟು. ಹಾಗಾದರೆ ಆ ಕೋಣೆಯ ವಿಶೇಷತೆ ಏನೆಂದರೆ, ಒಂದಾನೊಂದು ಕಾಲದಲ್ಲಿ ಇದನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿ ಇದಕ್ಕೆ ಸುಂದರವಾಗಿ ಬಣ್ಣಗಳನ್ನು ಹಚ್ಚಲಾಗಿತ್ತು. ಅದು ಒಂದು ದಿನ ಅನಿರೀಕ್ಷಿತವಾಗಿ ಸೋಡಾ ಕುಡಿಯುವ ನೀರು ಶೇಖರಣಾ ತೊಟ್ಟಿಯು ಸ್ಫೋಟಿಸಿ ಅದರ ಸುಂದರವಾದ ಗೋಡೆಗಳೆಲ್ಲಾ ಕರೆ ಹಿಡಿಯಿತು. ಅಲ್ಲಿ ಉಳಿದುಕೊಂಡಿದ್ದ ಪ್ರಸಿದ್ಧ ಚಿತ್ರಕಲಾವಿದ ಸರ್. ಎಡ್ವಿನ್ ಲ್ಯಾಂಡ್ಸಿರ್ ರವರು ಆ ಕರೆಗಳನ್ನು ನೋಡಿದಾಗ ಅವು ಶಾಶ್ವತವಾಗಿ ಉಳಿಯುವ ಕರೆಗಳಾಗಿ ಅವರಿಗೆ ತೋಚಿದ್ದರಿಂದ ತನ್ನ ಕಲಾತ್ಮಕತೆಯಿಂದಾಗಿ ಕರೆಗಳನ್ನು ಅಮೂಲ್ಯವಾದ ಚಿತ್ರಕಲೆಯಾಗಿ ಪರಿವರ್ತಿಸಿದರು. ಆ ಕರೆಗಳನ್ನು ಬೆಲೆಕಟ್ಟಲಾಗದ ಒಂದು ಚಿತ್ರವಾಗಿ ಮಾರ್ಪಡಿಸಿದರು. ಅದರಲ್ಲಿ ಅವರು ಜಲಪಾತದ ಹಿನ್ನೆಲೆ ದೃಶ್ಯವನ್ನು ಚಿತ್ರಿಸಿದರು. ಅದರಲ್ಲಿನ ಬಂಡೆಗಳು ಮತ್ತು ಮರಗಳು ಅವುಗಳ ನಡುವೆ ಗಾಂಭೀರ್ಯವಾದ ನೋಟದೊಂದಿಗೆ ನಿಂತಿರುವ ಒಂದು ಸುಂದರವಾದ ಗಂಡು ಜಿಂಕೆ ನೋಡುವುದಕ್ಕೆ ನೈಜ ದೃಶ್ಯದಂತೆ ತೋರುತ್ತಿತ್ತು. ಈ ವರ್ಣಚಿತ್ರವು ಸ್ಕಾಟ್ಲೆಂಡ್‌ನ ಅತ್ಯುತ್ತಮ ಪರ್ವತ ವರ್ಣಚಿತ್ರಗಳಲ್ಲಿ ಒಂದಾಗಿದೆ. ಅಂದಿನ ಅವ್ಯವಸ್ಥೆಯ ಕಲೆ ಇಂದು ಸಾವಿರಾರು ಜನರನ್ನು ತನ್ನತ್ತ ಸೆಳೆಯುವ ಸುಂದರ ದೃಶ್ಯವಾಗಿದೆ.

 

