Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.11.2021
Share:

By Village Missionary Movement

Thursday, 04-Nov-2021

ಧೈನಂದಿನ ಧ್ಯಾನ(Kannada) – 04.11.2021

 

ಸಾವಿನ ಭಯವಿಲ್ಲ

 

"...ಆಚೇದಡಕ್ಕೆ ಹೋಗೋಣ ಅಂದನು." - ಮಾರ್ಕನು 4:35

 

ತಾಲಿಬಾನಿಗಳು ಅಫ್ಘಾನಿಸ್ತಾನ ದೇಶವನ್ನು ಮುತ್ತಿಗೆ ಹಾಕಿದಾಗ, ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಆ ದೇಶದ ಎಲ್ಲೆಯನ್ನು ಬಿಟ್ಟು ಹೊರ ಹೋಗಲು ತುಂಬಾ ಪಾಡುಪಟ್ಟರು. ಆಗ ಒಂದು ಮಹಿಳೆಗೆ ಗೋಡೆ ಹತ್ತಲು ಸಾಧ್ಯವಾಗಲಿಲ್ಲ. ಇದನ್ನು ನೋಡಿದ ಅಮೇರಿಕಾ ಮಿಲಿಟರಿಯ ಕೆಲವು ಸದಸ್ಯರು ತಮ್ಮ ಕೈಗಳನ್ನು ಮೆಟ್ಟಿಲುಗಳ ಹಾಗೆ ಇಟ್ಟರು. ಆ ಕೈಗಳ ಮೇಲೆ ಹತ್ತಿ ಆ ಮಹಾಗೋಡೆಯನ್ನು ದಾಟಿ ಆ ದೇಶದ ಗಡಿಯನ್ನು ದಾಟಿದರು. ಆ ಮಹಿಳೆ ತಾನು ಜೀವಂತವಾಗಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಸೈನಿಕರಿಗೆ ಧನ್ಯವಾದ ಹೇಳುತ್ತಲೇ ಒಂದು ಹೊಸ ಎಲ್ಲೆಯನ್ನು ನೋಡುತ್ತಾ ಪ್ರಯಾಣ ಮುಂದುವರೆಸಿದರು.

 

ಸತ್ಯವೇದದಲ್ಲಿ ಮಾರ್ಕನು 4 ನೇ ಅಧ್ಯಾಯದಲ್ಲಿ 35 ನೇ ವಚನದಲ್ಲಿ ನೋಡುವಾಗ ಯೇಸು ತಮ್ಮ ಶಿಷ್ಯರನ್ನು ಆಚೆ ದಡಕ್ಕೆ ಹೊಗೋಣ ಬನ್ನಿ ಎಂದು ಕರೆಯುತ್ತಾರೆ. ಆದರೆ ಮಧ್ಯದಲ್ಲಿ ಬಲವಾದ ಸುಂಟರಗಾಳಿ ಯು ಬೀಸಲು, ಅಲೆಗಳು ಎದ್ದು ದೋಣಿ ಮುಳುಗಿ ಹೋಗುತ್ತದೆ ಎಂಬಂತಹ ಪರಿಸ್ಥಿತಿಯು ಏರ್ಪಟ್ಟಿತು. ಬಹಳ ಅಪಾಯಕಾರಿ ಸಮಯ! ನಾವು ಯೇಸುವಿನ ಮೇಲೆ ನಂಬಿಕೆಯಿಟ್ಟು ಆಚೆ ದಡಕ್ಕೆ ಹೋಗಲು ಹತ್ತಿದೆವು, ಆದರೆ ಈಗಲೋ ಅರ್ಧ ದಾರಿಯಲ್ಲೇ ಮುಳುಗಿ ಬಿಡುತ್ತೇವಾ ಎಂಬಂತಹ ಭಯ ಬಂದದ್ದರಿಂದ ಯೇಸುವನ್ನು ನೋಡಿ ಕೂಗುತ್ತಿದ್ದಾರೆ. ತಕ್ಷಣವೇ ಯೇಸು ಎದ್ದು, ಗಾಳಿಯನ್ನು ಗದರಿಸಿದನು. ತುಂಬಾ ಶಾಂತವಾಯಿತು. ನಂತರ 5 ನೇ, ಅಧ್ಯಾಯ ಮೊದಲನೆಯ ವಾಕ್ಯದಲ್ಲಿ ನೋಡುವಾಗ "ಅವರು ಸಮುದ್ರದ ಆಚೆಗೆ ಗದರೇನರ ಸೀಮೆಗೆ ಬಂದರು" ಎಂದು ಓದುತ್ತೇವೆ. 

 

ಸ್ನೇಹಿತರೇ! ಈ ಘೋರ ವ್ಯಾಧಿಯ ಅವಧಿಯಲ್ಲಿ ಪ್ರತಿದಿನವೂ ಏಳುವ ಪ್ರಶ್ನೆ, "ನಾನು ಆಚೆ ದಡಕ್ಕೆ ಹೋಗಿ ಬಿಡುತ್ತೇನಾ? ಎಂಬುದೇ. ಮೊದಲ ಅಲೆ, ಎರಡನೇ ಅಲೆ ಎಂದು ಹೇಳಿದರು, ಈಗ ಮೂರನೇ ಅಲೆ ಬರುತ್ತಿದೆ ಎನ್ನುತ್ತಿದ್ದಾರೆ. ಇನ್ನೂ ಎಷ್ಟು ಅಲೆಗಳೋ? ನಮಗೆ ಗೊತ್ತಿಲ್ಲ. ಆದರೆ ಯಾವ ಅಲೆ ಬಂದರೂ ಅದನ್ನು ಗದರಿಸಿ ನಮ್ಮನ್ನು ನಮ್ಮ ಜೀವನವನ್ನು ಆಚೆ ದಡಕ್ಕೆ ಕೊಂಡೊಯ್ಯಲು ಯೇಸು ಇದ್ದಾರೆ, ಆದ್ದರಿಂದ ಈ ದಿನಗಳನ್ನು ನೋಡಿ ನಾವು ಭಯಪಡುವುದು ಬೇಡ. ಯೇಸುವಿನ ಮೇಲೆ ಅವಲಂಬಿತರಾಗಿ, ನಂಬಿಗಸ್ತರಾಗಿ ಇರುವುದಾದರೆ, ನಮ್ಮನ್ನು, ನಮ್ಮ ಕುಟುಂಬವನ್ನು ಮತ್ತು ನಮ್ಮ ದೇಶವನ್ನು ಸುರಕ್ಷಿತವಾಗಿ ಆಚೆ ದಡಕ್ಕೆ ಕೊಂಡೊಯ್ಯುತ್ತಾರೆ! "ಅವರು ನುಡಿದರೆ ನಡೆಯುತ್ತದೆ, ಅಪ್ಪಣೆ ಕೊಟ್ಟರೆ ನಿಲ್ಲುತ್ತದೆ" ಎಂಬ ದೇವರ ಮಾತನ್ನು ನೆನೆಸಿಕೊಳ್ಳೋಣ. ನಿಶ್ಚಯವಾಗಿ ಈ ಕರೋನ ಅಲೆಯ ದಿನಗಳನ್ನು ದಾಟಿ ವಿಶ್ರಾಂತಿಕರ ಜೀವನ ಎಂಬ ಆಚೆ ದಡಕ್ಕೆ ಹೋಗುವುದು ಖಚಿತ! ಕರಕೊಂಡು ಹೋಗಿ ಸೇರಿಸುವುದು ಯೇಸು! ಆಮೆನ್!

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಸಹೋ. ಡೇವಿಡ್ ಗಣೇಶನ್ ರವರು ಸಾಮಾಜಿಕ ಮಾಧ್ಯಮಗಳಲ್ಲಿ ದೇವರ ವಾಕ್ಯವನ್ನು ಹೇಳುವಾಗ ಅದನ್ನು ಕೇಳುವ ಪ್ರತಿಯೊಬ್ಬರು ಬಿಡುಗಡೆ ಹೊಂದಿಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al