By Village Missionary Movement
Tuesday, 09-Nov-2021ಧೈನಂದಿನ ಧ್ಯಾನ(Kannada) – 09.11.2021
ಉಪ್ಪು
“ನೀವು ಭೂವಿುಗೆ ಉಪ್ಪಾಗಿದ್ದೀರಿ..." - ಮತ್ತಾಯ 5:13
ಅಂದು ರಾಜನ ಜನ್ಮದಿನ. ಅರಮನೆಯನ್ನು ಅಲಂಕರಿಸಲಾಗಿತ್ತು, ಅನೇಕರಿಗೆ ಉಡುಗೊರೆಗಳನ್ನು ನೀಡಲಾಯಿತು. ಅನೇಕ ಕವಿಗಳು ರಾಜನಿಗೆ ನಮಸ್ಕರಿಸಿ ಉಡುಗೊರೆಗಳನ್ನು ಪಡೆದುಕೊಂಡು ಹೋದರು. ಮಧ್ಯಾಹ್ನದ ಸಮಯದಲ್ಲಿ ಊಟಕ್ಕೆ ಬಂದಿದ್ದ ರಾಜನು ತನಗೆ ಅಡುಗೆ ಮಾಡಿ ಬಡಿಸಿದ ಸೇವಕರ ಬಳಿ, "ನೀವು ನನ್ನ ಬಗ್ಗೆ ಏನೆಂದು ನೆನೆಸುತ್ತೀರ?" ಎಂದು ಕೇಳಿದರು. ತಕ್ಷಣ ಒಬ್ಬರು, "ಚಿನ್ನದಂತೆ" ಎಂದರು. ಮತ್ತೊಬ್ಬರು, “ವಜ್ರದಂತೆ” ಎಂದರು. ಒಬ್ಬ ವಯಸ್ಸಾದ ಸೇವಕ, "ರಾಜ, ನೀವು ಉಪ್ಪಿನಂತಿದ್ದೀರ?" ಎಂದರು. ರಾಜನು, "ನೀವು ಏನು ಹೇಳುತ್ತಿದ್ದೀರಿ?" ಎಂದು ಕೇಳಿದರು ಕೂಡಲೇ, "ಹೌದು, ನೀವು ಎಲ್ಲರಿಗೂ ಉಪಯುಕ್ತ, ರುಚಿಯಾದವರು ಮತ್ತು ಸ್ವಚ್ಛವಾದರು" ಎಂದು ಉತ್ತರಿಸಿದರು. ರಾಜನು ತುಂಬಾ ಸಂತೋಷಪಟ್ಟು ಆ ಸೇವಕನಿಗೆ ಉಡುಗೊರೆಯನ್ನು ನೀಡಿದರು.
ಯೇಸು ಕ್ರಿಸ್ತನು ಕೂಡ ಈ ಭೂಮಿಯಲ್ಲಿ ಸಂಚರಿಸಿದ ದಿನಗಳಲ್ಲಿ ತನ್ನನ್ನು ಹಿಂಬಾಲಿಸಿದ ಜನರನ್ನು ನೋಡಿ "ನೀವು ಭೂವಿುಗೆ ಉಪ್ಪಾಗಿದ್ದೀರಿ" ಎಂದು ಹೇಳಿದರು. ಅದೇ ರೀತಿ, ಒಬ್ಬ ಯೌವನಸ್ಥನು ನಿತ್ಯ ಜೀವವನ್ನು ಪಡೆಯಲು ಏನು ಮಾಡಬೇಕು ಎಂದು ಯೇಸು ಕ್ರಿಸ್ತನ ಬಳಿ ಕೇಳಿದಾಗ, ಆಜ್ಞೆಗಳನ್ನು ಕೈಕೊಂಡು ನಡೆ ಮತ್ತು ನಿನಗಿರುವದನ್ನು ಮಾರಿ ಬಡವರಿಗೆ ಕೊಡು ಎಂದು ಹೇಳಿದರು. ಅವನು ತುಂಬಾ ಐಶ್ವರ್ಯವಂತನು ಆದ್ದರಿಂದ ಅವನ ಆಸ್ತಿಯನ್ನು, ಇಲ್ಲದವರೊಂದಿಗೆ ಹಂಚಿಕೊಂಡು ಉಪಯುಕ್ತವಾದ ಜೀವನವನ್ನು ನಡೆಸಬೇಕು ಎಂದು ಹೇಳಿದರು. ಉಪ್ಪು ಅದರ ರುಚಿಯನ್ನು ತನ್ನ ಜೊತೆಯಲ್ಲಿರುವ ಪದಾರ್ಥಗಳೊಂದಿಗೆ ಹಂಚಿಕೊಳ್ಳುವ ಮೂಲಕ ರುಚಿಯಾಗಿ ಮಾರ್ಪಡುತ್ತದೆ. ಹಾಗಾಗಿ "ಉಪ್ಪಿಲ್ಲದ ಸಾಮಾನು ಕಸದ ಬುಟ್ಟಿಯಲ್ಲಿ" ಎಂಬ ಗಾದೆ ಹೇಳುತ್ತಾರೆ. ಮತ್ತೊಬ್ಬರು ನಿಮ್ಮನ್ನು ಭಯವಿಲ್ಲದೆ, ಆತಂಕವಿಲ್ಲದೆ ಸಂಪರ್ಕಿಸುವ ಹಾಗೆ ನಾವು ಶಾಂತಿಯುತವಾಗಿ, ನಮ್ಮಲ್ಲಿರುವದನ್ನು ಇತರರೊಂದಿಗೆ ಹಂಚಿಕೊಳ್ಳುವವರಾಗಿ ಇರಬೇಕು.
ಹೌದು, ಪ್ರಿಯರೇ! ನೀವು ಸಹ ನಿತ್ಯ ಜೀವವನ್ನು ಪಡೆದುಕೊಳ್ಳಬೇಕಾ? ಉಪ್ಪಾಗಿ ಮಾರ್ಪಡಿರಿ! ಎಲ್ಲರೂ ಸಂಪರ್ಕಿಸುವವರಾಗಿ, ಎಲ್ಲರಿಗೂ ಉಪಯುಕ್ತವಾಗಿ ಮಾರ್ಪಡೋಣ. ಇತರರ ಜೀವನವನ್ನು ರುಚಿಕರವಾಗಿ ಮಾರ್ಪಡಿಸೋಣ. ನಮ್ಮಲ್ಲಿರುವ ಪ್ರೀತಿಯನ್ನು, ಸಂತೋಷವನ್ನು, ಪ್ರತಿಭೆಯನ್ನು, ವಸ್ತುಗಳನ್ನು ನಮ್ಮೊಂದಿಗೆ ಇರುವವರೊಂದಿಗೆ ಹಂಚಿಕೊಂಡು ನಾವು ಉಪಯುಕ್ತವಾದ ಜೀವನವನ್ನು ಜೀವಿಸೋಣ. God Bless You.
- Mrs. ಅನ್ಬು ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ನಮ್ಮೊಂದಿಗೆ ಸೇರಿ ಸೇವೆ ಮಾಡುತ್ತಿರುವ ಸಹ ಸೇವಕರ ಕುಟುಂಬಗಳು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482