ಒಂದು ಸಮಯದಲ್ಲಿ ನಮ್ಮ ಆಧ್ಯಾತ್ಮಿಕ ಜೀವನವು ದೇವರ ದೃಷ್ಟಿಯಲ್ಲಿ ಉತ್ತಮವಾಗಿ ಅಭಿವೃದ್ಧಿಗೊಂಡು, ಸುಂದರವಾಗಿ ಕಂಡಿರಬಹುದು. ಆದರೆ ಈಗಲೋ ನಮ್ಮ ಒಳ್ಳೆಯ ಸ್ವಭಾವಗಳು, ನಮ್ಮ ಒಳ್ಳೆಯ ಅಭ್ಯಾಸಗಳು, ನಮ್ಮ ಅತ್ಯುತ್ತಮ ಆಧ್ಯಾತ್ಮಿಕ ಅನುಭವಗಳು ಎಲ್ಲವೂ ಮರೆಯಾಗಿ, ನಾವು ಪಾಪದ ಕರೆ ಹಿಡಿದು ಅವ್ಯವಸ್ಥಿತವಾಗಿ ಕಾಣುತ್ತಿರಬಹುದು. ಹಿಂದಿನ ದಿನಗಳಲ್ಲಿ ನನಲ್ಲಿ ಕಂಡ ಉತ್ತಮ ಅನುಭವಗಳು ಪುನಃ ಚಿಗುರಿಸಲು ಸಾಧ್ಯವೇ? ನಾನು ಕಳೆದುಕೊಂಡ ಪ್ರಾರ್ಥನಾ ಜೀವನವು ನನ್ನಲ್ಲಿ ಪುನಃ ನವೀಕೃತವಾಗುವುದೇ? ಎಂಬ ಆತಂಕ ಮತ್ತು ಬಳಲಿಕೆಯ ಸ್ಥಿತಿಯಲ್ಲಿ ಕಾಣಲ್ಪಡುತ್ತಿದ್ದೀರಾ? ಚಿಂತಿಸಬೇಡಿರಿ. ಶೂನ್ಯದಿಂದ ಎಲ್ಲವನ್ನೂ ಸೃಷ್ಟಿಸಿದವರು ನಮ್ಮ ದೇವರು. ಭೂಮಿ ಯು ನಿರಾಕಾರವಾಗಿಯೂ ಶೂನ್ಯವಾಗಿಯೂ ಇದ್ದಾಗ ಭೂಮಿಯನ್ನು ಸುಧಾರಿಸಿದವರು, ಅವರು ನಿಮ್ಮಲ್ಲಿ ಅಸ್ತವ್ಯಸ್ತವಾಗಿರುವ ಎಲ್ಲಾ ಭವ್ಯವಾದ ಅನುಭವಗಳನ್ನು ಪುನಃ ರೂಪಿಸಲು ಶಕ್ತಿಯುಳ್ಳವರು. ಅವರೇ ನಿಮ್ಮ ಮೊದಲಿನ ಸ್ಥಿತಿಗಿಂತಲೂ ನಿಮಗೆ ಒಳ್ಳೆಯ ಸ್ಥಿತಿ ಉಂಟಾಗುವಂತೆ ಮಾಡುತ್ತಾರೆ. ಅವರು ಅವ್ಯವಸ್ಥೆಯನ್ನು ಅಲಂಕಾರವಾಗಿ, ಸೋಲನ್ನು ವಿಜಯವಾಗಿ ಮತ್ತು ಬತ್ತಿದ ಸ್ಥಿತಿಯನ್ನು ನೀರಿನ ಒರತೆಗಳಾಗಿಯು, ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸಿ ಸಮೃದ್ಧಿಯಾಗಿ ಕಾರಂಜಿಯಾಗಿ ಪರಿವರ್ತಿಸುವವರು.

 

ಪ್ರಿಯರೇ, ನೀವು ಕಳೆದುಕೊಂಡಿರುವ ಆಧ್ಯಾತ್ಮಿಕ ಜೀವನವನ್ನು ನೆನೆಸಿ ನಿರುತ್ಸಾಹಗೊಳ್ಳಬೇಡಿರಿ, ನಿಮ್ಮನ್ನು ಪುನರುಜ್ಜೀವನಗೊಳಿಸುವ ಸರ್ವಶಕ್ತನ ಕೈಗಳಲ್ಲಿ ಇಂದೇ ಒಪ್ಪಿಸಿಕೊಡಿರಿ. ಆತನು ನಿಮ್ಮನ್ನು ಪುನಃ ಅಲಂಕರಿಸಿ ಅನೇಕರಿಗೆ ಆಶೀರ್ವಾದದ ಬುಗ್ಗೆಯಾಗಿ ಮಾರ್ಪಡಿಸುತ್ತಾರೆ.

- Bro. ಹನೀಶ್ ಸಾಮುವೇಲ್

 

ಪ್ರಾರ್ಥನಾ ಅಂಶ:

ಪ್ರತಿ ತಿಂಗಳು "ಕತ್ತೆಗಳ ಮಾರ್ಗದರ್ಶಿ" ಪತ್ರಿಕೆಯನ್ನು ತಡೆಯಿಲ್ಲದೆ ಹೊರಬಿಡುವಂತೆ ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin