Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.10.2021
Share:

By Village Missionary Movement

Thursday, 14-Oct-2021

ಧೈನಂದಿನ ಧ್ಯಾನ(Kannada) – 14.10.2021

 

ಪಕ್ಕದಲ್ಲಿಡು

 

“ನನ್ನ ಗದರಿಕೆಯನ್ನು ಕೇಳಿ ತಿರುಗಿಕೊಳ್ಳಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ ನನ್ನ ಮಾತುಗಳನ್ನು ನಿಮಗೆ ತಿಳಿಯಪಡಿಸುವೆನು." - ಜ್ಞಾನೋಕ್ತಿಗಳು 1:23

 

ನಾನು ಇತ್ತೀಚೆಗೆ ಕೇಳಿದ ಘಟನೆ ನನ್ನ ಹೃದಯವನ್ನು ಬೆಚ್ಚಿಬೀಳಿಸಿತು. ಒಂದು ಹಳ್ಳಿಯಲ್ಲಿ ಒಂದು ಕುಟುಂಬದೊಳಗೆ 3 ಮಕ್ಕಳಿದ್ದರು. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ. ತಂದೆ ಇಲ್ಲದ ಆ ಮಕ್ಕಳನ್ನು ಶಿಕ್ಷಕರಾಗಿದ್ದ ಆ ತಾಯಿ ಬಹಳ ಶ್ರದ್ಧೆಯಿಂದ ನೋಡಿಕೊಳ್ಳುತ್ತಿದ್ದರು. ಸಮಾಜದಲ್ಲಿ ಉತ್ತಮ ಮಾದರಿಯಾದ ಕುಟುಂಬವಾಗಿ ಆ ಕುಟುಂಬವಿತ್ತು. ಈ ಪರಿಸ್ಥಿತಿಯಲ್ಲಿ, 12 ನೇ ತರಗತಿ ಓದುತ್ತಿದ್ದ ಮಗ ಒಂದು ಹುಡುಗಿಯನ್ನು ಇಷ್ಟಪಟ್ಟನು. ಅವನೊಳಗೆ ತಪ್ಪು ಕಲ್ಪನೆಗಳು ಬೆಳೆದವು. ಒಂದು ದಿನ ಅದು ಉನ್ಮಾದವಾಗಿ ಮಾರ್ಪಟ್ಟು ಅವನ ಆಸೆ ಈಡೇರದ ಕಾರಣ ಅವನು ಅವಳನ್ನು ಕೊಂದು ಹಾಕಿದನು. ಇದರ ಫಲಿತಾಂಶ ಜೈಲುವಾಸ. ಅವಮಾನದಿಂದಾಗಿ ಒಡಹುಟ್ಟಿದ ಸಹೋದರಿಯರಿಬ್ಬರೂ ಆತ್ಮಹತ್ಯೆ ಮಾಡಿಕೊಂಡರು. ತಾಯಿ ಪ್ರಜ್ಞೆ ಕಳೆದುಕೊಂಡು ಎಲ್ಲವನ್ನು ಮರೆತು ಮನೋವ್ಯಾಧಿಗೊಳಗಾದರು. ಜೈಲಿನಲ್ಲಿ ಅವನನ್ನು ಭೇಟಿಯಾದ ಸುದ್ದಿಗಾರರ ಬಳಿ "ನನ್ನ ತಪ್ಪಿನಿಂದ ನನ್ನ ಕುಟುಂಬ ನಾಶವಾಯಿತು" ಎಂದು ಹೇಳಿ ಕಣ್ಣೀರು ಹಾಕಿದನು. ಕೊನೆಗೆ ಆತ ಕೂಡ ಆತ್ಮಹತ್ಯೆ ಮಾಡಿಕೊಂಡನು.

 

ಇದನ್ನು ಓದುತ್ತಿರುವ ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಈ ಜಗತ್ತಿನಲ್ಲಿ ಪಾಪ ಎಂದರೇನು? ಪರಿಶುದ್ಧತೆ ಎಂದರೇನು? ಅನೇಕರಿಗೆ ಅದು ತಿಳಿದಿಲ್ಲ. ಅದಕ್ಕಾಗಿಯೇ ಅನೇಕರು ಕುಡಿತ ಮತ್ತು ವ್ಯಭಿಚಾರದ ಪಾಪದಲ್ಲಿ ಬೀಳುತ್ತಾರೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನೋಡುತ್ತಾರೆ. ಅವರು ತಮ್ಮ ಜೀವನದಲ್ಲಿ ತಾವು ಕಂಡದ್ದನ್ನು ಪಾಪವೆಂದು ತಿಳಿಯದೆ ಅನ್ವಯಿಸುತ್ತಾರೆ. ಆದ್ದರಿಂದ ಅವರು ಪಾಪ ಮಾಡಿ ಪಾಪದಿಂದ ಮರಣದವರೆಗೂ ಹೋಗಿಬಿಡುತ್ತಾರೆ. ಯೇಸುಕ್ರಿಸ್ತನು ನಮ್ಮ ಎಲ್ಲಾ ಪಾಪಗಳನ್ನು ತನ್ನ ರಕ್ತದಿಂದ ತೊಳೆದು ನಮ್ಮನ್ನು ಪರಿಶುದ್ಧಗೊಳಿಸಿ ಪರಲೋಕಕ್ಕೆ ಕರೆದುಕೊಂಡು ಹೋಗುವುದಕ್ಕಾಗಿ ಶಿಲುಬೆಯಲ್ಲಿ ಮರಣಹೊಂದಿ ಮೂರನೆಯ ದಿನ ಜೀವಂತವಾಗಿ ಎದ್ದರು. ಅವರು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವುದು ಮಾತ್ರವಲ್ಲ, ಪರಲೋಕಕ್ಕೆ ಏರಿ ಹೋಗುವ ಮೊದಲು ನಾನು ಹೋಗಿ ನಿಮಗೊಂದು ಸಹಾಯಕನನ್ನು ಕಳುಹಿಸುತ್ತೇನೆ. ಆ ಸಹಾಯಕನಾದ ಪವಿತ್ರಾತ್ಮನು ಬಂದು ಯಾವುದು ಪಾಪ ಯಾವುದು ಪರಿಶುದ್ಧ ಎಂದು ನಮಗೆ ಜೊತೆಯಲ್ಲೇ ಇದ್ದು ನಮ್ಮನ್ನು ನಡೆಸುವಂತೆ ಅಂದರೆ ಪಾಪದ ಬಗ್ಗೆ, ನೀತಿಯ ಬಗ್ಗೆ, ನ್ಯಾಯ ತೀರ್ಪಿನ ಬಗ್ಗೆ ಲೋಕವನ್ನು ಖಂಡಿಸಿ ತಿಳಿಸಿಕೊಡುತ್ತಾರೆ. 

 

ನಾವು ಯೇಸುಕ್ರಿಸ್ತನನ್ನು ಅಂಗೀಕರಿಸುವಾಗ ಆತನು ನಮ್ಮ ಪಾಪಗಳನ್ನು ಕ್ಷಮಿಸುವುದಲ್ಲದೆ ನಮಗೆ ಪವಿತ್ರಾತ್ಮವನ್ನು ನೀಡುತ್ತಾರೆ. ಅವರು ನಮ್ಮನ್ನು ಪರಿಶುದ್ಧವಾದ ಮಾರ್ಗದಲ್ಲಿ ನಡೆಸುವುದಕ್ಕೋಸ್ಕರ ಯಾವುದು ಪಾಪ ಯಾವುದು ಪರಿಶುದ್ಧ ಎಂದು ನಮಗೆ ಹೇಳಿಕೊಡುತ್ತಾರೆ. ಅಂದರೆ ನಾವು ನಮ್ಮ ಗುರಿ ತಲುಪಲು ಪರಿಶುದ್ಧತೆಯನ್ನು ಬಯಸಿ, ಪಾಪವನ್ನು ಪಕ್ಕಕ್ಕಿಡಬೇಕು. ಅದರಂತೆ ನಾವು ನಡೆಯುವಾಗ ನಾವು ಪರಿಶುದ್ಧವಾಗಿ ಜೀವಿಸಲು ಸಾಧ್ಯ. ನಾವು ಯೇಸು ಕ್ರಿಸ್ತನ ಸಂಬಂಧದಲ್ಲಿ ನೆಲೆಗೊಳ್ಳುವಾಗ ನಮ್ಮೊಂದಿಗೆ ಆ ಪರಿಶುದ್ಧಾತ್ಮನು ಇದ್ದು ನಮ್ಮನ್ನು ಆಶೀರ್ವದಿಸುತ್ತಾರೆ. ಯೇಸು ಕ್ರಿಸ್ತನನ್ನು ನಾವು ಅಂಗೀಕರಿಸೋಣವಾ?

- P.V. ವಿಲಿಯಮ್ಸ್

 

ಪ್ರಾರ್ಥನಾ ಅಂಶ:

ಛತ್ತೀಸಗಡದಿಂದ ಬಂದು ನಮ್ಮೊಂದಿಗೆ ತರಬೇತಿಯಲ್ಲಿರುವ ಸೇವಕರು ಉತ್ತಮ ಆಧ್ಯಾತ್ಮಿಕ ನಾಯಕರಾಗಿ ಎದ್ದೇಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet