Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.11.2021
Share:

By Village Missionary Movement

Tuesday, 02-Nov-2021

ಧೈನಂದಿನ ಧ್ಯಾನ(Kannada) – 02.11.2021

 

ಮೀರುವ ಪ್ರಯತ್ನ

 

"ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು." - ಫಿಲಿಪ್ಪಿ 4:13

 

ಹುಟ್ಟುವಾಗ 1200 ಗ್ರಾಂಗಿಂತ ಕಡಿಮೆ ತೂಕದಲ್ಲಿ ಜನಿಸಿದವರೇ ಲೀಸಿ. ಇವರಿಗೆ ಲಿಯೋ ಹೋಟ್ಟಲ್ ಪೀಟಾಜ್ ರಾಯ್ಡು ಸಿಂಡ್ರೋಮ್ ಎಂಬ ರೋಗ ಇರುವುದು ಪತ್ತೆಯಾಯಿತು. ಅವರಿಗೆ ಬಲಗಣ್ಣು ಕಾಣುವುದಿಲ್ಲ. ಮತ್ತು ಅನೇಕ ಬಲಹೀನತೆಗಳು, ನೋಡುವುದಕ್ಕೆ ವ್ಯತ್ಯಾಸವಾಗಿರುವುದರಿಂದ ಅನೇಕರು ಗೇಲಿ ಮಾಡುತ್ತಿದ್ದರು. ಲೀಸಿ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡು ದೇವರು ನನ್ನನ್ನು ಏಕೆ ಸೃಷ್ಟಿಸಿದರು ಎಂದು ಅಳುತ್ತಿದ್ದರು. 17 ನೇ ವಯಸ್ಸಿನಲ್ಲಿ You tube - ನಲ್ಲಿ ಅಸಹ್ಯವಾದ ಮಹಿಳೆ ಎಂಬ ಹೆಸರಿನಲ್ಲಿ ಬಂದ ಒಂದು ವೀಡಿಯೋದಲ್ಲಿ ಇವರ ಫೋಟೋ ಬಂತು. ಆ ವೀಡಿಯೋ ವನ್ನು 40 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಅನೇಕ ಸುಳ್ಳು ಟೀಕೆಗಳು ಬಂದವು. ಇದರಿಂದಾಗಿ ಬೇಸರಗೊಂಡು ನಿದ್ದೆಯಿಲ್ಲದೆ ಇದ್ದರು. ನಂತರ ನಾನು ಏಕೆ ನನ್ನ ಬಗ್ಗೆ ಕಡಿಮೆಯಾಗಿ ಯೋಚಿಸಿ ಕುಗ್ಗಿಹೋದ ಸ್ಥಿತಿಯಲ್ಲಿ ಬದುಕಬೇಕು ಎಂದು ಯೋಚಿಸಿ "How do you define yourself" ಎಂಬ ಅಂಶದಲ್ಲಿ ಮಾತನಾಡಿದ motivation speech - ಗೆ 54 ಮಿಲಿಯನ್ ವೀಕ್ಷಕರು ಸಿಕ್ಕಿದರು. ಇಂದಿಗೂ ಹಲವೆಡೆ motivation speech ಅನ್ನು ಕೊಡುತ್ತಲೇ ಇದ್ದಾರೆ. 

 

ಮೋಶೆ ಬೇರೆ ದೇಶದಲ್ಲಿ ತನ್ನ ಮಾವನ ಮನೆಯಲ್ಲಿ ಏಕಾಂಗಿಯಾಗಿ ಕುರಿಗಳನ್ನು ಮೇಯಿಸುವವನಾಗಿ ಅರಣ್ಯದಲ್ಲಿ ಅಲೆದಾಡುತ್ತಿದ್ದಾಗ ದೇವರು ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಕಾಣಿಸಿಕೊಂಡು ಐಗುಪ್ತದಲ್ಲಿರುವ ಇಸ್ರಾಯೇಲ್ ಜನರನ್ನು ಐಗುಪ್ತದ ದಾಸತ್ವದಿಂದ ಬಿಡಿಸಿಕೊಂಡು ಬರಲು ನೀನು ಹೋಗು, ಎಂದರು. ಆದರೆ ಮೋಶೆ, ನಾನು ಎಷ್ಟರವನು? ಎಂದು ಹೇಳುತ್ತಾರೆ. ಅವರು ನನ್ನನ್ನು ನಂಬುವುದಿಲ್ಲ, ನೀವು ಕಳುಹಿಸಲು ಸಿದ್ಧರಿರುವ ಬೇರೆ ಯಾರನ್ನಾದರೂ ಕಳುಹಿಸಿರಿ ಎಂದನು. ಏಕೆಂದರೆ ಅವನು ಹೀಗೆಯೇ ಕುರಿಗಳನ್ನು ಮೇಯಿಸುತ್ತಾ ತನ್ನ ಹೆಂಡತಿ ಮಕ್ಕಳೊಂದಿಗೆ ಜೀವಿಸೋಣ ಎಂದು ತನ್ನ ಸುತ್ತ ಒಂದು ವೃತ್ತವನ್ನು ಹಾಕಿ ಇದರೊಳಗೆ ಬದುಕಲು ಬಯಸಿದ್ದನು. ಆದರೂ ದೇವರು ಮೋಶೆಯನ್ನು ಬಿಡಲಿಲ್ಲ. ನಂತರ ಮೋಶೆ ಒಪ್ಪಿಕೊಂಡನು, ದೊಡ್ಡ ನಾಯಕನಾಗಿ ಮಾರ್ಪಟ್ಟನು.

