By Village Missionary Movement
Thursday, 14-Oct-2021ಧೈನಂದಿನ ಧ್ಯಾನ(Kannada) – 15.10.2021
ಯೋಸೇಫನಾ? ಸಂಸೋನನಾ?
"ನಿನ್ನ ಹೃದಯದಲ್ಲಿ ಅವಳ ಸೌಂದರ್ಯವನ್ನು ಮೋಹಿಸಬೇಡ; ಇದಲ್ಲದೆ ಅವಳ ಕಣ್ಣುರೆಪ್ಪೆಗಳಿಂದ ನಿನ್ನನ್ನು ಅವಳು ವಶಮಾಡಿಕೊಳ್ಳದೆ ಇರಲಿ" - ಜ್ಞಾನೋಕ್ತಿ 6:25
ಪರಿಶುದ್ಧತೆ ಎಂಬುದು ಗಂಡು, ಹೆಣ್ಣು ಇಬ್ಬರಿಗೂ ಸಾಮಾನ್ಯವಾದದ್ದು. ಅದು ಕಣ್ಣುಗಳಿಂದಲೇ ಆರಂಭವಾಗುತ್ತದೆ. ಅದಕ್ಕಾಗಿಯೇ ಯೇಸುಕ್ರಿಸ್ತನು ಹೇಳುವಾಗ, "ಒಂದು ಸ್ತ್ರೀ ಯನ್ನು ಇಚ್ಚೆಯಿಂದ ನೋಡುವ ಯಾವನಾದರೂ ತನ್ನ ಹೃದಯದಲ್ಲಿ ಅವಳೊಂದಿಗೆ ಪಾಪ ಮಾಡಿದಂತಾಯಿತು" ಎಂದು ಹೇಳುತ್ತಾರೆ. ಇನ್ನೂ ನಮಗೆ ಚೆನ್ನಾಗಿ ಪರಿಚಯವಿರುವ ಯೋಸೇಫ, ಸಂಸೋನ ಎಂಬ ಇಬ್ಬರು ಯೌವನಸ್ಥರ ಕಣ್ಣುಗಳನ್ನು ಮಾತ್ರ Focus ಮಾಡಿ ನೋಡೋಣ.
ಯೋಸೇಫನು ಗಂಭೀರವಾದ ಸುಂದರ ರೂಪವುಳ್ಳ ಯುವಕ. ಐಗುಪ್ತಕ್ಕೆ ಗುಲಾಮನಾಗಿ ಮಾರಲ್ಪಟ್ಪ ಅವನೊಂದಿಗೆ ಕರ್ತನಿದ್ದರು. ದೇವರ ಸುಂದರವಾದ ಕಣ್ಣುಗಳು ತನ್ನನ್ನು ನೋಡುತ್ತಲೇ ಇರುವುದನ್ನು ಅವನು ತನ್ನ ಮನೋನೇತ್ರಗಳಲ್ಲಿ ಗ್ರಹಿಸಿದನು. ಅದಕ್ಕಾಗಿಯೇ ಹೆತ್ತವರು ಮತ್ತು ಕುಟುಂಬದವರು ಹತ್ತಿರ ಇಲ್ಲದಿದ್ದಾಗಲೂ ಕರ್ತನಿಗೆ ಭಯಪಡುವ ಭಯ ಅವನೊಳಗಿತ್ತು. ಅದುವೇ ಅವನ ಅನೇಕ ಉನ್ನತಿಗಳಿಗೆ ಮತ್ತು ಭಯಾನಕ ಪಾಪದಲ್ಲಿ ಅವನು ಬೀಳದೆ ತನ್ನನ್ನು ಕಾಪಾಡಿಕೊಳ್ಳುವುದಕ್ಕೆ ಕಾರಣವಾಯಿತು. ಹೊರಗೆ ಯಾರೂ ಕಂಡು ಹಿಡಿಯಲಾಗದ ಒಂದು ಕಾಮಾಭಿಲಾಷೆಯು ತನ್ನ ಜೀವನದ ಹಾದಿಯಲ್ಲಿ ಬಂದರೆ ಒಬ್ಬ ಯುವಕ ಏನು ಮಾಡಲು ಸಾಧ್ಯ? ಆದರೆ ಅವನೋ, "ನನ್ನನ್ನು ನೋಡುತ್ತಿರುವ ನನ್ನ ದೇವರಿಗೆ ವಿರುದ್ಧವಾಗಿ ನಾನು ಪಾಪ ಮಾಡುವುದು ಹೇಗೆ ?" ಎಂದು ಪಾಪವನ್ನು ಬಿಟ್ಟು ಓಡಿಹೋದನು.
ಸಂಸೋನನು ಫಿಲಿಷ್ಟಿಯರ ಕೈಯಿಂದ ಇಸ್ರಾಯೇಲ್ಯರನ್ನು ಬಿಡಿಸುವುದಕ್ಕಾಗಿ ದೇವರಿಂದ ಆಯ್ಕೆ ಮಾಡಲ್ಪಟ್ಟ ರಕ್ಷಕನಾಗಿದ್ದನು. ಆದರೆ ಅವನು ತಾನು ಹುಟ್ಟಿದ ಉದ್ದೇಶವನ್ನು ಮರೆತು, ತನ್ನ ಕಣ್ಣುಗಳಿಗೆ ಇಷ್ಟವಾದ ಎಲ್ಲಾ ಮಹಿಳೆಯರನ್ನು ಮೋಹಿಸಿದನು ಮತ್ತು ಮತ್ತೆ ಮತ್ತೆ ಪಾಪದಲ್ಲಿ ಬಿದ್ದನು. ಹೆತ್ತವರೊಂದಿಗೇ ಇದ್ದರೂ, ಕರ್ತನಿಗೆ ಭಯಪಡುವ ಭಯ ಅವನೊಳಗೆ ಇಲ್ಲದಿರುವುದರಿಂದ ಪರಿಶುದ್ಧತೆಯ ಬಗ್ಗೆಯೂ ಹಂಬಲವಿಲ್ಲ ಮತ್ತು ಅದರ ಪ್ರಾಮುಖ್ಯತೆಯ ಅರಿವು ಇಲ್ಲ. ಆದ್ದರಿಂದಲೇ ತನ್ನ ಶರೀರದ ಮೇಲೆ ಕಲೆ ಬೀಳುತ್ತದೆಂಬ ಚಿಂತೆಯೂ ಇರಲಿಲ್ಲ. ಅಂತ್ಯವು ಭೀಕರವಾಗಿತ್ತು.
ಯೌವನಸ್ಥರೇ! ನೀವು ಯಾರಂತೆ ಬದುಕುತ್ತಿದ್ದೀರಿ? ಯೋಸೇಫನಂತೆಯೇ? ಅಥವಾ ಸಂಸೋನನ ಹಾಗೆಯೇ? ಹೆತ್ತವರೊಂದಿಗಿದ್ದು ಅವರ ಆಲೋಚನೆಯನ್ನು ನಿರ್ಲಕ್ಷಿಸಿ, ದೇವರಿಗೆ ಭಯಪಡುವ ಭಯವಿಲ್ಲದೆ ಧೈರ್ಯವಾಗಿ ಬದುಕುತ್ತಿದ್ದೀರ? ಕಣ್ಣು ಮತ್ತು ಹೃದಯದಲ್ಲಿ ಸ್ಥಳ ಕೊಡುವ ಪಾಪಕ್ಕೆ ದೇಹವನ್ನು ನೀಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಸಂಸೋನನ ಜೀವನ ನಮಗೊಂದು ಎಚ್ಚರಿಕೆ! ಸಾಮಾಜಿಕ ಜಾಲತಾಣಗಳ ಮೂಲಕ ವಿವಾಹಿತ ಪುರುಷರು ಮತ್ತು ಮಹಿಳೆಯರು ಕೂಡ ಪಾಪದ ಚಟಕ್ಕೆ ಗುಲಾಮರಾಗಿ ಮೋಸ ಹೋಗುತ್ತಿದ್ದಾರೆ. ಆದ್ದರಿಂದಲೇ ಪಾಪವನ್ನು ಕಣ್ಣುಗಳಲ್ಲಿಯೇ ತಡೆದು ನಿಲ್ಲಿಸಿ ಬಿಡಿರಿ. ಹೃದಯದಲ್ಲಿ No Entry ಬೋರ್ಡನ್ನು ಹಾಕಿಕೊಳ್ಳಿರಿ. ಯೋಸೇಫನಂತೆ ನಿಮ್ಮನ್ನು ಪರಿಶುದ್ಧವಾಗಿ ಕಾಪಾಡಿಕೊಳ್ಳಿರಿ.
- Mrs. ಸರೋಜ ಮೋಹನ್ ದಾಸ್
ಪ್ರಾರ್ಥನಾ ಅಂಶ:
ಮಾಧ್ಯಮದಲ್ಲಿ ಆಧುನಿಕ ತಾಂತ್ರಿಕ ಅನುಭವ ಹೊಂದಿರುವ ಸೇವಕರು ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482