By Village Missionary Movement
Wednesday, 10-Nov-2021ಧೈನಂದಿನ ಧ್ಯಾನ(Kannada) – 10.11.2021
ಎರಡು ಗೆರೆಗಳ ನಡುವೆ
"...ಉನ್ನತವಾದ ಕರೆಯುವಿಕೆಯ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ." - ಫಿಲಿಪ್ಪಿ 3:14
ಪೆನ್ನಿ ಶೆಪರ್ಡ್ ತನ್ನ 13 ನೇ ವಯಸ್ಸಿನಲ್ಲಿ ಬೆನ್ನುಮೂಳೆ ಮುರಿದು ಸ್ವಲ್ಪ ಹೊತ್ತು ಕೂಡ ನಿಲ್ಲಲು, ನಡೆಯಲು ಸಾಧ್ಯವಾಗದೇ ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದರು, ಇಂಥಾ ಸ್ಥಿತಿಯಲ್ಲಿ ವಿವಾಹವೂ ಮುಗಿದು ಇಬ್ಬರು ಹೆಣ್ಣು ಮಕ್ಕಳಿಗೆ ತಾಯಾದಂತಹ ಸಂದರ್ಭದಲ್ಲೂ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳಲಾಗದೆ ಮತ್ತೊಬ್ಬರ ಸಹಾಯವನ್ನು ಎದುರುನೋಡುತ್ತಾ ಜೀವಿಸಬೇಕಾದ ಪರಿಸ್ಥಿತಿ ಏರ್ಪಟ್ಟದ್ದರಿಂದ ತುಂಬಾ ಸಂಕಟದಿಂದ ಪ್ರಾರ್ಥಿಸುತ್ತಿದ್ದಾಗ, "ಅದ್ಬುತವನ್ನು ಹುಡುಕಿ ಓಡು" ಎಂದು ತನ್ನೊಂದಿಗೆ ಮಾತಾಡುವ ಶಬ್ದವನ್ನು ಕೇಳಿದಳು. ಇದು ಖಂಡಿತವಾಗಿಯೂ ದೇವರ ಧ್ವನಿ ಎಂದು ತಿಳಿದ ಅವಳು ಅದಕ್ಕೆ ವಿಧೇಯಳಾಗಲು ನಿರ್ಧರಿಸಿದಳು. ಅವಳೊಂದು ಓಟ ಪಂದ್ಯದ ಆಟಗಾರ್ತಿ ಅಲ್ಲದೇ ಹೋದರೂ 26.2 ಮೈಲಿ ಮ್ಯಾರಥಾನ್ ಓಡಲು ನಿರ್ಧರಿಸಿದಳು. ಆದರೆ ಅವಳು ಅನುಭವಿಸುತ್ತಿದ್ದ ನೋವಿನಲ್ಲಿ ನಡೆಯುವುದೇ ಕಷ್ಟವಾಗಿತ್ತು; ಓಡುವುದು ಹೇಗೆ ಸಾಧ್ಯ? ಆದರೂ ದೇವರ ಅದ್ಭುತವನ್ನು ಪಡೆಯಲು ಬಯಸಿದ್ದಳು ವೈದ್ಯರೇ ಅವಳಿಗೆ ತರಬೇತುದಾರರಾಗಿ ಮಾರ್ಪಟ್ಟದ್ದರಿಂದ 6 ತಿಂಗಳುಗಳ ಕಾಲ ಕಠಿಣ ತರಬೇತಿ ಪಡೆದಳು.
24,000 ಮಂದಿ ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ ಆರಂಭದ ಗೆರೆಯ ಬಳಿ ಬಂದು ನಿಂತಾಗ 28 ವರ್ಷಗಳಿಂದ ಇದ್ದ ಬೆನ್ನುನೋವು ಆಕೆಯನ್ನು ಬಿಟ್ಟು ಹೋಯಿತು. 7 ಗಂಟೆಗಳ ಓಟದ ಪಂದ್ಯಾವಳಿಯಲ್ಲಿ ಓಡುವಾಗ ತೀವ್ರ ದಣಿವು ಮತ್ತು ಸುಸ್ತಾಗಿದ್ದರೂ, ಹೇಗಾದರೂ ಅಂತಿಮ ಗೆರೆಯನ್ನು ಮುಟ್ಟುವ ಬಯಕೆಯಿಂದ ತನ್ನ ಕೈಗಳಲ್ಲಿ ತನ್ನನ್ನು ಹುರಿದುಂಬಿಸಲು ಅವಳು ತನ್ನ ಮಕ್ಕಳು ಬರೆದುಕೊಟ್ಟಿದ್ದ ಸತ್ಯವೇದದ ವಾಕ್ಯಗಳನ್ನು ಓದಿದರು. “ಓಡಿ ದಣಿಯರು, ನಡೆದು ಬಳಲರು" ಎಂಬ ವಾಕ್ಯ ಅವರನ್ನು