By Village Missionary Movement
Friday, 22-Oct-2021ಧೈನಂದಿನ ಧ್ಯಾನ(Kannada) – 23.10.2021
ಎಚ್ಚರಿಕೆಯ ಸಂದೇಶ
"ತನ್ನ ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು ತನ್ನ ಗೂಡನ್ನು ಬಿಟ್ಟು ಅಲೆಯುವ ಪಕ್ಷಿ ಯಂತೆ ಇದ್ದಾನೆ" - ಜ್ಞಾನೋಕ್ತಿ 27: 8
2008-2012 ನೇ ವರ್ಷದವರೆಗೆ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಆಗಿದ್ದವರು ಚಾಂದ್. ಇವರ ಬೌಲಿಂಗ್ ಸಾಮರ್ಥ್ಯವು ಭಾರತ ತಂಡಕ್ಕೆ ದೊಡ್ಡ ಶಕ್ತಿಯಾಗಿತ್ತು ಎಂದು ಹೇಳಬಹುದು. ಆದರೆ 2012 ರಲ್ಲಿ IPL ಪಂದ್ಯದ ವೇಳೆ ಅವರು Match Fixing (ಮ್ಯಾಚ್ ಫಿಕ್ಸಿಂಗ್) ನಲ್ಲಿ ಭಾಗಿಯಾಗಿದ್ದರು ಎಂದು ಇವರ ಮೇಲೆ ವರದಿಯಾಗಿತ್ತು. ಆ ಆರೋಪ ಸಾಬೀತಾದ ನಂತರ ಭಾರತೀಯ ಕ್ರಿಕೆಟ್ ಮಂಡಳಿಯು ಆತನನ್ನು ಜೀವನಪರ್ಯಂತ ಕ್ರಿಕೆಟ್ ಆಡಬಾರದೆಂದು ನಿಷೇಧಿಸಿತು. ಅಂದಿನಿಂದ ಇಂದಿನವರೆಗೂ ಅವರು ಸಮಯ ಕಳೆಯುವ ಕಾರ್ಯಕ್ರಮಗಳಲ್ಲಿ ನಟಿಸುವುದು, ಕೆಲವು ಸಿನಿಮಾಗಳಲ್ಲಿ ನಟಿಸುವುದು, ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಹೀಗೆ ಅಲೆದಾಡುತ್ತಿದ್ದಾರೆ. ಭಾರತೀಯ ತಂಡದ ಸ್ಟಾರ್ ಆಟಗಾರನಾಗಬೇಕಿದ್ದ ವ್ಯಕ್ತಿ ತನ್ನ ಸ್ಥಾನವನ್ನು ತೊರೆಯುತ್ತಿರುವುದು ಕಂಡುಬರುತ್ತಿದೆ. ಇದು ನಮಗೊಂದು ಎಚ್ಚರಿಕೆಯ ಪಾಠ!
ಸತ್ಯವೇದದಲ್ಲಿ 1 ಸಮುವೇಲ. 2:22-36 ರ ವರೆಗೂ ಧ್ಯಾನಿಸಿ ನೋಡುವಾಗ ಒಂದು ಕಾರ್ಯ ಸಂಭವಿಸುತ್ತದೆ. ಅದು ಏನೆಂದರೆ, ಯಾಜಕನಾಗಿದ್ದ ಏಲಿ ತನ್ನ ಸ್ಥಾನವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಒಬ್ಬ ಅನುಭವವುಳ್ಳ ಯಾಜಕನಾಗಿದ್ದರೂ ತನ್ನ ಮಕ್ಕಳನ್ನು ಶಿಸ್ತಿನಿಂದ ಬೆಳೆಸಲು ಸಾಧ್ಯವಾಗಲಿಲ್ಲ. ಆಧ್ಯಾತ್ಮಿಕ ಅನುಭವವಿಲ್ಲ, ಕರ್ತನ ಶಬ್ಧವನ್ನು ಆತನ ಚಿತ್ತವನ್ನು ತಿಳಿಯಲು ಸಾಧ್ಯವಾಗಲಿಲ್ಲ. ಏನೋ ಹೆಸರಿಗೆ ಆಲಯದಲ್ಲಿ ಯಾಜಕನಾಗಿದ್ದೇನೆ ಎಂಬ ಪರಿಸ್ಥಿತಿ. ಆಗ ದೇವರ ಮನುಷ್ಯನೊಬ್ಬ ಬಂದು ಏಲಿಗೆ ಎಚ್ಚರಿಕೆ ನೀಡುತ್ತಾರೆ. ಏಲಿಯ ಸ್ಥಾನವು ಕೊನೆಗೊಳ್ಳುತ್ತಿದೆ. ದೇವರು ಏಲಿಯನ್ನು ತಳ್ಳಿಬಿಡಲು ನಿರ್ಧರಿಸಿದರು. ಇದು ದುಃಖದ ಸಂಗತಿ. ದೇವರು ಬೇರೊಬ್ಬನನ್ನು ಯಾಜಕನನ್ನಾಗಿ ಮಾಡಲು ಸಿದ್ಧವಾಗಿದ್ದಾರೆ. ಏಲಿಯ ಪರಿಸ್ಥಿತಿಯನ್ನು ಸ್ವಲ್ಪ ಯೋಚಿಸಿ ನೋಡಿರಿ. ಗೂಡು ಬಿಟ್ಟು ಅಲೆದಾಡುವ ಒಂದು ಪಕ್ಷಿಯ ಪರಿಸ್ಥಿತಿ.
ಪ್ರಿಯರೇ! ಈ ಕೊರೋನ ದಿನಗಳಲ್ಲಿ ಕಂಡುಬರುವ ಪರಿಸ್ಥಿತಿಯನ್ನು ನೋಡಿ ಅನೇಕ ಸೇವಕರು ತಮ್ಮ ಸ್ಥಾನವನ್ನು ತೊರೆದಿದ್ದಾರೆ. ಏನು ಮಾಡಬೇಕೆಂದು ತಿಳಿಯದೆ ಅಲೆದಾಡುತ್ತಿದ್ದಾರೆ. ಸತ್ಯವೇದವು ಹೇಳುವ ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಗೂಡು ಬಿಟ್ಟು ಅಲೆದಾಡುವ ಪಕ್ಷಿಗೆ ರಕ್ಷಣೆಯೇ ಇಲ್ಲ! ಹಾಗೆಯೇ ತನ್ನ ಸ್ಥಾನವನ್ನು ಬಿಟ್ಟು ಅಲೆಯುವ ಮನುಷ್ಯನು! ನೀವು ಉದ್ಯೋಗ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ನಿಮ್ಮ ಸ್ಥಾನದಿಂದ ನಿಮ್ಮನ್ನು ಹೊರಹಾಕಲು ಜೂಜು, ಲಂಚ, ಪಾಪ ಮತ್ತು ಅತೃಪ್ತಿಯ ಭಾವನೆ ಬರಬಹುದು. ಜಾಗರೂಕರಾಗಿರಿ! ನಿಮ್ಮ ಸ್ಥಾನವನ್ನು ಬಿಟ್ಟು ಬಿಡಬೇಡಿರಿ!
- T. ಶಂಕರರಾಜ್
ಪ್ರಾರ್ಥನಾ ಅಂಶ:
ರಾಕ್ಲ್ಯಾಂಡ್ ಬೈಬಲ್ ಕಾಲೇಜಿನಲ್ಲಿ ಇನ್ನೂ ಅನೇಕರು ಬಂದು ಸೇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482