Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.10.2021
Share:

By Village Missionary Movement

Tuesday, 19-Oct-2021

ಧೈನಂದಿನ ಧ್ಯಾನ(Kannada) – 19.10.2021

 

ಕೆರೆಯಲ್ಲಿ ಬುಗ್ಗೆಗಳು

 

"ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ." - ಜ್ಞಾನೋಕ್ತಿಗಳು 3:11

 

ಒಬ್ಬ ಚಿಕ್ಕ ಹುಡುಗ ಆಟವಾಡುವ ದೋಣಿಯೊಂದನ್ನು ಸಣ್ಣ ಕೆರೆಯೊಳಗೆ ಬಿಟ್ಟು ಆಟವಾಡುತ್ತಿದ್ದನು. ಅವನು ದಡದಿಂದ ಆಟವಾಡುತ್ತಿದ್ದಾಗ, ಈ ದೋಣಿ ಮೆಲ್ಲ ಮೆಲ್ಲನೆ ಅವನ ಕೈಗೆ ಎಟುಕದಷ್ಟು ದೂರ ಹೊರಟುಹೋಯಿತು. ಅಯ್ಯೋ! ನಾನು ಏನು ಮಾಡಲಿ ಎಂದು ಚಿಂತಿಸುತ್ತಿದ್ದ ಸಮಯದಲ್ಲಿ ಅವನಿಗಿಂತ ಸ್ವಲ್ಪ ದೊಡ್ಡ ಹುಡುಗ ಆಕಸ್ಮಿಕವಾಗಿ ಅಲ್ಲಿಗೆ ಬಂದನು. ತಕ್ಷಣ ಅವನ ಬಳಿ, “ಅಣ್ಣಾ ನನ್ನ ದೋಣಿ ಬಹಳ ದೂರ ಹೊರಟು ಹೋಯಿತು. ದಯವಿಟ್ಟು ಅದನ್ನು ಹೇಗಾದರೂ ನನಗೆ ಎತ್ತಿ ಕೊಡಿ" ಎಂದು ಕೇಳಿದನು. ತಕ್ಷಣವೇ ಆ ಹುಡುಗ ಕೂಡ ಒಂದು ಮಾತೂ ಹೇಳದೆ ದಡದಲ್ಲಿದ್ದ ಕೆಲವು ಕಲ್ಲುಗಳನ್ನು ಎತ್ತಿಕೊಂಡು ದೋಣಿಯ ಮೇಲೆ ಎಸೆಯಲು ಆರಂಭಿಸಿದನು.

 

ಆ ಚಿಕ್ಕ ಹುಡುಗನಿಗೆ ನಾನು ಸಹಾಯ ಕೇಳಿದರೆ ಈ ಅಣ್ಣ ಅದರ ಮೇಲೆ ಕಲ್ಲು ಹಾಕುತ್ತಿದ್ದಾನೆ ಎಂದು ಬೇಸರ ಉಂಟಾಯಿತು. ಆದರೆ ಅವನು ಸ್ವಲ್ಪ ದೃಷ್ಟಿಸಿ ನೋಡಿದಾಗ, ಆ ಕಲ್ಲುಗಳು ದೋಣಿಯ ಮೇಲೆ ಬೀಳದೆ ಅದರ ಪಕ್ಕದಲ್ಲಿ ಬಿದ್ದು ಸಣ್ಣ ಸಣ್ಣ ಬುಗ್ಗೆಗಳನ್ನು ಎಬ್ಬಿಸಿ, ಆ ದೋಣಿಯನ್ನು ತೀರಕ್ಕೆ ತಳ್ಳುತ್ತಿತ್ತು. ಪ್ರತಿಯೊಂದು ಕಲ್ಲನ್ನೂ ಸರಿಯಾದ ಸ್ಥಳದಲ್ಲಿ ಎಸೆಯುತ್ತಿದ್ದದರಿಂದ ಬಹು ಶೀಘ್ರವಾಗಿ ಅದರಿಂದ ಏರ್ಪಟ್ಟ ಬುಗ್ಗೆಗಳು (bubbles) ಆ ದೋಣಿಯನ್ನು ದಡಕ್ಕೆ ಸೇರಿಸಿತು ಮತ್ತು ಹುಡುಗನ ಕೈಗೆ ಸಿಗುವಂತೆ ಮಾಡಿತು.

