Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.10.2021
Share:

By Village Missionary Movement

Friday, 29-Oct-2021

ಧೈನಂದಿನ ಧ್ಯಾನ(Kannada) – 29.10.2021

 

ತೀರ್ಮಾನ - ಬಹುಮಾನ

 

"ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು; ಧನವಂತನಾಗಲು ಆತುರಪಡುವವನು ದಂಡನೆಯನ್ನು ಹೊಂದದಿರನು." - ಜ್ಞಾನೋಕ್ತಿಗಳು 28:20

 

ಹೆನ್ರಿ ಪಿ. ಕ್ರೋವೆಲ್ (Henry P. Crowell) ಎಂಬವರು ಒಂದು ದೊಡ್ಡ ಹಣವಂತರ ಮನೆಗೆ ಸೇರಿದವರೆಂದೇ ಹೇಳಬಹುದು, ಅವರ ಚಿಕ್ಕ ವಯಸ್ಸಿನಲ್ಲಿ ಕ್ಷಯರೋಗದಿಂದಾಗಿ ಬಾಧಿಸಲ್ಪಟ್ಟು ಶಾಲೆ ಮತ್ತು ವಿದ್ಯಾಭ್ಯಾಸವನ್ನು ಬಿಡಬೇಕಾಯಿತು. ಅವರೊಂದು ದಿನ D.L.ಮೂಡಿಯವರ ಸಂದೇಶವನ್ನು ಕೇಳಿ ಈ ರೀತಿಯಾಗಿ ತೀರ್ಮಾನಿಸಿದರು, ನನ್ನಿಂದ ಸಂದೇಶ ನೀಡಲು ಸಾಧ್ಯವಿಲ್ಲ, ಆದರೆ ಉತ್ತಮವಾದ ಉದ್ಯಮಿ ಆಗಲು ಸಾಧ್ಯ. ದೇವರೇ ನಿಮಗೆ ಚಿತ್ತವಾದರೆ ನಾನು ಪ್ರಾರಂಭಿಸುವ ವ್ಯಾಪಾರದಲ್ಲಿ ಒಳ್ಳೆಯ ಲಾಭ ಪಡೆಯಲು ಸಹಾಯ ಮಾಡಿ. ನಂಬಿಗಸ್ತನಾಗಿ ನಿಮ್ಮ ಸೇವೆಗೆ ಬೆಂಬಲಿಸುತ್ತೇನೆ" ಎಂದು ಹರಕೆ ಮಾಡಿದರು. ನಂತರ ಓರಿಯೋ ಎಂಬ ಸ್ಥಳದಲ್ಲಿ Quaker Mills ಎಂಬ ಚಿಕ್ಕ ಓಟ್ಸ್ ತಯಾರಿಸುವ ಕಾರ್ಖಾನೆಯನ್ನು ಪ್ರಾರಂಭಿಸಿದರು. 10 ವರ್ಷಗಳೊಳಗೆ ಅಮೆರಿಕದ ಪ್ರತಿಯೊಂದು ಮನೆಯಲ್ಲೂ ಓಟ್ಸ್ (oats) ಬೆಳಗಿನ ಉಪಹಾರವಾಗಿ ಮಾರ್ಪಟ್ಟಿತು. ಅವರೂ ಕೂಡ ಅದಕ್ಕೆ ತಕ್ಕಂತೆ ದಶಮಾಂಶವನ್ನು ಯಥಾರ್ಥವಾಗಿ ಕೊಡಲು ಪ್ರಾರಂಭಿಸಿದರು. ಇನ್ನೂ (Quaker oats) ಪ್ರಪಂಚದಾದ್ಯಂತ ವಿಸ್ತರಿಸಿ, ಅನೇಕರು ಅದನ್ನು ಉಪಯೋಗಿಸುತ್ತಿದ್ದಾರೆ. ಒಬ್ಬ ಮನುಷ್ಯ ನಂಬಿಗಸ್ತನಾಗಿ ಇದ್ದದರಿಂದ ಅವನ ಕೆಲಸಗಳನ್ನು, ವ್ಯಾಪಾರವನ್ನು ಕರ್ತನು ಆಶೀರ್ವದಿಸಿದರು.

 

ಪರಿಶುದ್ಧ ಗ್ರಂಥದಲ್ಲಿ ಎಲೀಯನೆಂಬ ಪ್ರವಾದಿ ನಮಗೆ ಗೊತ್ತು. ಆತನು ವಾಸವಾಗಿದ್ದ ಮನೆಯ ಯಜಮಾನಿಯ ಮಗ ಅಸ್ವಸ್ಥನಾಗಿದ್ದನು. ಆಗ ಎಲೀಯ, ಮಗುವಿನ ಆತ್ಮ ಪುನಃ ಅವನೊಳಗೆ ಬರುವಂತೆ ಮಾಡು ಎಂದು ಕರ್ತನನ್ನು ನೋಡಿ ವಿಜ್ಞಾಪನೆ ಮಾಡಿದರು. ಕರ್ತನು ಎಲೀಯನ ಶಬ್ದವನ್ನು ಕೇಳಿದರು. ಮಗುವಿನ ಆತ್ಮ ಅವನೊಳಗೆ ತಿರುಗಿ ಬಂತು. ಇದನ್ನು ನೋಡೀದ ಆ ಸ್ತ್ರೀ ಎಲೀಯನನ್ನು ನೋಡಿ ನೀನು ದೇವರ ಮನುಷ್ಯನೆಂದೂ, ನಿಮ್ಮ ಬಾಯಿಂದ ಹೊರಡುವ ಮಾತುಗಳು ಹೊರಬರುವ ಕರ್ತನ ವಾಕ್ಯಗಳು ನಿಜ ಎಂದು ಸಾಕ್ಷಿ ಹೇಳುತ್ತಾಳೆ. ಎಲೀಯನ ಬಾಯಿಂದ ಬಂದ ನಿಜವಾದ ಪ್ರವಾದನೆಯ ಮಾತುಗಳು ಸತ್ತು ಹೋದ ಮಗನನ್ನು ಬದುಕಿಸಿತು.

 

ಇದನ್ನು ಓದುತ್ತಿರುವ ಪ್ರಿಯರೇ! ನಂಬಿಗಸ್ತನಾದ ಮನುಷ್ಯನೇ ಪರಿಪೂರ್ಣವಾದ ಆಶೀರ್ವಾದಗಳನ್ನು ಹೊಂದಿಕೊಳ್ಳಲು ಸಾಧ್ಯ. ಇಂದು ನಾವು ಯೇಸುವನ್ನು ನಂಬಿಕೆಯಿಂದ ಹುಡುಕುತ್ತಿದ್ದೇವಾ? ಸತ್ಯವೇದವನ್ನು ಓದುವ ಕಾರ್ಯಗಳಲ್ಲೂ, ಅದನ್ನು ಧ್ಯಾನ ಮಾಡುವ ಸಮಯಗಳಲ್ಲೂ ನಾವು ನಂಬಿಗಸ್ತ ರಾಗಿ ಇದ್ದೇವಾ ಎಂದು ಸ್ವಲ್ಪ ಯೋಚಿಸೋಣ. ಇನ್ನೂ ಇದನ್ನು ಓದುತ್ತಿರುವ ನೀವು ಕೂಡ ಒಂದು ಸಣ್ಣ ವ್ಯಾಪಾರ ಮಾಡುವವರಾಗಿರಬಹುದು. ನಿಮ್ಮ ವ್ಯಾಪಾರದಲ್ಲಿ, ವಿದ್ಯಾಭ್ಯಾಸದಲ್ಲಿ, ಸಂಪಾದನೆಯಲ್ಲಿ ನಂಬಿಗಸ್ತರಾಗಿದ್ದೀರ? ನಮ್ಮ ಕೆಲಸದಲ್ಲಿ ನಾವು ದೇವರಿಗೆ ನಂಬಿಗಸ್ತ ರಾಗಿದ್ದರೆ ನಾವು ಅವರ ಬಳಿಯಿಂದ ಪರಿಪೂರ್ಣ ಆಶೀರ್ವಾದಗಳನ್ನು ಹೊಂದಿಕೊಳ್ಳಬಹುದು. ಆದ್ದರಿಂದಲೇ ನಮ್ಮ ಕ್ರಿಯೆಗಳಲ್ಲಿಯೂ, ನಮ್ಮ ಬಾಯಿ ಮಾತುಗಳಲ್ಲಿಯೂ ನಂಬಿಗಸ್ತ ರಾಗಿರೋಣ!

- Mrs.ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ನಮ್ಮ ಹಾಸ್ಟೆಲ್ ನಲ್ಲಿರುವ ಮಕ್ಕಳ ಪ್ರೌಢ ಶಿಕ್ಷಣದ ಅವಶ್ಯಕತೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al