Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.11.2021
Share:

By Village Missionary Movement

Friday, 12-Nov-2021

ಧೈನಂದಿನ ಧ್ಯಾನ(Kannada) – 12.11.2021

 

ಅಸ್ವಸ್ಥತೆ

 

"ನೀನು ನಡೆಯುವ ದಾರಿ ಯನ್ನು ವಿಮರ್ಶಿಸಿ ನೋಡು;... ಕೇಡಿನಿಂದ ನಿನ್ನ ಪಾದವನ್ನು ತಪ್ಪಿಸು."- ಜ್ಞಾನೋಕ್ತಿ. 4: 26, 27

 

ಫ್ರಾನ್ಸ್ ದೇಶದಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡಿದ ನೆಪೋಲಿಯನ್ ಗೆ ಹೊಟ್ಟೆಬಾಕತನ ಎಂಬ ಅಸ್ವಸ್ಥತೆ ಇತ್ತು. ಪ್ರಮುಖ ಯುದ್ಧವಾದ "ವಾಟರ್ಲೂ" ಎಂಬ ಸ್ಥಳದಲ್ಲಿ ಬ್ರಿಟಿಷ್ ಪಡೆಗಳನ್ನು ಭೇಟಿಯಾಗಲು ಹೋಗುವ ಮೊದಲು ಅವರ ಮುಂದೆ ಗೋಮಾಂಸ ಮತ್ತು ಆಲೂಗಡ್ಡೆಗಳನ್ನು ಇಟ್ಟಿದ್ದರು. ಅನಿಯಂತ್ರಿತವಾಗಿ ತಿನ್ನಲು ಪ್ರಾರಂಭಿಸಿದರು ಇದರಿಂದಾಗಿ ಅವರು ಚುರು-ಚುರುಕಾಗಿ ಯುದ್ಧ ಮಾಡಲು ಸಾಧ್ಯವಾಗದೇ, ಯುದ್ಧದಲ್ಲಿ ವಿಫಲನಾದನು. ಅವರನ್ನು ಸೆಂಟ್ ಸೆಲೆನಾದಲ್ಲಿ ಬಂಧಿಸಲಾಯಿತು.

 

ಅಸ್ವಸ್ಥತೆ ಎಂಬುದಕ್ಕೆ ಕ್ರಮವಿಲ್ಲದಿರುವುದು, ಅವಿಧೇಯತೆ ಎಂಬುದೇ ಕಾರಣ. ಮನಬಂದಂತೆ ಅಸಡ್ಡೆಯಾಗಿ ಎಚ್ಚರಿಕೆಯಿಲ್ಲದೆ ಬುದ್ದಿಹೀನ ಸ್ಥಿತಿಯಲ್ಲಿ ಬದುಕುವವರನ್ನು ಈ ಅಸ್ವಸ್ಥತೆ ದಿಢೀರೆಂದು ಹಿಡಿಯುತ್ತದೆ. ಕೆಲವರಿಗೆ ಕುಡಿತ, ಕೆಲವರಿಗೆ ಟೆಲಿವಿಷನ್ ಮುಂದೆ ಕೂತು ಸಮಯ ಹಾಳು ಮಾಡೋದು, ಹೀಗೆ ಅಸಡ್ಡೆಯಾಗಿದ್ದರೆ ಕೊನೆಗೆ ಇದು ಕಣ್ಣೀರಿನೊಳಗೆ ನಮ್ಮನ್ನು ನಡೆಸಿಕೊಂಡು ಹೋಗುತ್ತದೆ. ಇದು ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸುತ್ತದೆ.

 

ಆದಿಕಾಂಡ 3ನೇ ಅಧ್ಯಾಯದಲ್ಲಿ ಹವ್ವಳ ಭ್ರಷ್ಟತೆಯು ಇಡೀ ಮಾನವ ಜನಾಂಗಕ್ಕೆ ವಿನಾಶವನ್ನು ತಂದಿತು. ನೋಹನ ಕಾಲದಲ್ಲಿ ಲೋಕವು ಭ್ರಷ್ಟಾಚಾರದಿಂದ ನಾಶವಾಯಿತು. ಆದರೆ ಆ ದಿನಗಳಲ್ಲಿ ಜೀವಿಸಿದ ಜನರಲ್ಲಿ ನೋಹನು ನೀತಿವಂತನೂ ಯಥಾರ್ಥವಂತನೂ ಆಗಿ ಕಂಡನು. ನೋಹನು ದೇವರು ತನಗೆ ಆಜ್ಞಾಪಿಸಿದ್ದರ ಪ್ರಕಾರವೆಲ್ಲಾ ಮಾಡಿ ಮುಗಿಸಿದನು ಎಂದು ಸತ್ಯವೇದವು ಹೇಳುತ್ತಿದೆ.

 

ಪ್ರಿಯರೇ! "ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು" ಎಂದು (ಹೋಶೇಯ 14:4) ಕರ್ತನು ನಮಗೆ ವಾಗ್ದಾನವನ್ನು ಕೊಟ್ಟಿದ್ದಾರೆ. ದೇವರ ಸನ್ನಿಧಿಯಲ್ಲಿ ಕುಳಿತು ಶೋಧಿಸಿ ನೋಡಿದರೆ ನಮ್ಮಲ್ಲಿ ಕಂಡುಬರುವ ಅಧಃಪತನವನ್ನು ಬಹಿರಂಗಪಡಿಸುತ್ತಾನೆ. ನಮ್ಮ ಪಾಪಗಳನ್ನು ಮತ್ತು ಅಕ್ರಮಗಳನ್ನು ತನ್ನ ರಕ್ತದಿಂದ ತೊಳೆದು ಶುದ್ಧೀಕರಿಸುತ್ತಾರೆ. ಅವರ ಬಳಿ ತುಂಬಾ ಕರುಣೆ ಇದೆ. ಅವರು ಕ್ಷಮಿಸಲು ಕರುಣಾಮಯಿ. ಒಂದು ನಿಮಿಷ ನಿಮ್ಮನ್ನು ನೀವೇ ಶೋಧಿಸಿ ನೋಡಿಕೊಳ್ಳುತ್ತೀರಾ? ಅಕ್ರಮಗಳನ್ನು ನಿರ್ಣಾಯಕವಾಗಿ ತೆಗೆದುಹಾಕುತ್ತೀರಾ? ಇಂದು ನಿಮ್ಮನ್ನು ಸರಿಮಾಡಿಕೊಂಡರೆ ಕರ್ತನು ಆಶೀರ್ವಾದಕರವಾದ ಜೀವನವನ್ನು ನಿಮಗೆ ನೀಡುತ್ತಾರೆ.

- Mrs. ಜೆಬಕನಿ ಶೇಕರ್

 

ಪ್ರಾರ್ಥನಾ ಅಂಶ:

ಕೆಲಸದ ಸ್ಥಳಗಳಲ್ಲಿ ಸೇವೆ ಮಾಡುತ್ತಿರುವ ಸಹ ಸೇವಕರಿಗೆ ದ್ವಿಚಕ್ರ ವಾಹನದ ಅಗತ್ಯವಿದೆ. ಸಹಾಯ ಮಾಡುವಂತಹ ಹೃದಯಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al