Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.10.2021
Share:

By Village Missionary Movement

Tuesday, 19-Oct-2021

ಧೈನಂದಿನ ಧ್ಯಾನ(Kannada) – 20.10.2021

 

ಅನುಕೂಲವಾ, ಪ್ರತಿಕೂಲವಾ?

 

 "...ನೀತಿವಂತರ ಬೇರು ಕದಲುವದಿಲ್ಲ” - ಜ್ಞಾನೋಕ್ತಿ 12: 3

 

ಸತ್ಯವೇದದಲ್ಲಿ ದೇವರು ನೀತಿವಂತರನ್ನು ಖರ್ಜೂರದ ಮರಕ್ಕೂ ಲೆಬನೋನಿನ ದೇವದಾರು ಮರಕ್ಕೂ ಹೋಲಿಸಿ ಮಾತಾಡುವುದನ್ನು ಓದುತ್ತೇವೆ. ಖರ್ಜೂರದ ಮರವು ತುಂಬಾ ಬಿಸಿಯಾದ ಸ್ಥಳಗಳಲ್ಲಿ ಬೆಳೆಯುತ್ತದೆ. ಅದಕ್ಕೆ ಯಾರೂ ಕೂಡ ನೀರು ಹಾಕುವುದಿಲ್ಲ, ಪೋಷಣೆಯೂ ಮಾಡುವುದಿಲ್ಲ. ಆದಾಗ್ಯೂ, ತೀವ್ರ ಬರಗಾಲದಲ್ಲಿಯೂ ಸಹ, ಖರ್ಜೂರದ ಮರವು ಒಣಗದೇ ಬೆಳೆಯುತ್ತದೆ ಮತ್ತು ಅದರ ಎಲ್ಲಾ ಭಾಗಗಳು ಪ್ರಯೋಜನವಾಗಿರುತ್ತವೆ. ಹಾಗೆಯೇ ಲೆಬನೋನಿನಲ್ಲಿರುವ ದೇವದಾರು ಮರದ ಬಗ್ಗೆಯೂ ಕೀರ್ತ.92:12 ರಲ್ಲಿ ಒಂದು ವಿಶೇಷವಾದ ಗುಣಲಕ್ಷಣದೊಂದಿಗೆ ಹೇಳಲ್ಪಟ್ಟಿದೆ. ಲೆಬನೋನ್ ಎಂಬುದು ಬಿಳಿಯ ಹಿಮ ತುಂಬಿರುವ ಭಾಗ. ಯಾವುದೇ ಸಸ್ಯವು ಹಿಮದಲ್ಲಿ ಬೆಳೆಯುವ ಸಾಧ್ಯತೆಯೇ ಇಲ್ಲ. ಆದರೆ ಅಲ್ಲಿ ದೇವದಾರು ಮರವು ಸುಮಾರು 160 ಅಡಿಗಳಷ್ಟು ಬೆಳೆಯುತ್ತದೆ. ಇದರ ಬೇರುಗಳು ಸುಮಾರು 180 ಅಡಿ ಆಳದವರೆಗೂ ಹೋಗಿ ತುಂಬಾ ಚೆನ್ನಾಗಿ ಬೆಳೆದು ನಿಲ್ಲುತ್ತದೆ. ವಿಪರೀತವಾದ ಶೀತವನ್ನು ಸಹಿಸಿಕೊಂಡು ಈ ಮರ ಬೆಳೆಯುತ್ತದೆ.

 

