By Village Missionary Movement
Monday, 08-Nov-2021ಧೈನಂದಿನ ಧ್ಯಾನ(Kannada) – 08.11.2021
ನಂಬಿಗಸ್ತನಾದ ಮನುಷ್ಯನು
"ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು;..." - ಜ್ಞಾನೋಕ್ತಿ. 28:20
ಕ್ರಿಸ್ತನಲ್ಲಿ ಪ್ರಿಯರೇ! ಕ್ರಿಸ್ತನಿಗೂ, ದೇವರು ನಮಗೆ ನೀಡಿದ ಕುಟುಂಬಕ್ಕೂ ನಮ್ಮ ಕರ್ತವ್ಯ ದಲ್ಲಿ ನಂಬಿಗಸ್ತರಾಗಿರಲು ನಾವು ಕರೆಯಲ್ಪಟ್ಟಿದ್ದೇವೆ. ಉದಾಹರಣೆಗೆ, ಅಬ್ರಹಾಮನು ದೇವರ ಮುಂದೆ ನಂಬಿಗಸ್ತನಾಗಿದ್ದನು ಮತ್ತು ಎಲ್ಲಾ ಆಶೀರ್ವಾದಗಳನ್ನು ಪಡೆದುಕೊಂಡರು.
ಅಂತೆಯೇ, ದೇವರು ಮೋಶೆಯ ಬಗ್ಗೆ ಅರಣ್ಯ.12:7 - ರಲ್ಲಿ ಸಾಕ್ಷಿ ಕೊಡುತ್ತಿದ್ದಾರೆ. ಇಂದು ಮೋಶೆ ಯಾವ ಯಾವ ವಿಷಯಗಳಲ್ಲೆಲ್ಲಾ ನಂಬಿಗಸ್ತರಾಗಿದ್ದರೆಂಬುದನ್ನು ನೋಡೋಣವಾ?
ಮೊದಲನೆಯದಾಗಿ, ಅವರು ಕುಟುಂಬದಲ್ಲಿ ನಂಬಿಗಸ್ತರಾಗಿದ್ದರು. ವಿಮೋ. 4:18 ರಲ್ಲಿ, ಇಸ್ರಾಯೇಲ್ ಜನರನ್ನು ಕರೆದುಕೊಂಡು ಹೋಗುವಂತೆ ದೇವರು ಮೋಶೆಗೆ ಹೇಳಿದಾಗ, ಮೋಶೆ ತನ್ನ ಮನೆಗೆ ಹೋಗಿ ತನ್ನ ಮಾವನಿಗೆ ನಿಜವನ್ನು ಹೇಳಿ ಬಿಡುಗಡೆ ಹೊಂದಿ ಹೊರಡುತ್ತಾರೆ. ತನ್ನ ಹೆಂಡತಿ ಮತ್ತು ಮಕ್ಕಳ ಬಳಿ ನಂಬಿಗಸ್ತರಾಗಿದ್ದರು. ಇಂದು ಎಷ್ಟೋ ಕುಟುಂಬಗಳಲ್ಲಿ ನಂಬಿಗಸ್ತಿಕೆ ಇಲ್ಲ. ಗಂಡ-ಹೆಂಡತಿ ನಡುವೆ ನಂಬಿಗಸ್ತಿಕೆ ಇಲ್ಲ. ನಮ್ಮ ಜೀವನದಲ್ಲಿ ನಾವು ಪರಿಪೂರ್ಣ ಆಶೀರ್ವಾದವನ್ನು ಪಡೆಯಲು ಬಯಸವುದಾದರೆ ಮೊದಲನೆಯದಾಗಿ ಕುಟುಂಬದಲ್ಲಿ ನಂಬಿಗಸ್ತರಾಗಿರೋಣ.
ಎರಡನೆಯದಾಗಿ, ಅವರು ಕೆಲಸದಲ್ಲಿ ನಂಬಿಗಸ್ತರಾಗಿದ್ದರು. ಮೋಶೆ, ದೇವರು ತನಗೆ ಕೊಟ್ಟ ಕರೆಗೆ ಕೊನೆಯವರೆಗೂ ನಂಬಿಗಸ್ತರಾಗಿದ್ದರು. ಇಸ್ರಾಯೇಲ್ ಜನರಿಗಾಗಿ, ಜೀವ ಪುಸ್ತಕದಿಂದ ತನ್ನ ಹೆಸರನ್ನು ತೆಗೆದುಹಾಕುವಂತೆ ಕೇಳಿಕೊಂಡರು. ಹೌದು, ದೇವರು ನಮಗೆ ಕೊಟ್ಟ ಕೆಲಸ ಯಾವುದಾಗಿದ್ದರೂ ಅದರಲ್ಲಿ ನಾವು ನಂಬಿಗಸ್ತರಾಗಿರೋಣ. ಒಂದು ವೇಳೆ ನಮಗೆ ಇಷ್ಟವಿಲ್ಲದ, ನಾವು ನಿರೀಕ್ಷಿಸದ ಕೆಲಸವಾಗಿ ಕೂಡ ಇರಬಹುದು. ಆದರೆ ಆ ಕೆಲಸವನ್ನು ನಮಗೆ ಕೊಟ್ಟವರು ದೇವರು! ಆದುದರಿಂದ ನಾವು ಆ ಕೆಲಸದಲ್ಲಿ ನಂಬಿಗಸ್ತರಾಗಿರೋಣ.
ಪ್ರಿಯರೇ! ನಂಬಿಗಸ್ತ ನೆಂದು ಪರಿಗಣಿಸಿ ಕರ್ತನು ಮೋಶೆಗೆ ಘನವಾದ ಸೇವೆಯನ್ನು ನೀಡಿದರು. ಮೋಶೆಯೂ ಕೂಡ ಅದನ್ನು ಹಾಗೆಯೇ ಕಾಪಾಡಿಕೊಂಡರು. ನಮ್ಮ ಜೀವನ ಹೇಗಿದೆ? ಈ ಲೋಕದಲ್ಲಿ ನಮಗೆ ಕೊಡಲ್ಪಟ್ಟ ಚಿಕ್ಕ ಚಿಕ್ಕ ಕಾರ್ಯಗಳಲ್ಲಿ ನಾವು ನಂಬಿಗಸ್ತರಾಗಿದ್ದೇವೆಯೇ? ಯೋಚಿಸೋಣ. ಸ್ವಲ್ಪ ಕೆಲಸದಲ್ಲಿ ನಂಬಿಗಸ್ತರಾಗಿರುವವರಿಗೇ ದೊಡ್ಡ ಕೆಲಸದಲ್ಲಿ ಅಧಿಕಾರಿಯಾಗುವಂತೆ ಜವಾಬ್ದಾರಿ ಕೊಡಲಾಗುತ್ತದೆ. ದೇವರು ಸಾಕ್ಷಿ ಹೇಳುವಂತೆ ನಾವೂ ಸಹ ನಮ್ಮ ಜೀವನದುದ್ದಕ್ಕೂ ನಂಬಿಗಸ್ತರಾಗಿರೋಣ.
- D.ದಿವ್ಯಾ ಅಲೆಕ್ಸ್
ಪ್ರಾರ್ಥನಾ ಅಂಶ:
ಮೋಕ್ಷ ಪ್ರಯಾಣ ಎಂಬ ಮಾಸ ಪತ್ರಿಕೆಯನ್ನು ಮುದ್ರಿಸಲು ಬೇಕಾಗಿರುವ ಆರ್ಥಿಕವಾದ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482