By Village Missionary Movement
Sunday, 24-Oct-2021ಧೈನಂದಿನ ಧ್ಯಾನ(Kannada) – 24.10.2021 (Kids Special)
ಪಾಪವನ್ನು ಮುಚ್ಚಿಡಬೇಡ
"ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ" - 1 ಯೋಹಾನ 1:8
ಪ್ರೀತಿಯ ಪುಟಾಣಿಗಳೇ! ನೀವು ಹೇಗಿದ್ದೀರ. ಚೆನ್ನಾಗಿದ್ದೀರೆಂದು ಯೇಸಪ್ಪನ ಮೂಲಕ ನಂಬುತ್ತಿದ್ದೇನೆ. 9th to 12th ವರೆಗೆ School ಪ್ರಾರಂಭಿಸಿ ಬಿಟ್ಟಿದ್ದಾರೆ. ಆದರೆ ಇನ್ನೂ ನಿಮಗೆ ಪ್ರಾರಂಭಿಸಿಲ್ಲ ಎಂದು ಚಿಂತಿಸುತ್ತಿದ್ದೀರಾ? ನಿಮ್ಮನ್ನು Jesus ತುಂಬಾ ಪ್ರೀತಿಸುತ್ತಿರುವುದರಿಂದ, ಭದ್ರವಾಗಿ, ಸುರಕ್ಷಿತವಾಗಿ ಇಟ್ಟಿದ್ದಾರೆ. ನೀವು ಕೂಡ Prayer ಮಾಡಿ. ಕೊರೋನ ರೋಗವು ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಮತ್ತು Normal ಸ್ಥಿತಿಗೆ ಮರಳಿದೆ. ಈ ಎರಡು ವರ್ಷಗಳಲ್ಲಿ ನಿಮಗೆ ಏನೆಲ್ಲಾ ಸಿಗಲಿಲ್ಲವೋ ಅದನ್ನೆಲ್ಲಾ ಯೇಸಪ್ಪಾ ನಿಮಗೆ ಕೊಡಲಿದ್ದಾರೆ. ಖಂಡಿತವಾಗಿಯೂ Jesus ನಿಮ್ಮ ಪ್ರಾರ್ಥನೆಗೆ ಉತ್ತರ ನೀಡುತ್ತಾರೆ. ಸರಿ, ಕಥೆ ಕೇಳೋಣವಾ?
ಒಂದು ಮನೆಯಲ್ಲಿ ತಂದೆ, ತಾಯಿ ಮತ್ತು ವಿಕ್ಕಿ ಎಂಬ ಒಬ್ಬ ತಮ್ಮ ಒಟ್ಟು ಮೂರು ಜನರಿದ್ದಾರೆ. ಅವರ ಮನೆಗೆ ಒಂದು ಸೇವಕರು ಪ್ರಾರ್ಥನೆ ಮಾಡಲು ಬರುವುದು ವಾಡಿಕೆ. ಆ ದಿನ ವಿಕ್ಕಿಯ ಮನೆಯಲ್ಲಿ Prayer ಮಾಡಲು ಬಂದವರು ಏನನ್ನೋ ಹುಡುಕುತ್ತಿದ್ದರು. ‘‘ಅಯ್ಯೋ, ಬ್ಯಾಗನ್ನು, ಛತ್ರಿಯನ್ನು ಪಕ್ಕದ ಮನೆಯಲ್ಲಿ ಪ್ರಾರ್ಥಿಸಿಬಿಟ್ಟು ಅಲ್ಲೇ ಬಿಟ್ಟು ಬಂದೆನೆ. ಸರಿ ವಿಕ್ಕಿ, ನಾಲ್ಕು ಮನೆ ದಾಟಿ ಜೆಬಾ Aunty ಮನೆಯಲ್ಲೇ ಇರಬೇಕು,, ಅದನ್ನು ತೆಗೆದುಕೊಂಡು ಬರ್ತೀಯಾಪ್ಪ" ಎಂದು ಕೇಳಿದರು. ತಕ್ಷಣ ವಿಕ್ಕಿ ಹೇಳಿದ, “Ok Pastor. ನಾನು ಈಗಲೇ ಹೋಗಿ ಅದನ್ನು ತೆಗೆದುಕೊಂಡು ಬರುತ್ತೇನೆ" ಎಂದು ” ವೇಗವಾಗಿ ಓಡಿದನು. ಬ್ಯಾಗನ್ನು, ಛತ್ರಿಯನ್ನು ತೆಗೆದುಕೊಂಡನು ವಿಕ್ಕಿ. ಛತ್ರಿಯನ್ನು ತನ್ನ ಭುಜದ ಮೇಲೆ ಇಟ್ಟುಕೊಂಡು, ಬ್ಯಾಗನ್ನು ಅದರ ಹಿಡಿಕೆಯ ಮೇಲೆ ತಗುಲಿಸಿಕೊಂಡು ಟೊಂಗ್, ಟೊಂಗ್ ಎಂದು ಆಡಿಸಿಕೊಂಡೇ ಬಂದನು. ಸ್ವಲ್ಪ ಹೊತ್ತಿನಲ್ಲಿ ಛತ್ರಿಯ ಹಿಡಿಕೆ ಒಡೆದು ಹೋಯಿತು, ಬ್ಯಾಗ್ ಕೆಳಗೆ ಬಿದ್ದು ಕೊಳೆಯಾಯಿತು. ಭಯದಿಂದ ಹಿಂದೆ ಬಾಗಿಲಿಂದ ಬಂದು ಅಪ್ಪ ಅಮ್ಮನಿಗೆ ಹೇಳುತ್ತಾ ಅಳುತ್ತಾನೆ.
