By Village Missionary Movement
Sunday, 17-Oct-2021ಧೈನಂದಿನ ಧ್ಯಾನ(Kannada) – 18.10.2021
ಪ್ರೀತಿ ಮತ್ತು ಬೆದರಿಕೆ
"ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು; ..." - ಜ್ಞಾನೋಕ್ತಿ 29:15
ಇಂದು ಅನೇಕ ಕುಟುಂಬಗಳಲ್ಲಿ ಪೋಷಕರಿಗೆ ಉದ್ಭವಿಸುವ ಒಂದು ಪ್ರಶ್ನೆ “ಮಗುವನ್ನು ಹೊಡೆದು ಬೆಳೆಸುವುದು ಸರಿಯಾ? ತಪ್ಪಾ? ಇದರಿಂದಾಗಿ ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ಬರುತ್ತಿವೆ” ಎಂದು ಹೇಳುತ್ತಾರೆ. ಈ ಪ್ರಶ್ನೆಗೆ ಉತ್ತರವನ್ನು ಸತ್ಯವೇದದಲ್ಲಿ ಹುಡುಕುವುದೇ ಉತ್ತಮ. ಸತ್ಯವೇದವು ಏನು ಹೇಳುತ್ತಿದೆ? ಮಗು ತಪ್ಪು ಮಾಡುವಾಗ ಬೆತ್ತವನ್ನು ಬಳಸಬಹುದು. ಅದು ಅವನನ್ನು ಪಾತಾಳದಿಂದ ತಪ್ಪಿಸುತ್ತದೆ ಮತ್ತು ಜ್ಞಾನವನ್ನು ನೀಡುತ್ತದೆ ಎಂದು ಹೇಳುತ್ತಿದೆ.
ಆದರೆ ಸಣ್ಣ ಮಕ್ಕಳಿಗೆ ವಿವರ ಗೊತ್ತಾಗುವ ಮೊದಲೇ ಪೋಷಕರು ಅವರನ್ನು ಹೊಡೆಯುತ್ತಾರೆ. ಮಗು ಅಳುವುದಕ್ಕೂ ಕೂಡ ಏಟು ಬೀಳುತ್ತದೆ. ಬಹುಶಃ ಅದು ಅನಾರೋಗ್ಯದಿಂದ ಅಳಬಹುದು, ಹೆದರಿಕೆಯಿಂದ ಅಳಬಹುದು ಅಥವಾ ಯಾವುದಾದರೂ ಹುಳ ಕಚ್ಚಿದಾಗ ಅಳಬಹುದು. ಆದ್ದರಿಂದ ಚಿಕ್ಕಮಗು ಏಕೆ ಅಳುತ್ತಿದೆ ಎಂದು ತಿಳಿಯದೆ ಹೊಡೆಯಬಾರದು. ಮೂರು ವರ್ಷಗಳು ತುಂಬಿದ ಮೇಲೆಯೇ ನಾವು ಮಾಡುವುದು ತಪ್ಪು ಎಂದು ಮಕ್ಕಳಿಗೆ ಗೊತ್ತಾಗುತ್ತದೆ. ಆಗ ತಪ್ಪು ಎಂದು ತಿಳಿದೂ ಅವರು ಅದನ್ನು ಮಾಡುವಾಗ, ಮೊದಲು ಪ್ರೀತಿಯಿಂದ ಬೆದರಿಸಿ ಮಾತಾಡಬೇಕು. ಅದರಲ್ಲೂ ಅವರು ಬದಲಾಗದಿದ್ದರೆ ಆಗ ಹೊಡೆಯಬೇಕು.
ಯೌವನಪ್ರಾಯಕ್ಕೆ ಬಂದ ನಂತರ ಮಗನನ್ನೋ, ಮಗಳನ್ನೋ ಹೊಡೆಯುವುದು ಒಳ್ಳೆಯದಲ್ಲ. ಬೆದರಿಕೆಯೇ ಸಾಕು. ಹದಿಹರೆಯದವರನ್ನು ಹೊಡೆಯುವುದರಿಂದ ಬದಲಾಗುವ ಅವಕಾಶಗಳಿಲ್ಲ, ತಮಗೆ ಅವಮಾನವಾಯಿತೆಂದು ನೆನೆಸುತ್ತಾರೆ. ಇನ್ನೂ ಹೃದಯ ಕಠಿಣವಾಗಿ ಕೋಪ ಮತ್ತು ಮೂರ್ಖತನ ಹೆಚ್ಚಾಗುತ್ತದೆ. ಆದ್ದರಿಂದ ಅವರನ್ನು ಪರಿವರ್ತಿಸಲು ದೇವರನ್ನು ಪ್ರಾರ್ಥಿಸಿರಿ. ದೇವರಿಗೆ ಅಸಾಧ್ಯವಾದದ್ದು ಒಂದೂ ಇಲ್ಲ.
ವಿದೇಶಗಳಲ್ಲಿ ಮಕ್ಕಳು ಹಾಳಾಗಲು ಕಾರಣ, ಮಕ್ಕಳನ್ನು ಬೆದರಿಸಿ ಬೆಳೆಸದಿರುವುದೇ! ಸರ್ಕಾರದ ಕಾನೂನುಗಳು ಅದಕ್ಕೆ ತಕ್ಕಂತೆಯೇ ಇವೆ. ನಮ್ಮ ಭಾರತ ದೇಶದ ಸಂಸ್ಕೃತಿ ಈ ವಿಷಯದಲ್ಲಿ ಉನ್ನತವಾಗಿದೆ. ಆದರೂ ನಮ್ಮ ಖಂಡನೆ ಕುರುಡಾಗಿರಬಾರದು. ನಮ್ಮ ಪೋಷಕರು ನಮ್ಮನ್ನು ಪ್ರೀತಿಸುತ್ತಿರುವುದರಿಂದಲೇ ನಮ್ಮನ್ನು ಬೆದರಿಸುತ್ತಿದ್ದಾರೆ ಎಂಬ ನಂಬಿಕೆಯನ್ನು ನಮ್ಮ ಮಕ್ಕಳಿಂದ ಪಡೆಯಬೇಕು.
ಗಂಡ ಮಗುವಿಗೆ ಶಿಕ್ಷೆ ನೀಡುವಾಗ ಪತ್ನಿ ಮಗುವಿನ ಪರವಾಗಿ ವಾದಿಸಬಾರದು. ಒಬ್ಬರು ಶಿಕ್ಷಿಸುವ ವಿಧಾನ ಇನ್ನೊಬ್ಬರಿಗೆ ಇಷ್ಟವಾಗದಿದ್ದರೆ ಇಬ್ಬರೂ ಪ್ರತ್ಯೇಕವಾಗಿ ಇದರ ಬಗ್ಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಮಗುವಿನ ಮುಂದೆ ತಂದೆಯ ಕ್ರಮವನ್ನು ದೂಷಿಸಿದರೆ, ಯಾವ ವಿಷಯದಲ್ಲೂ ಮಗುವಿಗೆ ತಂದೆಯ ಮೇಲೆ ನಂಬಿಕೆ ಬರುವುದಿಲ್ಲ. ಒಬ್ಬರು ಶಿಕ್ಷಿಸುವಾಗ ಇನ್ನೊಬ್ಬರು ಅದನ್ನು ಶಾಂತವಾಗಿ ಒಪ್ಪಿಕೊಳ್ಳಬೇಕು. ಇದರ ಮೂಲಕ ತಾಯಿ ಮತ್ತು ತಂದೆ ಎಲ್ಲದರಲ್ಲೂ ಒಟ್ಟಾಗಿ ಕಾರ್ಯನಿರ್ವಹಿಸುವುದನ್ನು ಮಗು ಅರ್ಥಮಾಡಿಕೊಳ್ಳಲಿ. ಹೀಗೆ ಮಕ್ಕಳನ್ನು ಶಿಕ್ಷಿಸುವ ವಿಷಯದಲ್ಲಿ ಪೋಷಕರು ಎಚ್ಚರವಾಗಿರುವುದಾದರೆ ಒಂದು ಉತ್ತಮವಾದ ಪೀಳಿಗೆಯನ್ನು ರೂಪಿಸಲು ಸಾಧ್ಯವಾಗುತ್ತದೆ.
- J. ಸಂತೋಷ್
ಪ್ರಾರ್ಥನಾ ಅಂಶ:
ಮೋಕ್ಷ ಪ್ರಯಾಣ ಎಂಬ ಮಾಸ ಪತ್ರಿಕೆಯ ಸಂದೇಶಗಳನ್ನು ಬರೆಯುವ ವ್ಯಕ್ತಿಗಳನ್ನು ದೇವರು ವಿಶೇಷವಾದ ಜ್ಞಾನದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482