By Village Missionary Movement
Thursday, 28-Oct-2021ಧೈನಂದಿನ ಧ್ಯಾನ(Kannada) – 28.10.2021
ಮುಚ್ಚಿಡಲು ಸಾಧ್ಯವಾಗದವುಗಳು
"ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು;..." - ಜ್ಞಾನೋಕ್ತಿ 28:13
ರೈತರೊಬ್ಬರು ಕಲ್ಲಂಗಡಿ ಗಿಡಗಳನ್ನು ಬೆಳೆಸುತ್ತಿದ್ದರು. ಒಮ್ಮೆ ಯಾವುದೋ ಒಂದು ಕೆಲಸದ ನಿಮಿತ್ತವಾಗಿ ನಗರಕ್ಕೆ ಹೋಗಬೇಕಿತ್ತು. ಆದ್ದರಿಂದ ತನ್ನ ಮಗನ ಬಳಿ, ಕಲ್ಲಂಗಡಿ ತೋಟವನ್ನು ನೋಡಿಕೋ, ಹಣ್ಣುಗಳನ್ನು ಕಿತ್ತು ತಿನ್ನಬೇಡ. ಅವು ಇನ್ನೂ ಬಲಿಯಲಿಲ್ಲ" ಎಂದು ಹೇಳಿ ಹೊರಟರು. ಮಗು ತೋಟಕ್ಕೆ ಹೋದ. ಅಲ್ಲಿ ಬಲಿತಿರುವ ಒಂದು ಹಣ್ಣನ್ನು ನೋಡಿದ. ಅದನ್ನು ಕಿತ್ತು ಅಲ್ಲಿದ್ದ ಬಂಡೆಯ ಮೇಲೆ ಇಟ್ಟು ಒಡೆದು ತಿಂದು ಬಿಟ್ಟನು. “ನನ್ನ ಅಪ್ಪ ಹೇಳಿದ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದೇನೆ” ಎಂದು ಗೊತ್ತಿದ್ದರೂ “ಅವರು ನೋಡುತ್ತಲಾ ಇದ್ದಾರೆ” ಎಂದು ಮನಸ್ಸನ್ನು ಸಮಾಧಾನಪಡಿಸಿಕೊಂಡು ಮನೆಗೆ ಹೊರಟು ಹೋದನು.
ತಂದೆ ಹಿಂತಿರುಗಿ ಬಂದು ತೋಟವನ್ನು ದೃಷ್ಟಿಸಿ ನೋಡಿದರು. ಮಗನು ಮಾಡಿದ ತಪ್ಪನ್ನು ಕಂಡುಹಿಡಿಯಲಿಲ್ಲ, ಮತ್ತು ಹಲವಾರು ವಾರಗಳು ಕಳೆದವು. ಒಂದು ದಿನ ಅವನ ತಂದೆ ಹಸುಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದಾಗ ಬಂಡೆಯ ಸುತ್ತಲೂ ಸಣ್ಣ ಕಲ್ಲಂಗಡಿ ಗಿಡಗಳನ್ನು ನೋಡಿದನು. ಮಗ ತಿಂದ ಹಣ್ಣಿನ ಬೀಜದಿಂದ ಅವು ಮೊಳಕೆಯೊಡೆದಿವೆ ಎಂದು ಅವನು ಊಹಿಸಿದನು. ಬಹಳ ದಿನಗಳ ನಂತರ ಆತ ಮಾಡಿದ ಕಾರ್ಯ ಹೊರಬಂತು. ಇದನ್ನು ಯೋಚಿಸುತ್ತಲೇ ನಡೆದ ತಂದೆಯೊಡನೆ ದೇವರು ಕೆಳಕಂಡಂತೆ ಮಾತನಾಡಿದರು.
ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ಮನುಷ್ಯ ಮಾಡುವ ತಪ್ಪುಗಳು ಇತರರ ಗಮನಕ್ಕೆ ಬಾರದೆ ಹೋಗಬಹುದು. ಈ ರೀತಿ ಮಾಡಿದ ತಪ್ಪುಗಳು ಯಾರಿಗೂ ತಿಳಿಯುವುದಿಲ್ಲ ಎಂಬ ಕಾರಣದಿಂದ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತೇವೆ. ಈ ಲೋಕದಲ್ಲಿ ನಾವು ಮಾಡುವ ತಪ್ಪುಗಳು ಮುಂದೊಂದು ದಿನ ಮನುಷ್ಯರ ಮುಂದೆ ಬಹಿರಂಗವಾಗಿ ನಮ್ಮನ್ನು ನಾಚಿಕೆಪಡಿಸುತ್ತದೆ. ಹಾಗೆ ಬಹಿರಂಗವಾಗದೇ ಹೋದರೂ, ಮರಣದ ನಂತರ ದೇವರ ಸಿಂಹಾಸನದ ಮುಂದೆ ನಾವು ನಿಂತುಕೊಳ್ಳುವಾಗ ಅವು ಬಹಿರಂಗಗೊಳ್ಳುತ್ತವೆ. ನಮ್ಮ ಜೀವನದ ಒಳ್ಳೆಯ ಕಾರ್ಯಗಳೋ, ಕೆಟ್ಟ ಕಾರ್ಯಗಳೋ ಅವೆಲ್ಲವೂ ಕೂಡ ದೇವರ ಜ್ಞಾಪಕ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ.
ಪ್ರಿಯರೇ! ನಮ್ಮ ಕುಟುಂಬದಲ್ಲಿ ಪ್ರತಿಯೊಂದು ಘಟನೆಗಳ ಮೂಲಕ ದೇವರು ನಮ್ಮೊಂದಿಗೆ ಮಾತನಾಡುತ್ತಲೇ ಇರುತ್ತಾರೆ. ನಾವೇ ಅವರ ಶಬ್ದವನ್ನು ಕೇಳುವುದಿಲ್ಲ. ಕಾರ್ಯವೇನಾಗಿದ್ದರೂ ನನಗೆ ಇದರಲ್ಲಿ ಏನಾದರೂ ಪಾಠವಿದೆಯೇ? ನಾವು ಏನಾದರೂ ಕಲಿತುಕೊಳ್ಳಬೇಕಾ? ನಾವು ಬದಲಾಯಿಸಿಕೊಳ್ಳ ಬೇಕಾದ ಸ್ವಭಾವ ಯಾವುದು? ಎಂಬ ಹೃದಯ ಮಾತ್ರ ನಮಗಿದ್ದರೆ ದೇವರು ನಮ್ಮೊಂದಿಗೆ ಮಾತನಾಡುವುದನ್ನು ನಾವು ಗ್ರಹಿಸಬಹುದು.
- Mrs. ಜೆಬಾ ಗಣೇಸನ್
ಪ್ರಾರ್ಥನಾ ಅಂಶ:
ಸುವಾರ್ತಾ ಸೇವೆಗೆ ಅಗತ್ಯವಾದ ಹಣದ ಅವಶ್ಯಕತೆಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482