Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.10.2021
Share:

By Village Missionary Movement

Wednesday, 27-Oct-2021

ಧೈನಂದಿನ ಧ್ಯಾನ(Kannada) – 27.10.2021

 

ಸಂಪೂರ್ಣವಾದ ಪರೀಕ್ಷೆ

 

"ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಜೀವಧಾರೆಗಳು ಅದರೊಳಗಿಂದ ಹೊರಡುವವು." - ಜ್ಞಾನೋಕ್ತಿ 4:23

 

40 ವರ್ಷಕ್ಕಿಂತ ಮೇಲ್ಪಟ್ಟವರು ಪೂರ್ಣ ದೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆಗ ಮಾತ್ರ ನಮ್ಮ ದೇಹದಲ್ಲಿರುವ ಅಂಗಾಂಗಗಳ ಕಾರ್ಯ ನಿರ್ವಹಣೆಯನ್ನು ತಿಳಿದುಕೊಂಡು ಎಚ್ಚರಿಕೆಯಿಂದ ಮತ್ತು ಆರೋಗ್ಯವಾಗಿ ಬದುಕಲು ಸಾಧ್ಯ ಎನ್ನುತ್ತಾರೆ. ಅದರಂತೆ ಪರಿಶುದ್ಧ ಗ್ರಂಥವು ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ಪ್ರತಿಯೊಬ್ಬರು ಹೃದಯವನ್ನು ಪರೀಕ್ಷಿಸಿಕೊಂಡು ಎಚ್ಚರಿಕೆಯಿಂದ ಕಾಪಾಡಿಕೊಳ್ಳಲು ಸೂಚಿಸುತ್ತಿದೆ. ಆಗ ಮಾತ್ರವೇ ನಮ್ಮ ಕ್ರೈಸ್ತ ಜೀವನವು ಸುಖಕರವಾಗಿರುತ್ತದೆ.

 

47 ವರ್ಷದ ಆಸ್ಟ್ರಿಯನ್ ವ್ಯಕ್ತಿಯೊಬ್ಬರು ತಮ್ಮ ಸಂಗ್ರಹವಾದ ಸಂಪತ್ತು ಮತ್ತು ಐಷಾರಾಮಿ ಖರ್ಚುಗಳು ನಿಜ ಜೀವನದ ಸಂತೋಷಕ್ಕೆ ಅಡ್ಡಿಯಾಗಿದೆ ಎಂಬ ತೀರ್ಮಾನಕ್ಕೆ ಬಂದರು. ತನ್ನ 4.7 ಮಿಲಿಯನ್ ಆಸ್ತಿಯನ್ನು ಬೇರೆಯವರಿಗೆ ಅರ್ಪಿಸಿದರು. ಕಾರ್ಲಯರ್ ಬೇಟರ್ ಎಂದು ಕರೆಯಲ್ಪಡುವ ಇವರ ಲಂಡನ್ ನ ಡೈಲಿ ಪತ್ರಿಕೆಗೆ, "ನಾನು ನನಗೆ ಬೇಕಾಗದ, ಬಯಸದ ವಸ್ತುಗಳಿಗೆ ದಾಸನಾಗಿ ನಾನು ಕೆಲಸ ಮಾಡುತ್ತಿದ್ದೆ ಎಂಬ ಭಾವನೆ ನನ್ನಲ್ಲಿತ್ತು. ನನ್ನ ಆರಾಮದಾಯಕ ಜೀವನಶೈಲಿ ಎಷ್ಟು ಭಯಾನಕವಾಗಿದೆ ಆಧ್ಯಾತ್ಮಿಕವಾಗಿ ಸಂವೇದನಾರಹಿತವಾಗಿದೆ ಎಂದು ನಾನು ಅರಿತುಕೊಂಡಾಗ ನನಗೆ ಆಘಾತವಾಯಿತು" ಎಂದು ತಿಳಿಸಿದರು. ಅವರ ಸಂಪತ್ತುಗಳನ್ನು ಆಗ ಲ್ಯಾಟಿನ್ ಮತ್ತು ಅಮೆರಿಕದಲ್ಲಿರುವ ಬಡವರಿಗೆ ಸಹಾಯಮಾಡಲಾಯಿತು.

 

"ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ" ಎಂದು ಕೀರ್ತನೆ (62:10) ರಲ್ಲಿ ಓದುತ್ತೇವೆ. "ನಿಮ್ಮ ಸಂಪತ್ತು ಎಲ್ಲಿ ಇದೆಯೋ ಅಲ್ಲಿ ನಿಮ್ಮ ಹೃದಯವೂ ಇರುವದು" ಎಂದು (ಮತ್ತಾ. 6:21) ರಲ್ಲಿ ಯೇಸು ಕ್ರಿಸ್ತನು ಬೆಟ್ಟದ ಮೇಲೆ ಮಾಡಿದ ಪ್ರಸಂಗಗಳಲ್ಲಿ ಹೇಳಿದ್ದಾರೆ. ಕ್ರೈಸ್ತ ಜೀವನದಲ್ಲಿ ನಮ್ಮ ಸಂತೋಷವನ್ನು ಹಾಳುಮಾಡುವಲ್ಲಿ ಹಣದ ಆಸೆ, ವಸ್ತುಗಳ ಮೇಲಿನ ಆಸೆ ಇಂತವುಗಳು ಮುಖ್ಯ ಪಾತ್ರ ವಹಿಸುತ್ತವೆ. ಇಂತಹ ಆಸೆಗಳು ನಮ್ಮಲ್ಲಿವೆಯೇ ಎಂದು ಸತ್ಯವೇದದ ಸಹಾಯದಿಂದ ನಮ್ಮ ಹೃದಯವನ್ನು ಪರೀಕ್ಷಿಸಿ ನೋಡಬೇಕು. ವಸ್ತುಗಳ ಆಸೆಯೊಂದಿಗೆ ಸುಖಮಯವಾಗಿ ಬದುಕಿ, ಅದರಿಂದ ದೇವರ ರಾಜ್ಯವನ್ನು ಕಳೆದುಕೊಂಡವರ ಬಗ್ಗೆ ಸತ್ಯವೇದವು ಅನೇಕರನ್ನು ನಮ್ಮ ಕಣ್ಣುಗಳ ಮುಂದೆ ನಿಲ್ಲಿಸಿ ನಮ್ಮನ್ನು ಎಚ್ಚರಿಸುತ್ತಿದೆ. ಆದ್ದರಿಂದ ನಾವು ನಮ್ಮ ಹೃದಯವನ್ನು ದೇವರ ವಾಕ್ಯಗಳೊಳಗಿಟ್ಟು ಎಚ್ಚರಿಕೆಯಿಂದ ಕಾಪಾಡಿಕೊಳ್ಳೋಣ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಸುವಾರ್ತಾ ಸೇವೆಯಲ್ಲಿ ಸಮರ್ಪಿತ ಪಾರ್ಟ್ ಟೈಮ್ ಸೇವಕರು ಮತ್ತು ವಾಲೆಂಟಿಯರ್ ಗಳು ಅನೇಕರು ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al matbet matbet giriş hepsibet hepsibet giriş betnano betnano giriş betparibu betparibu giriş casibom virüsbet pashagaming kalebet perabet pashagaming virusbet marsbahis imajbet perabet perabet giriş perabet perabet giriş