 

ಇದನ್ನು ಓದುತ್ತಿರುವ ಪ್ರಿಯರೇ! ನೀವೂ ಕೂಡ ನಾನು ಹೀಗಿರಬೇಕು, ಈ ಕಾಲೇಜಿನಲ್ಲಿ ಓದಬೇಕು, ಇಷ್ಟು ಅಂಕ ಗಳಿಸಬೇಕು ಹಾಗಾಗಿದ್ದರೆ ಮಾತ್ರವೇ ನಾನು ಚೆನ್ನಾಗಿ ಬದುಕಲು ಸಾಧ್ಯ. ಇದಿಲ್ಲದ ಜೀವನ ಜೀವನವೇ? ಎಂದು ನೆನೆಸಿ ಕಿರಿದಾದ ವೃತ್ತದಲ್ಲಿರುವಾಗ, ಅದಕ್ಕೆ ವಿರೋಧವಾಗಿ ಪರಿಸ್ಥಿತಿಗಳು ಮಾರ್ಪಡುವಾಗ ಕುಗ್ಗಿ ಹೋಗುತ್ತೇವೆ. ಹಾಗಿರದೇ ದೇವರ ದೊಡ್ಡ ಯೋಜನೆಯಲ್ಲಿ ನಮ್ಮ ಜೀವನವನ್ನು ಸಮರ್ಪಿಸಿಕೊಳ್ಳಲು ಪ್ರಯತ್ನಿಸಬೇಕು. ಲೀಸಿ ಯವರು ಅತ್ತರೂ ಕೂಡ ನಂತರ ಎದ್ದು ಇಂದು ಅನೇಕರನ್ನು ಚೈತನ್ಯ ಗೊಳಿಸುವ ಭಾಷಣಗಳನ್ನು ಮಾಡುತ್ತಾ ಅನೇಕರ ಜೀವನದಲ್ಲಿ ಒಳ್ಳೆಯ ಆಲೋಚನೆಗಳನ್ನು ಹುಟ್ಟುಹಾಕುವವರಾಗಿದ್ದಾರೆ ಅದರಂತೆ ನೀವೂ ಕೂಡ ಅಳಿರಿ, ಆದರೆ ಕುಗ್ಗಿ ಹೋಗದೇ ಮೋಶೆ ದೇವರ ಚಿತ್ತವನ್ನು ಅಂಗೀಕರಿಸಿದ ಹಾಗೆ ನೀವು ಕೂಡ ದೇವರು ನಿಮಗೆಂದು ಕೊಟ್ಟ ಅಂಕ ಮತ್ತು ಕಾಲೇಜನ್ನು ಸ್ವೀಕರಿಸಿ ಜೀವಿಸುವಾಗ ನಿಮ್ಮ ಜೀವನವೂ ಆಶೀರ್ವಾದಕರವಾಗಿರುತ್ತದೆ. ಜೀವನದಲ್ಲಿ ಕುಗ್ಗಿ ಹೋಗಿ ಸುಮ್ಮನೆ ಕುಳಿತುಕೊಳ್ಳದೇ ಮೇಲೆದ್ದು ಮುಂದೆ ಸಾಗುವುದೇ ಯಶಸ್ಸು.

- Mrs. ಜ್ಯೋತಿ ಸ್ಟಾಲಿನ್ 

 

ಪ್ರಾರ್ಥನಾ ಅಂಶ:

ಶಾಲೆಗಳಿಗೆ ಹೋಗುವ ಮಿಷನರಿಗಳ ಮಕ್ಕಳಿಗೆ ದೇವರು ಸುರಕ್ಷತೆಯನ್ನು ದಯಪಾಲಿಸುವಂತೆ ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş