Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.10.2021
Share:

By Village Missionary Movement

Saturday, 16-Oct-2021

ಧೈನಂದಿನ ಧ್ಯಾನ(Kannada) – 16.10.2021

 

ಭಯ ಎಂಬ ಉರುಲು

 

"ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು." - ಜ್ಞಾನೋಕ್ತಿ 29:25

 

ಇದೊಂದು ತಮಾಷೆಯ ಕಥೆ. ಒಂದು ಹೆಂಡತಿ ತನ್ನ ಗಂಡನನ್ನು ಜನರ ದೊಡ್ಡ ಗುಂಪಿದ್ದ ಮೃಗಾಲಯದಲ್ಲಿ ಬೆನ್ನಟ್ಟುತ್ತಿದ್ದಳು. ಕೈಯಲ್ಲಿ ಕೊಡೆ ಮತ್ತು ಬಾಯಿಯಲ್ಲಿ ಭಯಾನಕ ಪದಗಳೊಂದಿಗೆ ಅವನನ್ನು ಬೆನ್ನಟ್ಟಿದಳು. ಅವಳಿಗೆ ಹೆದರಿದ ಗಂಡ ಬೆವರುತ್ತಾ ಆತಂಕದಿಂದ, ಎಲ್ಲಿಗೆ ಹೋಗಬೇಕೆಂದು ತಿಳಿಯದೆ, ಸಿಂಹವಿದ್ದ ಆ ಪಂಜರಕ್ಕೆ ಬೀಗ ತಗುಲಿಸಿ ಅದಕ್ಕೆ ಬೀಗ ಹಾಕದೇ ಇರುವುದನ್ನು ನೋಡಿ, ಅದನ್ನು ತೆರೆದು ಅದರೊಳಗೆ ಜಿಗಿದನು, ಅದರ ನಂತರ ಪಂಜರದ ಬಾಗಿಲಿಗೆ ಬೀಗ ಹಾಕಿದರು. ಅದನ್ನು ಕಂಡು ಹೆದರಿದ ಸಿಂಹವು ಪಂಜರದ ಕಂಬಿಗಳಿಗೆ ಒರಗಿಕೊಂಡು ಅವರನ್ನು ನೋಡಿತು. ಅಷ್ಟರೊಳಗೆ ಅಲ್ಲಿಗೆ ಬಂದು, ಆತನನ್ನು ಸಿಂಹದ ಗುಹೆಯಲ್ಲಿ ನೋಡಿದ ಅವರ ಹೆಂಡತಿ ಬಹಳ ಕೋಪದಿಂದ ಹೀಗೆ ಹೇಳಿದಳು, "ಯೋ, ಹೇಡಿ! ದಿಲ್ ಇದ್ದರೆ ಹೊರಗೆ ಬಾರಯ್ಯ! " ಎಂದು ಕೂಗಾಡಿದಳು. ಸಿಂಹದ ಗುಹೆಯಲ್ಲಿರುವ ಆ ಮನುಷ್ಯನೇ ಹೇಡಿಯಾಗಿದ್ದರೆ, ಅವಳು ಸಿಂಹಕ್ಕಿಂತ ಎಷ್ಟು ಭಯಂಕರವಾಗಿರುತ್ತಾಳೆ!

 

ಇಸ್ರಾಯೇಲ್ಯರು ಯಾರಿಗೆ ಭಯಪಡಬೇಕೆಂಬ ಗೊಂದಲದಲ್ಲಿದ್ದರು. ಕರ್ತನು ಅವರಿಗೆ ವಾಗ್ದಾನ ಮಾಡಿದ ಕಾನಾನ್ ದೇಶವನ್ನು ಸಂಚರಿಸಿ ನೋಡಲು ಹೋಗಿದ್ದ ಹನ್ನೆರಡು ಜನರಲ್ಲಿ ಹತ್ತು ಜನ ಹಾಗೆಯೇ ಆ ದೇಶದ ಉನ್ನತಪುರುಷರ ಮುಂದೆ ನಾವು ವಿುಡತೆಗಳಂತೆ ಇದ್ದೇವೆಂದು ಹೇಳಿದರು. ಅವರು ನೋಡಿದ ಮನುಷ್ಯರ ಬಗ್ಗೆ ಅವರಿಗೆ ಅಷ್ಟೊಂದು ಭಯವಿತ್ತು. ರೂಪದಲ್ಲಿ ಅವರು ಬಹಳ ದೊಡ್ಡವರಾಗಿ ಕಾಣುತ್ತಿದ್ದದರಿಂದ ತಮ್ಮಿಂದ ಅವರನ್ನು ಜಯಿಸಲು ಸಾಧ್ಯವಿಲ್ಲ ಎಂದು ತಾವಾಗಿಯೇ ತೀರ್ಮಾನಿಸಿಕೊಂಡರು. ಅವರ ಬಲ ಕರ್ತನು ಎಂಬುದನ್ನು ಮರೆತು ಹೋದರು. ಅವರ ಅವಿಶ್ವಾಸದ ಪರಿಣಾಮವಾಗಿ ಅವರು ಇಡೀ ಇಸ್ರಾಯೇಲ್ಯರನ್ನು ನಡುಗಿಸಿದ್ದು ಮಾತ್ರವಲ್ಲದೆ ಅವರ ಸಂತತಿಯೇ ಕಾನಾನ್ ದೇಶವನ್ನು ಸ್ವತಂತ್ರಿಸಿಕೊಳ್ಳಲು ಸಾಧ್ಯವಾಗದಂತೆ ಮಾಡಿದರು. ಆದರೆ ಯೆಹೋಶುವ ಮತ್ತು ಕಾಲೇಬನು ಅವರನ್ನು ಸುಲಭವಾಗಿ ಜಯಿಸಬಹುದು ಎಂದು ಹೇಳಿ ಕರ್ತನ ಮೇಲೆ ನಂಬಿಕೆಯಿಟ್ಟು ಆ ಕಾನಾನ್ ದೇಶವನ್ನು ಸ್ವಾಧೀನ ಮಾಡಿಕೊಂಡರು.

 

ಮನುಷ್ಯನಿಗೆ ಭಯಪಡುವ ಭಯವು ಉರುಲನ್ನು ತರುತ್ತದೆ. ಕರ್ತನಲ್ಲಿ ಭರವಸವಿಡುವವನು ಕ್ಷೇಮದಿಂದಿರುವನು ಎಂಬ ವಾಕ್ಯದ ಪ್ರಕಾರ ನಾವು ಮನುಷ್ಯನಿಗೆ ಹೆದರುವುದಾದರೆ ನಮಗೆ ಕರ್ತನ ಮೇಲೆ ನಂಬಿಕೆ ಇರುವುದಿಲ್ಲ. ಅವರ ವಾಗ್ದಾನಗಳು, ಅವರ ಯೋಜನೆಗಳು ಮತ್ತು ಅವರ ಶಕ್ತಿಯ ಮೇಲೆ ಭರವಸೆ ಮತ್ತು ನಂಬಿಕೆ ಇರುವುದಿಲ್ಲ. ಮನುಷ್ಯನಿಗೆ ಭಯಪಡುವ ಭಯ ಉರುಲನ್ನು ಮಾತ್ರ ತರುತ್ತದೆ. ಆದರೆ ಕರ್ತನು ಎಲ್ಲರಿಗಿಂತ ಹೆಚ್ಚಾಗಿ ಭಯಪಡತಕ್ಕವರು. ಅವರ ಚಿತ್ತವಿಲ್ಲದೆ ಏನೂ ನಡೆಯುವುದಿಲ್ಲ ಎಂಬುದನ್ನು ಮರೆತುಹೋಗುತ್ತೇವೆ. ಕರ್ತನನ್ನು ನಂಬಿದರೆ ನಾವು ಬೇರೆ ಯಾರಿಗೂ ಭಯಪಡಬೇಕಾದ ಅಗತ್ಯವಿಲ್ಲ. ಆತನೊಬ್ಬನೇ ನಂಬಿಕೆಗೆ ಪಾತ್ರನು, ಅವರನ್ನು ಮಾತ್ರವೇ ನಾವು ನಂಬಿ ವಿಧೇಯರಾಗಬೇಕು. ಆಗಲೇ ನಮ್ಮನ್ನು ಉನ್ನತವಾದ ಆಶ್ರಯದಲ್ಲಿ ಇರಿಸುತ್ತಾರೆ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಎಂಬ ಮಾಸ ಪತ್ರಿಕೆಯನ್ನು ಮುದ್ರಿಸಲು ಬೇಕಾಗಿರುವ ಆರ್ಥಿಕ ಅಗತ್ಯಗಳನ್ನು ಪೂರೈಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş holiganbet casibom bets10 extrabet royalbet süperbetin casibom giriş casibom jojobet giriş casibom milanobet piabellacasino betpas bahiscasino atlasbet betpas casinoroyal bahiscasino ngsbahis betplay holiganbet jojobet casibom holiganbet jojobet casibom vaycasino romabet