Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.10.2021 (Kids Special)
Share:

By Village Missionary Movement

Sunday, 31-Oct-2021

ಧೈನಂದಿನ ಧ್ಯಾನ(Kannada) – 31.10.2021 (Kids Special)

 

ಕೇಳಿದ್ದನ್ನು ಕೊಡುತ್ತಾರೆ

 

"ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಬೇಡಿದವುಗಳು ಆತನಿಂದ ನಮಗೆ ದೊರೆತವೆಂಬದೂ ನಮಗೆ ಗೊತ್ತಾಗಿದೆ." - 1 ಯೋಹಾನ 5:15

 

ಚಳಿಯಲ್ಲಿ ನಡುಗುತ್ತಿರುವ ತನ್ನ ಮಕ್ಕಳನ್ನು ಕಂಡ ತಾಯಿ ನಿರ್ಮಲಾ ಅವರಿಗೆ ತುಂಬಾ ನೋವಾಗಿತ್ತು. ಸೋರುತ್ತಿದ್ದ ಮನೆಯೊಳಗೆ, ತಮ್ಮ ಬಳಿ ಇದ್ದ ಬೆಡ್ ಶೀಟ್ ಅನ್ನು ಸುತ್ತಿಕೊಂಡು ಮಕ್ಕಳಿಬ್ಬರು ಕುಳಿತಿದ್ದರು. ತನ್ನ ನೋವನ್ನು ಯಾರ ಬಳಿ ಹೇಳುವುದೆಂದು ಕುಳಿತಿದ್ದರು. ಗಂಡ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿಬಿಟ್ಟದ್ದರಿಂದ ಅವರು ಬೇರೆ ಕಡೆ ಕೆಲಸ ಕೇಳಿಕೊಂಡು ಬರಲು ಹೋಗಿದ್ದರು. ರೇಷನ್ ಅಂಗಡಿಯಲ್ಲಿ ಖರೀದಿಸಿದ ಸೀಮೆಎಣ್ಣೆ ಖಾಲಿಯಾಗುತ್ತಿದೆ. ಬೆಳಗ್ಗೆ ಮಾಡಿದ ಅಲ್ಪಸ್ವಲ್ಪ ಊಟವನ್ನು ಮಕ್ಕಳು ಸೇವಿಸಿದರು. ಗಂಡನಿಗಾಗಿ ಕಾಯುತ್ತಿದ್ದಾಗ ಹಸಿವು ಬೇರೆ ಹೊಟ್ಟೆಯನ್ನು ಚಿವುಟಿ ಹಾಕುತ್ತಿದೆ. "ಅಮ್ಮಾ, ಯೇಸಪ್ಪ ನಮಗೆ ಯಾಕೆ ಹೀಗೆ ತುಂಬಾ ಕಷ್ಟ ಕೊಡುತ್ತಿದ್ದಾರೆ?" ಎಂದು ಕೇಳಿದನು ಏಳು ವರ್ಷದ ಮಗ ಡೇವಿಡ್. “ಯೇಸಪ್ಪ ಕಷ್ಟ ಕೊಡುವುದಿಲ್ಲ. ಇಂತಹ ಕಷ್ಟಗಳು ನಮಗೆ ಬಂದರೂ ಒಳಿತೇ ಆಗುತ್ತದೆ. ನಮಗೆ ಶೀಘ್ರದಲ್ಲೇ ಯೇಸಪ್ಪ ಒಳ್ಳೆಯ ಮನೆಯನ್ನು ನೀಡುತ್ತಾರೆ" ಎಂದಳು ಐದು ವರ್ಷದ ತಂಗಿ ರೋಸಿ. “ಯೇಸಪ್ಪನನ್ನು ಕೊರತೆ ಹೇಳಬಾರದು ಅಂತ ಸಂಡೇ ಸ್ಕೂಲ್ ನಲ್ಲಿ ಅವರು ನಿನಗೆ ಹೇಳಿಕೊಟ್ಟಿಲ್ವಾ ಡೇವಿಡ್? ನಾವು ಪ್ರಾರ್ಥನೆ ಮಾಡೋಣ, ಯೇಸಪ್ಪ ನಮಗೆ ಮನೆಯನ್ನು ನೀಡುತ್ತಾರೆ” ಎಂದಳು ರೋಸಿ. "ಮನೆಯೆಲ್ಲಾ ಏನೂ ಬೇಡ, ಈ ಸೋರುತ್ತಿರುವ ಮನೆಯನ್ನು ಮನೆಯ ಮಾಲೀಕರು ಬಂದು ಸರಿಪಡಿಸಿ ಕೊಟ್ಟರೆ ಸಾಕು" ಎಂದು ಡೇವಿಡ್ ಕೋಪದಿಂದ ಹೇಳಿದನು. ಮಗಳಿಗಿರುವ ನಂಬಿಕೆ ಮಗನಿಗೆ ಇಲ್ಲವೇ ಎಂದು ತಾಯಿ ನೋಡಿ "ಸರಿ ಬನ್ನಿ ನಾವು ಪ್ರಾರ್ಥಿಸೋಣ" ಎಂದು ತಾಯಿ ಹೇಳಿ ಮುಗಿಸುವ ಮುನ್ನವೇ ರೋಸಿ ಮೊಣಕಾಲೂರಿ ನಿಂತಳು. "ಅಮ್ಮಾ, ನಾನು ಪ್ರಾರ್ಥನೆ ಮಾಡಲಾ?" ಎಂದು ಕೇಳಿದ ಮಗಳನ್ನು ನಿರ್ಮಲಾ ಆಶ್ಚರ್ಯದಿಂದ ನೋಡಿದಳು. ನಂಬಿಕೆಯಿಲ್ಲದೆ ತಾನು ಪ್ರಾರ್ಥಿಸುವುದಕ್ಕಿಂತ, ನಂಬಿಗಸ್ತಳಾಗಿರುವ ಮಗಳು ಪ್ರಾರ್ಥಿಸುವುದೇ ಉತ್ತಮ ಎಂದು ಅವಳು ಪ್ರಾರ್ಥಿಸುವುದಕ್ಕೆ ತಡೆ ಹೇಳಲಿಲ್ಲ. ಪುಟ್ಟ ಹುಡುಗಿ ತನ್ನ ಪುಟಾಣಿ ಕೈಗಳನ್ನು ಜೋಡಿಸಿ, ಸುಂದರವಾಗಿ ಪ್ರಾರ್ಥಿಸಿದಳು.