ಇದೇ ರೀತಿ ಸತ್ಯವೇದದಲ್ಲಿ ರೂತ್ ಮತ್ತು ಒರ್ಫಾ ಇವರಿಬ್ಬರನ್ನೂ ನೋಡುವಾಗ ಇವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರೂ ಮೋವಾಬ್ ದೇಶದಿಂದ ಹಿಂತಿರುಗಿ ಬರುವ ಮಾರ್ಗದಲ್ಲಿ ನೊವೊಮಿ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಾಳೆ. ತನ್ನ ಪ್ರತಿಕೂಲ ವಾದ ಪರಿಸ್ಥಿತಿಯನ್ನು ಅರಿತುಕೊಂಡ ಒರ್ಫಾ ತನ್ನ ಅತ್ತೆಗೆ ಮುತ್ತಿಟ್ಟು ತನ್ನ ಸ್ವಂತ ದೇಶವಾದ ಮೋವಾಬ್ ಗೆ ಹಿಂತಿರುಗುತ್ತಾಳೆ. ಆದರೆ ರೂತಳು ಆ ಕಷ್ಟದ ಪರಿಸ್ಥಿತಿಯಲ್ಲೂ, ತನ್ನ ವಯಸ್ಸಾದ ಅತ್ತೆಯನ್ನು ನಂಬಿ, ಯೌವನಸ್ಥಳಾಗಿ ತನಗೆ ತಿಳಿಯದ ಆ ದೇಶಕ್ಕೆ ಅತ್ತೆಯ ಹಿಂದೆ ಹೋಗುತ್ತಾಳೆ. ತನ್ನ ಅತ್ತೆಯ ಬಳಿ, "ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. ಮರಣವಲ್ಲದೇ ಬೇರೆ ಯಾವುದೂ ನಮ್ಮನ್ನು ಅಗಲಿಸುವುದಿಲ್ಲ" ಎಂದು ಹೇಳಿ ಬಿಡದೇ ಹಿಡಿದುಕೊಂಡಳು. ಅವಳು ಅನ್ಯದೇಶದವಳಾಗಿದ್ದರೂ ಅವಳ ಬೇರನ್ನೂ ದೇವರು ಚಿಗುರುವಂತೆ ಮಾಡಿದರು. ಮತ್ತಾಯ. 1: 5 ರಲ್ಲಿ, ದಾವೀದನ ಬೇರು ಇಸ್ರಾಯೇಲ್ಯರ ಅರಸನಾದ ಯೇಸು ಕ್ರಿಸ್ತನ ವಂಶಾವಳಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಷಯನ ಬುಡದಿಂದ ಒಂದು ಮೊಳಕೆಯೊಡೆದು, ಅದರ ಬೇರುಗಳಿಂದ ಒಂದು ಮರವು ಬೆಳೆದು ಚಿಗುರಿಸುತ್ತದೆ ಎಂಬ ಮಾತು ಎಷ್ಟು ನಿಜ!

 

ಹೌದು ದೇವರ ಮಕ್ಕಳೇ! ನೀತಿವಂತನ ಬೇರು ಕದಲುವುದಿಲ್ಲ. ಅವನು ಬೇರೂರಿ ನೆಲೆಗೊಳ್ಳುತ್ತಾನೆ. ಕಠಿಣವಾದ ಪರಿಸ್ಥಿತಿಯೋ, ಕಠಿಣವಾದ ಉಪದ್ರವವೋ ಯಾವುದಾಗಿದ್ದರೂ, ಪರಿಸ್ಥಿತಿಯು ಅನುಕೂಲವೋ ಅಥವಾ ಪ್ರತಿಕೂಲವೋ ಯಾವುದೇ ಆಗಿದ್ದರೂ ಸ್ಥಿರವಾಗಿ ನಿಂತು ಫಲ ಕೊಡುವವರಾಗಿರುತ್ತಾರೆ. ನಾವೂ ಕೂಡ ನೀತಿವಂತರಾಗಿದ್ದು ಈ ಲೋಕದಲ್ಲಿ ಜೀವಿಸೋಣ.

- Sis. ಮಂಜುಳಾ

 

ಪ್ರಾರ್ಥನಾ ಅಂಶ:

"ಕತ್ತೆಗಳ ಮಾರ್ಗದರ್ಶಿ" ಎಂಬ ಪತ್ರಿಕೆಯನ್ನು ಓದುವಂತಹ ಸೇವಕರು ದೇವರಿಗಾಗಿ ಅಗ್ನಿಜ್ವಾಲೆಯಾಗಿ ಹೊತ್ತಿ ಉರಿಯುವಂತೆ ದೇವರನ್ನು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al