“ಸರಿ, ವಿಕ್ಕಿ ಅಳಬೇಡ! ನಾನು ಹೋಗಿ Pastor ಗೆ ಹೇಳುತ್ತೇನೆ. ನೀನು ಹೆದರಬೇಡ” ಎಂದು ತಂದೆ ಹೇಳಿದರು. "Sorry Pastor ವಿಕ್ಕಿ ತಪ್ಪು ಮಾಡಿಬಿಟ್ಟ" ಎಂದು ಅಪ್ಪ ನಡೆದದ್ದನ್ನು ಹೇಳಿದರು. ಈ ವಿಷಯವನ್ನು ಕೇಳಿದ Pastor, "ಇದರಲ್ಲೇನಿದೆ ಪರವಾಗಿಲ್ಲ, ವಿಕ್ಕಿ, ಇಲ್ಲಿ ಬಾ" ಎಂದು ಹೇಳಿ ಪಕ್ಕದಲ್ಲಿ ಕೂರಿಸಿಕೊಂಡು ಯೇಸಪ್ಪನ ಕ್ಷಮಾಪಣೆಯ ಬಗ್ಗೆ ಹೇಳಿಕೊಟ್ಟರು. "ನೀನು ಮಾಡಿದ ತಪ್ಪಿನ ಬಗ್ಗೆ ನಿಮ್ಮ ಪೋಷಕರಿಗೆ ಧೈರ್ಯವಾಗಿ ಹೇಳಿದೆಯಲ್ಲಾ?" ಹೀಗೇ ಇರಬೇಕು. ಅಪ್ಪ ನಿನಗಾಗಿ ನನ್ನ ಬಳಿ ಕೇಳಿಕೊಂಡರಲ್ಲಾ. ಇದೇ ರೀತಿಯಲ್ಲಿ, Jesus ತಂದೆಯ ಬಳಿ ನಮಗಾಗಿ ಬೇಡಿಕೊಳ್ಳುತ್ತಲೇ ಇದ್ದಾರೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳನ್ನು ಮನಃಪೂರ್ವಕವಾಗಿ ಯೇಸಪ್ಪನ ಬಳಿ ಒಪ್ಪಿಕೊಳ್ಳಬೇಕು. ನಮ್ಮ ಪಾಪಗಳನ್ನು ಕ್ಷಮಿಸಿ ಒಳ್ಳೆಯ ಮಕ್ಕಳಾಗಿ ಬದುಕಲು ಯೇಸಪ್ಪ ನಮಗೆ ಸಹಾಯ ಮಾಡುತ್ತಾರೆ. ನಾವು ಪರಲೋಕಕ್ಕೆ ಹೋಗಲು ಮಾರ್ಗದರ್ಶಿ Jesus ಮಾತ್ರವೇ ವಿಕ್ಕಿ" ಎಂದು Pastor ಹೇಳಿದ ಕೂಡಲೇ, ವಿಕ್ಕಿ ವೇಗವಾಗಿ ತಲೆ ಅಲ್ಲಾಡಿಸಿದ. ನಂತರ ಕುಟುಂಬ ಸಮೇತವಾಗಿ ಪ್ರಾರ್ಥಿಸಿದರು. "ನಮ್ಮ ಪಾಪಗಳನ್ನು ಕ್ಷಮಿಸಿ ಪರಲೋಕದಲ್ಲಿ ನಮ್ಮನ್ನು ಸೇರಿಸಿಕೊಳ್ಳಿ ಯೇಸುವೆ ನಿಮ್ಮನ್ನು ಅನುಸರಿಸಲು ನಮಗೆ ಸಹಾಯ ಮಾಡಿ" ಎಂದು ಪ್ರಾರ್ಥಿಸಿ ತಮ್ಮನ್ನು ಸಮರ್ಪಿಸಿಕೊಂಡರು.
ಮುದ್ದು ಪುಟಾಣಿಗಳೇ! ಈ ವಿಕ್ಕಿಯ ಹಾಗೆ ನನೀವು ಕೂಡ ಮಾಡಿದ ತಪ್ಪನ್ನು ಮುಚ್ಚಿಡದೇ ಯಥಾರ್ಥವಾಗಿ ಒಪ್ಪಿಕೊಳ್ಳಬೇಕು. ನೀವು ಪಶ್ಚಾತ್ತಾಪಪಟ್ಟು ಕ್ಷಮೆ ಕೇಳಿದರೆ, ಯೇಸಪ್ಪ ಮನಃಪೂರ್ವಕವಾಗಿ ನಿಮ್ಮನ್ನು ಕ್ಷಮಿಸಿ ಆತನ ಮಗುವಾಗಿ ಮಾರ್ಪಡಿಸುತ್ತಾರೆ. ಯೇಸುಕ್ರಿಸ್ತನ ಬಳಿ ಬರಲು ಹಿಂಜರಿಯಬಾರದು. Ok
- Sis. ದೆಬೋರಾ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482