 

ಕೆಲವೊಮ್ಮೆ ಕರ್ತನು ನಮ್ಮ ಜೀವನದಲ್ಲಿ ಶಿಕ್ಷೆಯನ್ನು ಅನುಮತಿಸುತ್ತಿದ್ದಾರೆ ಎಂದು ನಾವು ನೆನೆಸಿ ಚಿಂತಿಸುತ್ತೇವೆ. ನಾವು ಯಾವಾಗಲೂ ಆತನನ್ನು ಬಿಟ್ಟು ದೂರ ಹೋಗುತ್ತಲೇ ಇರುವುದರಿಂದ ಕರ್ತನು ನಮ್ಮನ್ನು ಅವರ ಬಳಿ ಸೇರಿಸುವದಕ್ಕಾಗಿ ನಮಗೆ ಕೆಲವು ಸಂಕಟಗಳನ್ನು ಕಳುಹಿಸುತ್ತಾರೆ.

 

"ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆ ಮಾಡುತ್ತಾನೆ" ಎಂಬ ಮಾತಿಗೆ ತಕ್ಕಂತಿರುವ ಪೋಷಕರೇ ಮಗುವಿನ ತಪ್ಪನ್ನು ಗದರಿಸಿ ತಿಳುವಳಿಕೆ ಹೇಳಿ ಅದನ್ನು ಸರಿಮಾಡುವಾಗ, ನಾವು ನ್ಯಾಯತೀರ್ಪಿಗೆ ಒಳಗಾಗದೆ ಜೀವಿಸುವಂತೆ ನಮ್ಮ ದೇವಾಧಿ ದೇವರಿಗೆ ಅತ್ಯಧಿಕವಾಗಿ ತಗ್ಗಿ ನಡೆಯಬೇಕಲ್ಲವೇ? ಪೋಷಕರು ತಮಗೆ ಒಳ್ಳೇದೆಂದು ತೋಚಿದ್ದರಿಂದ ಸ್ವಲ್ಪ ಕಾಲ ಶಿಕ್ಷಿಸಿದರು. ನಮ್ಮ ದೇವರು ತನ್ನ ಪರಿಶುದ್ದತ್ವಕ್ಕೆ ನಾವು ಪಾಲುಗಾರರಾಗಬೇಕೆಂದು ನಮ್ಮ ಪ್ರಯೋಜನಕ್ಕಾಗಿಯೇ ಶಿಕ್ಷಿಸುತ್ತಾರೆ.

 

ನಮ್ಮ ಜೀವನದಲ್ಲಿ ಏರ್ಪಡುವ ಶಿಕ್ಷೆಗಳನ್ನು ಕರ್ತನು ನಮ್ಮನ್ನು ಪ್ರೀತಿಸುತ್ತಿರುವುದರಿಂದ ಮತ್ತು ನಮ್ಮನ್ನು ಇನ್ನಷ್ಟು ಆತನಿಗೆ ಹತ್ತಿರ ಸೇರಿಸುವುದಕ್ಕಾಗಿಯೇ ಅನುಮತಿಸುತ್ತಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಅದನ್ನು ಸಾಧಾರಣವಾಗಿ ಪರಿಗಣಿಸದೆ ಆ ಶಿಕ್ಷೆಯನ್ನು ಏಕೆ ಕಳುಹಿಸಿದರೆಂದು ಅರಿತುಕೊಂಡು ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಪ್ರಯೋಜನಕ್ಕಾಗಿಯು ಮತ್ತು ಅವರಿಗೆ ಹತ್ತಿರವಾಗಿ ಜೀವಿಸುವುದಕ್ಕಾಗಿಯು ಕರ್ತನು ನಮಗೆ ಅನುಮತಿಸುವ ಶಿಕ್ಷೆಗಳಿಗಾಗಿ ನಾವು ದೇವರನ್ನು ಸ್ತುತಿಸೋಣವಾ? ಇನ್ನೂ ಆತನಿಗೆ ಹತ್ತಿರವಾಗಿ ಆತನ ಬಳಿಗೆ ಹೋಗೋಣವಾ? 

- Bro. ಹನೀಶ್ ಸಾಮುವೇಲ್

 

ಪ್ರಾರ್ಥನಾ ಅಂಶ:

ಸೇವಕರಿಗಾಗಿ ಪ್ರತ್ಯೇಕವಾಗಿ ಹೊರಬಿಡುತ್ತಿರುವ "ಕತ್ತೆಗಳ ಮಾರ್ಗದರ್ಶಿ " ಎಂಬ ಪತ್ರಿಕೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al