By Village Missionary Movement
Wednesday, 03-Nov-2021ಧೈನಂದಿನ ಧ್ಯಾನ(Kannada) – 03.11.2021
ಪೋಸ್ಟ್ ಹಾಕು
"ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು" - ಕೀರ್ತನೆ 65:2
ಆಸಕ್ತಿಯುಳ್ಳ ಪ್ರಾರ್ಥನೆ ಪತ್ರವನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕಿ ಬಿಟ್ಟು, ನಂತರ ಅದರ ಬಗ್ಗೆ ಚಿಂತಿಸದೆ ಇರುವಂತದ್ದಾಗಿದೆ. ಆದರೆ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು, "ಇದಕ್ಕೆ ಉತ್ತರ ಬಂದೇ ಇಲ್ಲ ಎಂದು ಹೇಳಿದರೆ ಏನು ಮಾಡುವುದು?" ಹೀಗೆ ಸಂದೇಹಪಟ್ಟರೆ ಏನನ್ನಾದರೂ ಪಡೆದುಕೊಳ್ಳಲು ಸಾಧ್ಯವೇ? ಅವುಗಳನ್ನು ನಮ್ಮ ಕೈಬಿಟ್ಟು ಕಳುಹಿಸಿ ಪೋಸ್ಟ್ ಆಫೀಸ್ ಮತ್ತು ಪೋಸ್ಟ್‌ಮ್ಯಾನ್ ಅನ್ನು ನಂಬುವುದು ಹೊರತು ಅವು ಒಂದನ್ನೂ ಸಾಧಿಸುವುದಿಲ್ಲ.
ಸತ್ಯವೇದದಲ್ಲಿ ನಮ್ಮಂತೆ ಪ್ರಯಾಸ ಪಟ್ಟ ವ್ಯಕ್ತಿ ಎಲೀಯ, ಇವರು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುತ್ತಾ ಬಂದ ಅಹಾಬನೆಂಬ ರಾಜನ ಬಳಿ ಹೇಳಿದರು “ಇಸ್ರಾಯೇಲ್‍ದೇವರಾದ ಯೆಹೋವನಾಣೆ, ನಾನು ಸೂಚಿಸಿದ ಹೊರತು ಇಂದಿನಿಂದ ಕೆಲವು ವರುಷಗಳವರೆಗೆ ಮಳೆಯಾಗಲಿ ಮಂಜಾಗಲಿ ಬೀಳುವದಿಲ್ಲ" ಎಂದು ಹಾಗೆಯೇ ನಡೆಯಿತು. ಆ ಕಾಲದ ನಂತರ, ಎಲೀಯ ಮತ್ತು ಅಹಾಬ ರಾಜನು ಕರ್ಮೆಲ್ ಬೆಟ್ಟದ ಮೇಲೆ ಇದ್ದರು. ಎಲೀಯನು ರಾಜನಾದ ಅಹಾಬನಿಗೆ, “ದೊಡ್ಡಮಳೆಯ ಶಬ್ದವು ಕೇಳಿಸುತ್ತಿದೆ” ಎಂದು ಹೇಳಿದರು. ಎಲೀಯನು ಕರ್ಮೆಲಿನ ತುದಿಗೆ ಹೋಗಿ, ಅಲ್ಲಿ ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮೇಲೆ ತಲೆಯನ್ನಿಟ್ಟು ಪ್ರಾರ್ಥಿಸಿದರು. ನಂತರ ತನ್ನ ಸೇವಕನಿಗೆ - ನೀನು ಮೇಲೆ ಹೋಗಿ ಸಮುದ್ರದ ಕಡೆಗೆ ನೋಡು ಎಂದು ಆಜ್ಞಾಪಿಸಿದರು. ಸೇವಕನು ಹೋಗಿ ನೋಡಿ ಬಂದು "ಏನೂ ತೋರುವದಿಲ್ಲ" ಎಂದು ಹೇಳಿದನು. "ನೀನು ಇನ್ನೂ ಏಳು ಸಾರಿ ಹೋಗಿ ನೋಡು" ಎಂದರು. ಏಳನೆಯ ಸಾರಿ ಸೇವಕನು "ಇಗೋ, ಅಂಗೈಯಷ್ಟು ಚಿಕ್ಕದಾದ ಮೋಡವು ಸಮುದ್ರದಿಂದ ಏರಿ ಬರುತ್ತಲಿದೆ "ಎಂದನು. ಒಬ್ಬ ಮನುಷ್ಯ ಆಸಕ್ತಿಯಿಂದ, ಪ್ರಾರ್ಥಿಸಿದನು. ಸ್ವಲ್ಪ ಹೊತ್ತಿನಲ್ಲೇ ಮಳೆ ಸುರಿಯಿತು.
ಕರ್ತನಲ್ಲಿ ಪ್ರಿಯರೇ! ನಮ್ಮ ಜೀವನದಲ್ಲಿಯೂ ಸಮಸ್ಯೆಗಳ ಸಮಯದಲ್ಲಿ ಗೊಂದಲದ ಸಮಯದಲ್ಲಿ ನಮ್ಮ ಮಾರ್ಗವನ್ನು ಕರ್ತನಿಗೆ ಒಪ್ಪಿಸಿ, ಅವರ ಮೇಲೆ ನಂಬಿಕೆ ಇಟ್ಟು, ಅವರನ್ನು ಪ್ರಾರ್ಥಿಸುವಾಗ, ಅವರೇ ಕಾರ್ಯವನ್ನು ಸಿದ್ಧಿಗೆ ತರುತ್ತಾರೆ. ಒಂದು ಪತ್ರವನ್ನು ನಂಬಿಕೆಯೊಂದಿಗೆ ಅಂಚೆ ಪೆಟ್ಟಿಗೆಯಲ್ಲಿ ಹಾಕುವಾಗ ಮಾತ್ರವೇ ಸರಿಯಾದ ವ್ಯಕ್ತಿಯನ್ನು ತಲುಪಿ ಅಲ್ಲಿಂದ ಉತ್ತರವನ್ನು ಪಡೆದುಕೊಂಡ ಹಾಗೆ ನಾವು ಪ್ರಾರ್ಥಿಸುವಾಗ ಮಾತ್ರವೇ ನಮಗಾಗಿ ಕ್ರಿಯೆ ಮಾಡುತ್ತಾರೆ. ನಾವೂ ಕೂಡ ಜಯವನ್ನು ಪಡೆದುಕೊಳ್ಳುತ್ತೇವೆ. ಸನ್ನಿವೇಶಗಳನ್ನು ನೋಡಿ ಆಯಾಸಗೊಳ್ಳಬೇಡಿರಿ. ಜೀವವುಳ್ಳ ದೇವರು ಖಂಡಿತವಾಗಿ ನಮ್ಮ ಪ್ರಾರ್ಥನೆಗಳಿಗೆ ಉತ್ತರ ನೀಡುತ್ತಾರೆ. ಆಮೆನ್!
- P. ಬ್ಯೂಲ
ಪ್ರಾರ್ಥನಾ ಅಂಶ:
ಸಭೆಗಳನ್ನು ತೆರೆಯುವಂತೆ, ಆರಾಧನೆಗಳು ನಡೆಯುವಂತೆ ಸಹಾಯ ಮಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥಿಸೋಣ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482