 

ಬಾಗಿಲು ಬಡಿಯುವ ಸದ್ದು! ಅದನ್ನು ತೆರೆದಾಗ ನಿರ್ಮಲಾ ಅವರ ಗಂಡ ಕುಮಾರ್ ನಿಂತಿದ್ದರು. "ಮಕ್ಕಳು ಇನ್ನೂ ಮಲಗಿಲ್ಲವೇ?" ಎಂದು ಕೇಳಿದರು. "ಅಪ್ಪಾ, ಆ ಮೂಲೆಯಲ್ಲಿನ ಹೆಂಚುಗಳು ಗಾಳಿಗೆ ಮುರಿದು ಬಿದ್ದಿವೆ ಮಳೆಯ ನೀರು ಮನೆಯೊಳಗೆ ಬೀಳುತ್ತಿರುವುದರಿಂದ ಚಳಿಯಾಗುತ್ತಿದೆ" ಎಂದು ಹೇಳುತ್ತಾ ಡೇವಿಡ್ ಓಡಿಹೋಗಿ ತನ್ನ ತಂದೆಯ ಕಾಲುಗಳನ್ನು ತಬ್ಬಿಕೊಂಡನು. “ನಿರ್ಮಲಾ, ರಾಜತುರೈ ಅಣ್ಣಾವ್ರು ನನಗೆ ಕೆಲಸ ಕೊಟ್ಟಿದ್ದಾರೆ. ಆತನ ಬಟ್ಟೆ ಅಂಗಡಿಯ ಹಿಂದೆ ಒಂದು ಚಿಕ್ಕ ಸುಂದರ ಮನೆ ಇದೆ. ಅದರಲ್ಲಿ ಉಳಿಯಲು ಹೇಳಿದರು. ಅವರು ನಾಳೆಯೇ ಕೆಲಸಕ್ಕೆ ಬರಲು ಹೇಳಿಬಿಟ್ಟರು.” ನಿರ್ಮಲಾ ಮಗಳ ಮುಖ ನೋಡಿದಳು. "ನನಗೆ ಗೊತ್ತು ಯೇಸಪ್ಪ ಮನೆ ಕೊಡುತ್ತಾರೆ ಅಂತ" ಎಂದು ಹೇಳಿದ ಹಾಗಿತ್ತು ಮಗಳ ಮುಖ. ಹೆಂಚು ಇಲ್ಲದ ಆ ತೂತಿನಿಂದ ಬಂದ ಬೆಳದಿಂಗಳ ಬೆಳಕಲ್ಲಿ ಮನೆ ಹೊಳೆಯುತ್ತಿತ್ತು. ಪುಟಾಣಿಗಳೇ, ನೀವು ಕೂಡ ಯಾವುದೇ ಕಷ್ಟವಾಗಿದ್ದರೂ ಸರಿ ಯೇಸಪ್ಪನ ಬಳಿ ಪ್ರಾರ್ಥಿಸಿರಿ. ಯೇಸಪ್ಪ ಖಂಡಿತವಾಗಿಯೂ ಉತ್ತರ ಕೊಡುತ್ತಾರೆ.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş