Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.10.2021
Share:

By Village Missionary Movement

Wednesday, 13-Oct-2021

ಧೈನಂದಿನ ಧ್ಯಾನ(Kannada) – 13.10.2021

 

ಒಳ್ಳೆಯ ಸ್ನೇಹಿತ

 

"ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು." - ಜ್ಞಾನೋಕ್ತಿ 27: 5

 

ಧೂಮಪಾನದ ಚಟ ಹೊಂದಿದ್ದ ಒಬ್ಬ ವ್ಯಕ್ತಿ ಒಂದು ಬಾರಿ ಸಿಗರೇಟ್ ಸೇದುತ್ತಿದ್ದಾಗ, ಇದ್ದಕ್ಕಿದ್ದಂತೆ ತಮ್ಮ ಶಾಲಾ ಸ್ನೇಹಿತನನ್ನು ನೋಡಿದರು. ನೋಡಿದ ಸಂಭ್ರಮ ಮತ್ತು ಸಂತೋಷದಲ್ಲಿ, "ನೀನೂ ಕೂಡ ಒಂದು ಸಿಗರೇಟ್ ಸೇದು" ಎಂದು ಹೇಳಿದರು. ಅದಕ್ಕೆ ಆ ಸ್ನೇಹಿತ "ನನಗೆ ಬೇಡ, ನಾನು ಧೂಮಪಾನ ಮಾಡುವುದಿಲ್ಲ" ಎಂದರು. ಇಬ್ಬರ ಮಾತುಗಳು ತಮ್ಮ ಶಾಲಾ ದಿನಗಳ ಕಡೆಗೆ ಹೋಯಿತು. ಸಂತೋಷದಿಂದ ಮಾತನಾಡಿದರು. ಈ ವ್ಯಕ್ತಿ ಅದರಲ್ಲಿ ಇನ್ನೊಂದು ಸಿಗರೇಟನ್ನು ಹೊತ್ತಿಸಿದ. ಇದನ್ನು ನೋಡಿದ ಅವನ ಸ್ನೇಹಿತ, “ಸ್ನೇಹಿತನೇ! ನೀನು ಈ ಸಿಗರೇಟನ್ನು ತೆಗೆದುಕೊಂಡು ನಿನ್ನ ಈ ಸುಂದರವಾದ ಕಾಟನ್ ಶರ್ಟ್ ಮೇಲೆ ಉಜ್ಜಿ ಆರಿಸಿಬಿಡು ನೋಡೋಣ” ಎಂದರು. ಅದಕ್ಕೆ ಅವರು, "ಎಲೈ ಮೂರ್ಖ! 1000 ರೂಪಾಯಿ ಕಾಟನ್ ಶರ್ಟ್ ತೂತು ಬಿದ್ದು ಬಿಡುತ್ತದೆ ನಿನಗೆ ಗೊತ್ತಿಲ್ವಾ?" ಎಂದು ಹೇಳಲು, ಆ ಗೆಳೆಯ, "ಗೆಳೆಯ, ನೀನು 1000 ರೂಪಾಯಿಗಳ ಬಗ್ಗೆ ಚಿಂತಿಸುತ್ತಿದ್ದೀಯ, ಆದರೆ ಬೆಲೆಕಟ್ಟಲಾಗದ ನಿನ್ನ ಅಮೂಲ್ಯವಾದ ಹೃದಯ, ನಿನ್ನ ಶ್ವಾಸಕೋಶ ಮತ್ತು ಇತರ ಅಂಗಗಳನ್ನು ಸಿಗರೇಟ್ ಸೇವನೆ ಮಾಡಿ ಹಾಳುಮಾಡುತ್ತಿದ್ದೀಯಲ್ಲಾ ಮೂರ್ಖ!" ಎಂದರು. ಆ ವ್ಯಕ್ತಿ ತುಂಬಾ ಯೋಚಿಸಿ ನೋಡಿದ.

 

ಪರಿಶುದ್ಧ ಗ್ರಂಥದಲ್ಲಿ ಸಮುವೇಲನೆಂಬ ಪ್ರವಾದಿ ಇಸ್ರಾಯೇಲ್ ಅರಸನಾದ ಸೌಲನ ತಪ್ಪನ್ನು ಎತ್ತಿ ತೋರಿಸುವುದನ್ನು 1 ಸಮುವೇಲ. 15 - ನೇ ಅಧ್ಯಾಯದಲ್ಲಿ ನೋಡುತ್ತೇವೆ. ಅಮಾಲೇಕ್ಯರನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದೆ ದೇವರು ಸಮುವೇಲನ ಮೂಲಕ ಸೌಲನಿಗೆ ಹೇಳಿದ್ದು. ಆದರೆ ಸೌಲನು ಮಾತ್ರ ಹಾಗೆ ಮಾಡದೇ ತನ್ನ ಇಚ್ಚೆಯಂತೆ ಕೊಬ್ಬಿದ ಕುರಿ ದನಗಳನ್ನು, ಕೆಲವು ವಸ್ತುಗಳನ್ನು ಬಿಟ್ಟು ಬಿಟ್ಟನು. ಈ ವಿಷಯ ಸಮುವೇಲನ ಗಮನಕ್ಕೆ ಬಂದಾಗ, ಸಮುವೇಲನು ಬಹಿರಂಗವಾಗಿ ಸೌಲನ ಬಳಿ, "ಕರ್ತನು ನಿಮ್ಮನ್ನು ಅರಸನಾಗಿರದಂತೆ ತಿರಸ್ಕರಿಸಿ ತಳ್ಳಿಬಿಟ್ಟಿದ್ದಾನೆ" (1 ಸಮು. 15:23). ಎಂದು ಹೇಳುವುದನ್ನು ನೋಡುತ್ತೇವೆ. ಸಮುವೇಲನು ಆ ಅಧ್ಯಾಯದುದ್ದಕ್ಕೂ ಸೌಲನನ್ನು ಖಂಡಿಸುವುದನ್ನು ಕಾಣಬಹುದು. ನಂತರ ಹೇಳಿಕೊಳ್ಳೋಣ, ಎಂದೆಲ್ಲಾ ಯೋಚಿಸದೆ ಬಹಿರಂಗವಾಗಿ ಖಂಡಿಸಿದರು.

 

ಸ್ನೇಹಿತರೇ! ಇಂದು ನಮ್ಮ ಪರಿಸ್ಥಿತಿ ಹೇಗಿದೆ? ನಾವು ಒಳ್ಳೆಯ ಸ್ನೇಹಿತರು ಮತ್ತು ನಿಜವಾದ ಸ್ನೇಹಿತರಾಗಬೇಕಾದರೆ ನಾವು ದೇವರ ವಾಕ್ಯದ ಪ್ರಕಾರ ನಡೆಯಲು ಪ್ರಯತ್ನಿಸೋಣ. ನಮ್ಮ ಸ್ನೇಹಿತನು ತಪ್ಪು ಮಾಡುವಾಗ ನಾವು ಸುಮ್ಮನೆ ನೋಡುತ್ತಿದ್ದರೆ ನಾವೇ ಅವರಿಗೆ ಹಳ್ಳ ತೋಡುವ ವೈರಿಯಾಗಿಬಿಡುತ್ತೇವೆ! ಈ ದಿನಗಳಲ್ಲಿ ಸ್ನೇಹಿತರೊಂದಿಗೆ ಹೆಚ್ಚು ಸಮಯ ಖರ್ಚು ಮಾಡಲು ಸಮಯ ಸಿಗುತ್ತಿದೆ. ನಾವು ಈ ಸಮಯವನ್ನು ಪ್ರಯೋಜನ ಮಾಡಿಕೊಳ್ಳೋಣ. ಸ್ನೇಹಿತ ನನ್ನನ್ನು ತಪ್ಪಾಗಿ ನೆನೆಸಿ ಬಿಡುತ್ತಾನೋ ಎಂದೆಲ್ಲಾ ಯೋಚಿಸದೆ ತಪ್ಪನ್ನು ಬಹಿರಂಗವಾಗಿ ಗದ್ದಿಸುವುದೇ ಸತ್ಯವೇದವು ತೋರಿಸುವ ಮಾರ್ಗ. ನಾವು ಒಳ್ಳೆಯ ಸ್ನೇಹಿತರಾಗಿರುತ್ತೇವೆ! ನಮಗೂ ಒಳ್ಳೆಯ ಸ್ನೇಹಿತರು ಸಿಗುತ್ತಾರೆ!

- T. ಶಂಕರರಾಜ್

    

ಪ್ರಾರ್ಥನಾ ಅಂಶ:

ಹರಿಯಾಣ ಮತ್ತು ಪಂಜಾಬ್‌ನಲ್ಲಿ ಸೇವೆ ಮಾಡಲು ಏಕೈಕ ದರ್ಶನವುಳ್ಳ ಸೇವಕರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al