ಬಲಪಡಿಸಿತು. ಕೊನೆಗೆ ಒಂದು ಹೆಜ್ಜೆ ಕೂಡ ಎತ್ತಿಡಲು ಸಾಧ್ಯವಾಗದ ಪರಿಸ್ಥಿತಿ ಏರ್ಪಟ್ಟದ್ದರಿಂದ ಅವರ ಇಬ್ಬರು ಹೆಣ್ಣು ಮಕ್ಕಳು ತೋಳು ಕೊಟ್ಟು ಅವಳಿಗೆ ಸಹಾಯ ಮಾಡಲು ಮುಂದೆ ಬಂದಾಗ, ಕೊನೆಯ ಗೆರೆಯನ್ನು ಕಂಡು, ಅವುಗಳಲ್ಲಿ ತನ್ನ ಕಾಲುಗಳನ್ನು ಇಟ್ಟಳು ಸಂಪೂರ್ಣವಾಗಿ ದೇವರ ಶಕ್ತಿಯಿಂದ ತುಂಬಿಸಲ್ಪಟ್ಟಳು. ಪರಿಪೂರ್ಣ ಸ್ವಸ್ಥತೆಯನ್ನು ಪಡೆದುಕೊಂಡಳು. ನಂಬಿಕೆ, ವಿಧೇಯತೆ ಮತ್ತು ಬಿಡದ ಪ್ರಯತ್ನ ಇವುಗಳೇ ಆಕೆಗೆ ಅದ್ಭುತವನ್ನು ಹೊತ್ತು ತಂದಿದೆ. ಅಂತಿಮ ಗೆರೆಯಲ್ಲಲ್ಲ, ದೇವರಿಗೆ ವಿಧೇಯಳಾಗಿ ಆರಂಭಿಕ ಗೆರೆಯ ಮೇಲೆ ಹೆಜ್ಜೆ ಹಾಕುತ್ತಿದ್ದಂತೆ ಅವಳು ಅದ್ಭುತವನ್ನು ಪಡೆದುಕೊಂಡು ಓಡಲು ಪ್ರಾರಂಭಿಸಿದಳು.
ಶೂಷನ್ ಕೋಟೆಯಲ್ಲಿ ರಾಜನ ಪಾನಗಾರನಾದ ನೆಹೆಮಿಯಾ ತನ್ನ ಸ್ವಂತ ಜನರ ಕಷ್ಟಗಳನ್ನು ಕೇಳಲು, ಯೆರೂಸಲೇವಿುನ ಪೌಳಿಗೋಡೆಯು ಕೆಡವಲ್ಪಟ್ಟಿರುವ ಮತ್ತು ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುವ ಸ್ಥಿತಿಯನ್ನು ಕೇಳಿ ಏನು ಮಾಡುವುದೆಂದು ತಿಳಿಯದೇ ದುಃಖಿಸುತ್ತಾ ತವಕ ಪಡುವವನಾಗಿ ಕಾಣದೇ, ದೇವ ದರ್ಶನಗಳನ್ನು ಯೊಜನೆಗಳನ್ನೂ ಪಡೆದುಕೊಂಡವನಾಗಿಯೂ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಂಡವನಾಗಿಯೂ ರಾಜನ ಬಳಿ ಅನುಮತಿಯನ್ನು ಮತ್ತು ಸಹಾಯವನ್ನು ಪಡೆದು ವಿರೋಧಗಳ ನಡುವೆಯೂ ಮುಂದಿಟ್ಟ ಹೆಜ್ಜೆ ಹಿಂತೆಗೆಯದೇ ಗೋಡೆಯನ್ನು ಕಟ್ಟಿ ಮುಗಿಸಬೇಕೆಂಬ ಒಂದೇ ಉದ್ದೇಶದಿಂದ ಜನರನ್ನು ಒಂದುಗೂಡಿಸಿ, ನಿರ್ಣಯಿಸಲ್ಪಟ್ಟ 52 ದಿನಗಳಲ್ಲಿ ದೇವ ದರ್ಶನವನ್ನು ದೇವರ ಯೋಜನೆಯನ್ನೂ ಮಾಡಿ ಪೂರ್ಣಗೊಳಿಸಿದವನಾಗಿ ಕಾಣಲ್ಪಟ್ಟನು.
ಪರಿಸ್ಥಿತಿಗಳು, ಸಂದರ್ಭಗಳು ಮನುಷ್ಯರಿಗೆ ವಿರುದ್ಧವಾಗಿ ಕಂಡರೂ ಗುರಿ ಮುಟ್ಟಬೇಕು ಎಂಬ ಮಹತ್ವಾಕಾಂಕ್ಷೆಯಿಂದ ದೇವರ ಸಹಾಯದಿಂದ, ಬಿಡದ ಪ್ರಯತ್ನದೊಂದಿಗೆ ಧೈರ್ಯವಾಗಿ ಮುನ್ನಡೆಯುವಾಗ, ಗುರಿ ಮುಟ್ಟಿದವರಾಗಿ ಯಶಸ್ಸಿನ ಫಲವನ್ನು ಸವಿಯಬಹುದು.
- Sis. ವಸಂತಿ ರಾಜಮೋಹನ್
ಪ್ರಾರ್ಥನಾ ಅಂಶ:
ಸಹ ಸೇವಕರು ಸೇವೆ ಮಾಡುತ್ತಿರುವ ಆಲಯಗಳಿಲ್ಲದ ಹಳ್ಳಿಗಳಲ್ಲಿ ದೇವಾಲಯಗಳನ್ನು ನಿರ್ಮಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482