Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.01.2021
Share:

By Village Missionary Movement

Tuesday, 05-Jan-2021

ಧೈನಂದಿನ ಧ್ಯಾನ(Kannada) – 05.01.2021

ಸಿದ್ಧವಾ?

"...ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಕೇಳಿ, ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು..." - ಯೆಶಾಯ 6:8

ತಮಿಳುನಾಡಿನ ದಕ್ಷಿಣ ಭಾಗಕ್ಕೆ ಬಂದು ಬಲವಾಗಿ ಸೇವೆ ಮಾಡಿದವರು ಮಿಷಿನರಿ ಎಮಿ ಕಾರ್ಮಿಕೇಲ್ ಅಮ್ಮನವರು. ಆಕೆ ಭಾರತ ದೇಶಕ್ಕೆ ಬರುವುದಕ್ಕೆ ಕಾರಣ ಏನು ಗೊತ್ತಾ? ಆಕೆ ನೋಡಿದ ದರ್ಶನವೇ! ಆಕೆ ಒಂದು ವಿಶಾಲವಾದ ಎರಡು ಕಡೆಯೂ ಹಳ್ಳ ಕಾಣಲ್ಪಟ್ಟಿತು. ಇದು ಆಳವಾದ ಹಳ್ಳ ಅಲ್ಲ. ಮುಕ್ತಾಯವಿಲ್ಲದ ಪಾತಾಳ. ಹೇರಳವಾದ ಜನ ಆ  ದಾರಿಯಲ್ಲಿ ನಡೆಯುತ್ತಾ ಬಂದು ಕಾಲು ಜಾರಿ "ಅಯ್ಯೋ"ಎಂಬ ಶಬ್ದದೊಂದಿಗೆ ಬಿದ್ದದ್ದನ್ನು ಕಂಡರು. ಅವರನ್ನು ಆಸಕ್ತಿಯಿಂದ ನೋಡಿದಾಗ ಅವರು ಕಣ್ಣಿದ್ದೂ ಕುರುಡರಾಗಿ ದಾರಿಕಾಣದವರಾಗಿ ಇರುವುದನ್ನು ಕಂಡರು ಎಮಿ. ಈ ದರ್ಶನ ಕಂಡ ಕೂಡಲೇ, ದೇವರ ಶಬ್ದಕ್ಕೆ ವಿಧೇಯರಾಗಿ, ಇಗೋ ನಿನ್ನ ದಾಸಿಯು ಇದ್ದೇನೆ, ನಾನು ಬರುತ್ತೇನೆ ಎಂದು ಎಮಿ ಕಾರ್ಮಿಕೆಲ್ ತನ್ನನ್ನು ಸಮರ್ಪಿಸಿಕೊಂಡು ಮಿಷಿನರಿಯಾಗಿ ಭಾರತಕ್ಕೆ ಬಂದರು.

ಅಪೊಸ್ತಲರ ಕೃತ್ಯಗಳಲ್ಲಿ ಓದುವಾಗ ಫಿಲಿಪ್ಪನೆಂಬವನು ಸಮಾರ್ಯ ಪಟ್ಟಣದಲ್ಲಿ ಯೇಸುವನ್ನು ಪ್ರಕಟಿಸಿ, ಜನರಿಗೆ ಯೇಸುವಿನ ನಾಮದಲ್ಲಿ ಅದ್ಭುತಗಳನ್ನು ಮಾಡಿದರು. ಇದರಿಂದ ಆ  ಪಟ್ಟಣದಲ್ಲಿ ಬಹಳ ಸಂತೋಷವುಂಟಾಯಿತು. ಈ ಸಮಯದಲ್ಲಿ ಪವಿತ್ರಾತ್ಮನು ನೀನು ಅರಣ್ಯಕ್ಕೆ ಹೋಗು ಎಂದು ಹೇಳಿದರು. ಅಯ್ಯೋ, ದೇವರೇ, ಅರಣ್ಯಕ್ಕಾ? ಅಲ್ಲಿ ಯಾರು ಇರುತ್ತಾರೆ? ನನ್ನ ನಿಮಿತ್ತ ಬಹಳ ಸಂತೋಷ ಉಂಟಾದರೆ ಈ ಪಟ್ಟಣದಲ್ಲಿ ಸೇವೆ ಮಾಡುತ್ತೇನೆ ಎಂದೆಲ್ಲಾ ಯೋನನ ಹಾಗೆ ಹೇಳದೆ ಕೂಡಲೇ ವಿಧೇಯನಾಗಿ ಆ ಬತ್ತಿಹೋದ ಭಾಗಕ್ಕೆ ಹೋದರು. ಅಲ್ಲಿ ಐತಿಯೋಪ್ಯ ದೇಶದ ಮಂತ್ರಿಗೆ ಶುಭ ಸಂದೇಶವನ್ನು ಪ್ರಕಟಿಸಿದ್ದರಿಂದ, ಆ ಮಂತ್ರಿಯ ಮೂಲಕ  ಐತಿಯೋಪ್ಯ ದೇಶಕ್ಕೆ ಸುವಾರ್ತೆ ಹೊರಟಿತು. ನಂತರ ಫಿಲಿಪ್ಪನು ಅಜೋತಿನಲ್ಲಿ  ಕಾಣಲ್ಪಟ್ಟು ಕೈಸರೆಯಾಗೆ ಬರುವವರೆಗೂ ಶುಭಸಂದೇಶ ಪ್ರಕಟಿಸುತ್ತಲೇ ಬಂದರು.

ದೇವರ ಮಕ್ಕಳೇ! ಕೂಡಲೇ ವಿಧೇಯರಾಗುವುದಕ್ಕೂ ಅಲಸ್ಯವಾಗಿ  ವಿಧೇಯರಾಗುವುದಕ್ಕೂ ವ್ಯತ್ಯಾಸವಿದೆ. ಎಮಿ ಕಾರ್ಮಿಕೆಲ್ ಅಮ್ಮನವರು ಸಮರ್ಪಿಸಿಕೊಂಡು ತಮಿಳುನಾಡಿಗೆ ಬಂದದ್ದರಿಂದ ಅನೇಕ ಸ್ತ್ರೀಯರು ಮಕ್ಕಳು ಕಾಪಾಡಲ್ಪಟ್ಟರು. ಫಿಲಿಪ್ಪನು ತನ್ನನ್ನು ಬತ್ತಿಹೋದ ಕಷ್ಟಕ್ಕೆ ಬಿಟ್ಟುಕೊಟ್ಟರು.ನಿಮ್ಮಿಂದ ನಿಮ್ಮ ಬಂಧುಗಳು, ಸ್ನೇಹಿತರು, ಪಕ್ಕದ ಮನೆಯವರು, ನಿಮ್ಮ ಗ್ರಾಮಸ್ಥರು ನರಕದಿಂದ ತಪ್ಪಿಸಲ್ಪಟ್ಟರಾ? ನೀವು ಬೈಬಲ್ ಓದುತ್ತಿದ್ದೀರ ಎಂದು ಅವರಿಗೆ ಗೊತ್ತು ಆದರೆ ನಿಮ್ಮ ಬೈಬಲ್ ನ ಕೇಂದ್ರ ಬಿಂದು ಯೇಸು ಕ್ರಿಸ್ತನೆಂದು ಅವರಿಗೆ ಗೊತ್ತಿಲ್ಲ. ನನಗೆ ಕರೆಯುವಿಕೆ ಏನು ಇಲ್ಲ ಎಂದು ಹೇಳುವುದಾದರೆ ಮತ್ತಾಯನು ಬರೆದ ಸುವಾರ್ತೆ 28.18-20 ರ ಮೂಲಕ ಎಲ್ಲರಿಗೂ ಕರೆಯುವಿಕೆ ಇದೆ. ನೀವು ಲೋಕದ ಕಟ್ಟ ಕಡೆಯ ವರೆಗೆ ಹೋಗಿ ಸುವಾರ್ತೆ ಸಾರಿ ಶಿಷ್ಯರನ್ನು ಸಿದ್ದ ಮಾಡಿರಿ ಎಂಬ ಕರೆಯುವಿಕೆಗೆ ವಿಧೇಯರಾಗಿರಿ. ನಿಮ್ಮ ಮೂಲಕ ಅನೇಕರು ಬೆಳಕಿನೊಳಗೆ ಪ್ರವೇಶಿಸಲಿ. ದೇವರ ಯೋಜನೆ ನೆರವೇರಲಿ. ಜನರ ಮಧ್ಯದಲ್ಲಿ ನಿತ್ಯ ಸಂತೋಷವುಂಟಾಗಲಿ.
-    Mrs. ಸೂಸನ್ನಾ ಮ್ಯಾಥ್ಯೂ.

ಪ್ರಾರ್ಥನಾ ಅಂಶ:-
ಹೊಸದಾಗಿ ಈ ದಿನಗಳಲ್ಲಿ ನಮ್ಮ ದೈನಂದಿನ ಧ್ಯಾನ ಸಂದೇಶವನ್ನು ಓದುತ್ತಿರುವ ವ್ಯಕ್ತಿಗಳು ದೇವರ ಹಸ್ತದಲ್ಲಿ  ಒಂದು ಪಾತ್ರೆಯಾಗೆ ಉಪಯೋಗಿಸಲ್ಪಡುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş kralbet betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel